ರೋಹಿತ್, ಕೊಹ್ಲಿ ಹಾಗೂ ಧೋನಿ ಸ್ಥಾನವನ್ನು ತುಂಬಬಲ್ಲ ಮೂವರು ಯುವ ಆಟಗಾರರು ಯಾರು ಗೊತ್ತೇ??

ರೋಹಿತ್, ಕೊಹ್ಲಿ ಹಾಗೂ ಧೋನಿ ಸ್ಥಾನವನ್ನು ತುಂಬಬಲ್ಲ ಮೂವರು ಯುವ ಆಟಗಾರರು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ಈ ಲೇಖನದಲ್ಲಿ, ನಾವು ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿ ಮುಂದುವರಿಯಲಿರುವ ಭಾರತೀಯ ಕ್ರಿಕೆಟ್ ತಂಡದ ಕೆಲವು ಆಟಗಾರರ ಬಗ್ಗೆ ಹೇಳಲಿದ್ದೇವೆ, ಈ ಎಲ್ಲ ಆಟಗಾರರಲ್ಲೂ ಇಂದಿನ ಕ್ರಿಕೆಟ್ ಲೆಜೆಂಡ್ ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ಕಾರ್ಯಕ್ಷಮತೆ ಕಂಡು ಬರುತ್ತಿದೆ. ಆದ ಕಾರಣ ಈ ಮೂವರು ಆಟಗಾರರು ಮುಂದಿನ ದಿನಗಳಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ರವರ ಸ್ಥಾನಗಳನ್ನು ತುಂಬಬಹುದು ಎನ್ನಲಾಗುತ್ತಿದೆ.

ಮೊದಲನೆಯದಾಗಿ ಪೃಥ್ವಿ ಶಾ: ಇತ್ತೀಚೆಗೆ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಕ್ರಿಕೆಟ್ ಪ್ರಾರಂಭಿಸಿದ ಪೃಥ್ವಿ ಶಾ, ಉತ್ತಮ ಓಪನರ್ ಬ್ಯಾಟ್ಸ್‌ಮನ್ ಮತ್ತು ಯುವ ಆಟಗಾರ. ಭವಿಷ್ಯದಲ್ಲಿ, ರೋಹಿತ್ ಶರ್ಮಾ ಬದಲಿಗೆ ಪೃಥ್ವಿ ಶಾ ಆಡುವುದನ್ನು ನಾವು ನೋಡಬಹುದು. ಪೃಥ್ವಿ ಅವರ ಆಟವನ್ನು ಜನರು ಯಾವಾಗಲೂ ಪ್ರಶಂಸಿಸಿದ್ದಾರೆ. ಕೆಲವೊಂದು ತಿಂಗಳುಗಳ ಕಾಲ ಫಾರ್ಮ್ ಕಳೆದುಕೊಂಡಿದ್ದರು ಕೂಡ ಇತ್ತೀಚಿಗೆ ಫಾರ್ಮ್ ಗೆ ಮರಳಿ ವಾಪಸ್ಸಾಗಿದ್ದಾರೆ.

ಇನ್ನು ಎರಡನೆಯದಾಗಿ ಶ್ರೇಯಸ್ ಅಯ್ಯರ್ ಭಾರತೀಯ ಕ್ರಿಕೆಟ್ ತಂಡದ ಯುವ ಮತ್ತು ಅದ್ಭುತ ಆಟಗಾರ ಶ್ರೇಯಸ್ ಅಯ್ಯರ್ ಭವಿಷ್ಯದಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಉತ್ತಮ ಆಟಗಾರನಾಗಬಹುದು. ಶ್ರೇಯಾಸ್ ಅಯ್ಯರ್ ನಾಯಕತ್ವ ಕೌಶಲ್ಯ ಮತ್ತು ಉತ್ತಮ ಬ್ಯಾಟಿಂಗ್ ಅನುಭವವನ್ನು ಹೊಂದಿದ್ದು ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಸಬಹುದು ಮತ್ತು ಭವಿಷ್ಯದಲ್ಲಿ ವಿರಾಟ್ ಕೊಹ್ಲಿ ಆಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದರೆ ತಪ್ಪಾಗಲಾರದು.

ಇನ್ನು ಮೂರನೆಯದಾಗಿ ರಿಷಭ್ ಪಂತ್ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಯಾರಿಗೆ ಗೊತ್ತಿಲ್ಲ ಹೇಳಿ. ಮಹೇಂದ್ರ ಸಿಂಗ್ ಧೋನಿ ಅವರ ಸ್ಥಾನದಲ್ಲಿ ರಿಷಭ್ ಪಂತ್ ಅವರಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಅವಕಾಶ ನೀಡಲಾಗುತ್ತಿದ್ದು, ಭವಿಷ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಂತೆ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ರಿಷಭ್ ಪಂತ್ ರವರನ್ನು ನೇಮಿಸಬಹುದು. ಸ್ನೇಹಿತರೇ, ನಿಮ್ಮ ಅನಿಸಿಕೆಯ ಪ್ರಕಾರ ಭವಿಷ್ಯದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಅವರನ್ನು ಬದಲಿಸಲು ಯಾವ ಆಟಗಾರ ಸಮರ್ಥನೆಂದು ನಮಗೆ ತಿಳಿಸಿ.