ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ನ್ಯೂಸ್ ಅಯೋಧ್ಯೆ ನಂತರ ಕಾಶಿ ವಿಶ್ವನಾಥ್ ದೇವಾಲಯದ ವಿಚಾರದಲ್ಲಿ ಮೊದಲ ಗೆಲುವು ! ಏನು ಗೊತ್ತಾ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಶ್ರೀ ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಇದೀಗ ಭವ್ಯವಾದ ರಾಮ ಮಂದಿರ ನಿರ್ಮಾಣ ವಾಗುತ್ತಿದೆ. ನೂರಾರು ವರ್ಷಗಳ ಕನಸು ಇದೀಗ ನನಸಾಗುವ ಸಂದರ್ಭ ಎದುರಾಗಿದೆ. ಸುಪ್ರೀಂ ಆದೇಶದಂತೆ ಜನರಿಂದ ದೇಣಿಗೆ ಸಂಗ್ರಹ ಮಾಡಿ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ಯಾರೋ ಒಬ್ಬರು ಅಥವಾ ಇಬ್ಬರು ಕನಸಾಗಿ ಇರಲಿಲ್ಲ ಬದಲಾಗಿ ಕೋಟ್ಯಂತರ ಜನರ ಕನಸಾಗಿತ್ತು.

ಹಾಗೆಂದು ಇಷ್ಟಕ್ಕೆ ಸುಮ್ಮನೆ ಕೂರುವುದಿಲ್ಲ ಎಂದು ಮೊದಲಿನಿಂದಲೂ ಮಾತುಗಳು ಕೇಳಿ ಬರುತ್ತಿದ್ದವು. ಯಾಕೆಂದರೆ ಶ್ರೀ ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಾಗುತ್ತಿದೆ, ಆದರೆ ಕಾಶಿ ವಿಶ್ವನಾಥ ದೇವಾಲಯದಲ್ಲಿ ಯಾವಾಗ ನಮಗೆ ವಶಪಡಿಸಿಕೊಂಡಿರುವ ಮಸೀದಿಯ ಭೂಮಿ ಸಿಗುವುದು ಎಂಬ ಮಾತುಗಳು ಕೇಳಿ ಬಂದಿದ್ದವು. ಅಯೋಧ್ಯೆ ನಂತರ ಕಾಶಿ ವಿಶ್ವನಾಥ ದೇವಾಲಯದ ಭೂಮಿಯನ್ನು ಮರಳಿ ನೀಡುವಂತೆ ಆದೇಶಿಸಲು ಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡಿ ಮನವಿಯನ್ನು ಸಲ್ಲಿಸಲಾಗಿತ್ತು.

ವಕೀಲರಾದ ವಿಜಯ ಶಂಕರ್ ಅವರು ಸಲ್ಲಿಸಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ನ್ಯಾಯಾಲಯ ಗ್ಯಾಂವಾಪಿ ಮಸೀದಿಯ ಸಂಕೀರ್ಣವನ್ನು ಸಂಪೂರ್ಣ ಸಮೀಕ್ಷೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣ ಮಂಡಳಿಗೆ ಅನುಮತಿ ನೀಡಲಾಗಿದ್ದು, 1664 ರಲ್ಲಿ ಔರಂಗಜೇಬ್ ಈ ಮಸೀದಿಯನ್ನು ನಿರ್ಮಿಸಿದ್ದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಆದರೆ ಇದು ಕಾಶಿ ವಿಶ್ವನಾಥ ದೇವಾಲಯಕ್ಕೆ ಸೇರಿದ ಜಾಗ ಎಂದು ಮನವಿ ಸಲ್ಲಿಸಲಾಗಿತ್ತು. ಇದೀಗ ಈ ಸಮೀಕ್ಷೆಯನ್ನು ನಡೆಸಲು ಅನುಮತಿ ನೀಡಲಾಗಿದ್ದು, ಸಂಪೂರ್ಣ ವೆಚ್ಚವನ್ನು ಉತ್ತರ ಪ್ರದೇಶ ರಾಜ್ಯ ಭರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ತೀರ್ಪು ಹೊರ ಬಂದ ತಕ್ಷಣ ಇದು ಕಾಶಿ ವಿಶ್ವನಾಥ ದೇಗುಲದ ವಿಚಾರದಲ್ಲಿ ಮೊದಲ ಗೆಲುವು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.