ಮನೆಯಲ್ಲಿಯೇ ದಿಡೀರ್ ಎಂದು ಸ್ಪೆಷಲ್ ಪಡ್ಡು ಮಾಡುವುದು ಹೇಗೆ ಗೊತ್ತಾ?? ಎಲ್ಲರೂ ಪಡ್ಡು ಇಷ್ಟಪಡ್ತಾರೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಸ್ಪೆಷಲ್ ಪಡ್ಡು ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಸ್ಪೆಷಲ್ ಪಡ್ಡು ಮಾಡಲು ಬೇಕಾಗುವ ಸಾಮಗ್ರಿಗಳು: 2 ಲೋಟ ಅಕ್ಕಿ,ಅರ್ಧ ಲೋಟ ಉದ್ದಿನ ಬೇಳೆ, ಅರ್ಧ ಲೋಟ ಅಕ್ಕಿ ಹಿಟ್ಟು, ಸ್ವಲ್ಪ ಮೆಂತ್ಯ, 1 ಕ್ಯಾರಟ್,ಸ್ವಲ್ಪ ಕೊತ್ತಂಬರಿ ಸೊಪ್ಪು, 8 – 10 ಹಸಿಮೆಣಸಿನಕಾಯಿ,4 ಈರುಳ್ಳಿ, ಸ್ವಲ್ಪ ಎಣ್ಣೆ,ಸ್ವಲ್ಪ ತುಪ್ಪ, 1 ಚಮಚ ಸಕ್ಕರೆ,ರುಚಿಗೆ ತಕಷ್ಟು ಉಪ್ಪು, 1 ಚಮಚ ಜೀರಿಗೆ.

ಸ್ಪೆಷಲ್ ಪಡ್ಡು ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಗೆ ತೆಗೆದುಕೊಂಡ ಅಕ್ಕಿ, ಉದ್ದಿನ ಬೇಳೆ, ಮೆಂತ್ಯವನ್ನು ಹಾಕಿ ನೀರಿನಿಂದ 2 – 3 ಬಾರಿ ಚೆನ್ನಾಗಿ ತೊಳೆದು ಮತ್ತೆ ನೀರನ್ನು ಹಾಕಿ 5 – 6 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 7 – 8 ಗಂಟೆಗಳ ಕಾಲ ನೆನೆಯಲು ಬಿಡಿ.

ಮತ್ತೊಂದು ಕಡೆ ದೊಡ್ಡ ಪಾತ್ರೆ ರುಬ್ಬಿಕೊಂಡ ಹಿಟ್ಟು,ಅಕ್ಕಿ ಹಿಟ್ಟು,ಸಣ್ಣಗೆ ಹಚ್ಚಿದ ಈರುಳ್ಳಿ, ತುರಿದ ಕ್ಯಾರಟ್, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು, ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿ, ಜೀರಿಗೆ ಹಾಗೂ ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಪಡ್ಡು ತವಾವನ್ನು ಇಟ್ಟು ಕಾಯಲು ಬಿಡಿ. ಕಾದ ನಂತರ ಅದಕ್ಕೆ ತುಪ್ಪವನ್ನು ಹಾಕಿಕೊಳ್ಳಿ. ನಂತರ ಹಿಟ್ಟನ್ನು ಹಾಕಿಕೊಳ್ಳಿ. ನಂತರ ಅದರ ಮೇಲೆ ಎಣ್ಣೆಯನ್ನು ಹಾಕಿ ಎರಡು ಬದಿಯಲ್ಲಿ ಬೇಯಿಸಿಕೊಂಡರೆ ಸ್ಪೆಷಲ್ ಪಡ್ಡು ಸವಿಯಲು ಸಿದ್ದ.

Facebook Comments

Post Author: Ravi Yadav