ಕೊಟ್ಟ ಮಾತು ಉಳಿಸಿಕೊಂಡ ಸಮಂತ, ಅಭಿಮಾನಿಯ ಕಷ್ಟಕ್ಕೆ ಸ್ಪಂದಿಸಿ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿ ಹಲವಾರು ವರ್ಷಗಳಿಂದ ಗುರುತಿಸಿ ಕೊಂಡಿರುವ ಸಮಂತ ಅಕ್ಕಿನೇನಿ ರವರು ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಕೇವಲ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ತಾವು ದುಡಿದ ಕೋಟಿ ಕೋಟಿ ಹಣದಿಂದ ಹಲವಾರು ಮಕ್ಕಳ ಜೀವನವನ್ನು ಬದಲಾಯಿಸಿರುವ ಸಮಂತ ಅವರು ಇಂದಿಗೂ ಕೂಡ ತಮ್ಮ ಪ್ರತ್ಯುಷಾ ಸಂಸ್ಥೆಯ ಮೂಲಕ ನೂರಾರು ಮಕ್ಕಳಿಗೆ ಹೈದರಾಬಾದ್ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಂಡು ಅರ್ಧ ಹಣವನ್ನು ಯಾವುದೇ ರೀತಿಯ ಆಪರೇಷನ್ ಗಳಿಗೆ ನೀಡಿ ಉಳಿದ ಹಣವನ್ನು ಇನ್ನಿತರ ಸೆಲೆಬ್ರಿಟಿಗಳಿಂದ ಅಥವಾ ಆಸ್ಪತ್ರೆ ಕಡೆಯಿಂದ ಕೊಡಿಸಿ ಬಡಮಕ್ಕಳಿಗೆ ಆಧಾರ ಸ್ತಂಭವಾಗಿ ನಿಂತಿದ್ದಾರೆ.

ಕೇವಲ ನಟನೆಯ ಮೂಲಕವಷ್ಟೇ ಅಲ್ಲದೆ ತಮ್ಮ ಸಾಮಾಜಿಕ ಕಳಕಳಿ ಮೆರೆಯುವಂತಹ ಹಲವಾರು ಕಾರ್ಯಗಳಿಂದ ತೆಲುಗಿನಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದು ಕೊಂಡಿರುವ ಸಮಂತಾ ರವರು ಅದ್ಭುತ ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಗಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ ಮತ್ತೊಮ್ಮೆ ದೊಡ್ಡತನ ಮೆರೆದಿರುವ ಸಮಂತ ರವರು, ಕಳೆದ ಬಾರಿ ಒಂದು ಕಾರ್ಯಕ್ರಮ ನಡೆಸುವಾಗ ಕವಿತಾ ಎಂಬ ಆಟೋ ಡ್ರೈವರ್ ತಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಅಂದರೆ ಸಾಲ ತೀರಿಸಲು ಆಟೋ ಓಡಿಸುತ್ತಿರುವುದಾಗಿ ತಿಳಿಸಿದ್ದರು, ಆದರೆ ಇರುವ ಸಾಲವನ್ನು ಆಟೋ ಓಡಿಸಿ ತೀರಿಸಲು ಸಾಧ್ಯವಿಲ್ಲ ಎಂದಾಗ ಸಮಂತಾ ರವರು ನಿನಗೆ ಸಹಾಯ ಮಾಡುತ್ತೇನೆ ಎಂದಿದ್ದರು. ಅದರಂತೆ ಹನ್ನೆರಡುವರೆ ಲಕ್ಷದ ಕಾರನ್ನು ಇದೀಗ ಕವಿತಾ ರವರಿಗೆ ನೀಡಿ ಕ್ಯಾಬ್ ಓಡಿಸುವ ಮೂಲಕ ನಿನ್ನ ಎಲ್ಲಾ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊ ಎಂದು ಅಭಿಮಾನಿಯ ಜೀವನಕ್ಕೆ ದಾರಿದೀಪವಾಗಿದ್ದಾರೆ. ಆಕೆಗಿರುವ ಕೆಲವು ಲಕ್ಷಗಳನ್ನು ನೀಡಿ ಇವರು ಸಾಲ ತೀರಿಸಿ ಬಿಡಬಹುದಾಗಿತ್ತು ಆದರೆ ದುಬಾರಿ ಕಾರು ನೀಡುವ ಮೂಲಕ ಸಾಲ ತೀರಿಸಿದ ಬಳಿಕವೂ ಕೂಡ ಅವರ ಜೀವನ ಚೆನ್ನಾಗಿರುವಂತೆ ಇವರು ಆಲೋಚನೆ ಮಾಡಿದ್ದಾರೆ.

Facebook Comments

Post Author: Ravi Yadav