ಪ್ರೇಕ್ಷಕರ ಸಿಂಪತಿ ಪಡೆದುಕೊಂಡು ಗೆಲ್ಲುವ ನೆಚ್ಚಿನ ಸ್ಪರ್ದಿ ಯಾಗಿರುವ ಪ್ರಶಾಂತ್ ರವರ ಬಿಗ್ ಬಾಸ್ ಸಂಭಾವನೆ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ರವರು ಆರಂಭದ ದಿನಗಳಲ್ಲಿ ಬಹುತೇಕ ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ ಎಂದರೆ ತಪ್ಪಾಗಲಾರದು. ಆದರೆ ಮನೆಯಲ್ಲಿ ಹಲವಾರು ವಾರಗಳು ಕಳೆದ ಬಳಿಕ ಕೆಲವೊಂದು ಜನರ ಜೊತೆ ಕೆಲವೊಂದು ವಿಚಾರಕ್ಕೆ ನಡೆದ ಚರ್ಚೆಗಳು ಅದನ್ನು ಚರ್ಚೆಯೆಂದು ಹೇಳುವ ಬದಲು ವಾದ ಎಂದು ಹೇಳಿದರೆ ಸರಿ ಇರುತ್ತದೆ. ಈ ವಾದಗಳ ಮೂಲಕ ಪ್ರಶಾಂತ್ ಸಂಬರ್ಗಿ ರವರು ಸದ್ದು ಮಾಡಲು ಆರಂಭಿಸಿದರು.

ಆದರೆ ಈ ವಾದ ಗಳು ಆರಂಭದಲ್ಲಿ ಬಹುತೇಕ ಜನರಿಗೆ ಇಷ್ಟವಾಗಲಿಲ್ಲ, ಮನೆಯ ಮಂದಿಗೆ ಕೂಡ ಇದು ಸಾಕಷ್ಟು ಸವಾಲುಗಳನ್ನು ತಂದಿತ್ತು, ಆದರೆ ದಿನೇ ದಿನೇ ಪ್ರಶಾಂತ್ ರವರು ಮಾಡುತ್ತಿದ್ದ ವಾದಗಳು ಸರಿ ಇದೆ ಆದರೆ ಅವರು ಹೇಳುತ್ತಿರುವ ರೀತಿ ಮಾತ್ರ ತಪ್ಪಿದೆ ಎಂಬ ಮಾತುಗಳು ಕೇಳಿ ಬರಲು ಆರಂಭಿಸಿದವು, ಆದರೆ ಇದೇ ಸಮಯದಲ್ಲಿ ಮನೆಯ ಬಹುತೇಕ ಸದಸ್ಯರು ಸೇರಿಕೊಂಡು ಒಮ್ಮೆಲೆ ಪ್ರತಿ ವಿಚಾರದಲ್ಲೂ ಕೂಡಾ ಪ್ರಶಾಂತ್ ಸಂಬರ್ಗಿ ರವರನ್ನು ಟಾರ್ಗೆಟ್ ಮಾಡುತ್ತಿದ್ದ ಕಾರಣ ಕ್ರಮೇಣ ಪ್ರಶಾಂತ್ ಸಂಬರ ಮೇಲೆ ಸಿಂಪತಿ ಕೂಡ ಕಾಣಿಸಿ ಕೊಂಡಿತ್ತು.

ಅದೇ ಕಾರಣಕ್ಕಾಗಿ ರಾಜೀವ್ ರವರ ಜೊತೆ ನಾಮಿನೇಟ್ ಆಗಿದ್ದರು ಕೂಡ ಪ್ರಶಾಂತ್ ಸಂಬರ್ಗಿ ರವರು ಸೇಫ್ ಆಗಿದ್ದಾರೆ. ಹೀಗೆ ಸಿಂಪತಿಯಿಂದ ಹಾಗೂ ತಮ್ಮ ನೇರ ನೇರವಾದ ಮಾತುಗಳಿಂದ ಪ್ರೇಕ್ಷಕರ ಮನಗೆದ್ದ ಮನೆಯಲ್ಲಿ ಉಳಿದುಕೊಂಡು ಗೆಲ್ಲುವ ನೆಚ್ಚಿನ ಸ್ಪರ್ದಿ ಎಂಬ ಸ್ಥಾನ ಪಡೆದು ಕೊಂಡಿರುವ ಪ್ರಶಾಂತ ಸಂಬರ್ಗಿ ರವರ ಸಂಭಾವನೆ ಎಷ್ಟು ಎಂಬುದನ್ನು ನಾವು ನೋಡುವುದಾದರೇ, ಸ್ನೇಹಿತರೇ ಕಿರುತೆರೆಯ ಮೂಲಗಳ ಪ್ರಕಾರ ಪ್ರಶಾಂತ ಸಂಬರ್ಗಿ ರವರು ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಮಾಡಿಕೊಂಡ ಮಾತುಕತೆಯಂತೆ ವಾರಕ್ಕೆ 40000 ರೂಪಾಯಿಗಳನ್ನು ಸಂಭಾವನೆಯನ್ನು ಪಡೆಯುತ್ತಾರೆ ಎಂಬುದು ತಿಳಿದು ಬಂದಿದೆ. ಇನ್ನು ಇವರ ಆಟದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯ ಬೇಡಿ.

Facebook Comments

Post Author: Ravi Yadav