ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೊನೆಗೂ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟು ಅರವಿಂದ್ ಗೆ ಗ್ರಹಚಾರ ಬಿಡಿಸಿದ ಸುದೀಪ್ ರವರು ಹೇಳಿದ್ದೇನು ಗೊತ್ತಾ??

3

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ವಾರಗಳಿಂದ ಬಿಗ್ ಬಾಸ್ ಮನೆ ಅಕ್ಷರ ಸಹ ಗೊಂದಲಗಳ ಗೂಡಾಗಿದೆ ಎಂದರೆ ತಪ್ಪಾಗಲಾರದು. ಇದಕ್ಕೆಲ್ಲ ಕಾರಣ ಪ್ರತಿ ವಾರವೂ ಕೂಡ ಮನೆಯಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಸನ್ನಿವೇಶಗಳನ್ನು ಚರ್ಚೆ ಮಾಡಿ ವಾರದ ಕೊನೆಯಲ್ಲಿ ಅದಕ್ಕೆ ಅಂತ್ಯ ಆಡುತ್ತಿದ್ದವರು ಸುದೀಪ್ ರವರು. ಆದರೆ ಕಳೆದ ಕೆಲವು ವಾರಗಳಿಂದ ಕಿಚ್ಚ ಸುದೀಪ್ ರವರು ಮನೆಯಲ್ಲಿ ಕಾಣಿಸಿಕೊಳ್ಳದ ಕಾರಣ ಬಹುತೇಕ ವಿಚಾರಗಳು ಹಾಗೇ ಉಳಿದುಕೊಂಡು ಹೋಗಿವೆ.

ಅಲ್ಲದೆ ಇದೇ ಸಮಯದಲ್ಲಿ ಹಲವಾರು ಸ್ಪರ್ಧಿಗಳು ತಮ್ಮ ಮನಸ್ಸಿಗೆ ಬಂದಂತೆ ನಿರ್ಧಾರ ತೆಗೆದು ಕೊಂಡು ತಮಗಿಷ್ಟ ಬಂದಂತೆ ಆಟ ಆಡುತ್ತಿದ್ದಾರೆ ಎಂದು ಪ್ರಶಾಂತ ಸಂಬರ್ಗಿ ಹಾಗೂ ಪ್ರಿಯಾಂಕಾ ರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರು ಕೂಡ ಇದೇ ವಿಚಾರವಾಗಿ ಹಲವಾರು ಸ್ಪರ್ದಿಗಳು ಕ್ರೀಡಾ ಸ್ಪೂರ್ತಿ ಮರೆತಿದ್ದಾರೆ ಎಂದು ಹೇಳಿದ್ದಾರೆ, ಅದರಲ್ಲಿಯೂ ಮಂಜು ಹಾಗೂ ಅರವಿಂದ್ ರವರು ನಡೆದುಕೊಳ್ಳುತ್ತಿರುವ ರೀತಿ ಯಾರಿಗೂ ಇಷ್ಟವಾಗುತ್ತಿಲ್ಲ. ಅದರಲ್ಲಿಯೂ ಟ್ರ್ಯಾಕ್ ವಿಚಾರದಲ್ಲಿ ನಡೆದ ಘಟನೆ ಪ್ರೇಕ್ಷಕರಿಗೂ ಕೂಡ ಇಷ್ಟವಾಗಿಲ್ಲ.

ಅದೇ ಕಾರಣಕ್ಕಾಗಿ ಪ್ರಿಯಾಂಕ ಹಾಗೂ ಪ್ರಶಾಂತ ಸಂಬರ್ಗ್ಗಿ ರವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ, ಇಷ್ಟು ಸಾಲದು ಎಂಬಂತೆ ಇದನ್ನೇ ಆಧಾರವಾಗಿಟ್ಟುಕೊಂಡು ಎಲ್ಲರೂ ಪ್ರಶಾಂತ್ ರವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅದೇ ಕಾರಣಕ್ಕಾಗಿ ಇರಬೇಕು ಇದೀಗ ಮಾತನಾಡಿರುವ ಕಿಚ್ಚ ಸುದೀಪ್ ರವರು ಬಿಗ್ ಬಾಸ್ ಮನೆಗೆ ಚಿತ್ರೀಕರಣಕ್ಕೆ ತೆರಳದೆ ಹೋದರೂ ಕೂಡ ಸ್ಪರ್ಧಿಗಳ ಜೊತೆ ಮಾತನಾಡಿ ಅರವಿಂದ್ ರವರಿಗೆ ಟ್ರ್ಯಾಕ್ ಕುರಿತು, ಒಂದೇ ವಾಕ್ಯದಲ್ಲಿ ನೀವು ಟ್ರ್ಯಾಕಿನಲ್ಲಿ ಬಾಲನ್ನು ತಳ್ಳಬಾರದು ಎಂದಿದ್ದರೇ ನಾವು ಟ್ರ್ಯಾಕ್ ಹಾಕುವ ಅಗತ್ಯ ಏನಿತ್ತು ಎಂದು ಒಂದೇ ಪ್ರಶ್ನೆಯ ಮೂಲಕ ಪ್ರಶಾಂತ್ ಹಾಗೂ ಪ್ರಿಯಾಂಕಾ ರವರು ಮಾಡಿದ್ದು ಸರಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದು ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದ್ದು ಎಲ್ಲರೂ ಎಂದಿನಂತೆ ಕಿಚ್ಚ ಸುದೀಪ್ ಅವರನ್ನು ಹಾಡಿ ಹೊಗಳುತ್ತಿದ್ದಾರೆ