ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಯುವರತ್ನ ಅಮೆಜಾನ್ನಲ್ಲಿ ಬಿಡುಗಡೆಯಾಗುವ ಹಿಂದೆ ಇರುವ ಕಾಣದ ಕೈ ಯಾರದು ಗೊತ್ತಾ?? ಕನ್ನಡ ಚಿತ್ರಗಳಿಗೆ ಬೆಲೆಯೇ ಇಲ್ಲವೇ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಯುವ ರತ್ನ ಸಿನಿಮಾ ಬಿಡುಗಡೆಯಾದ ಕೇವಲ ಎಂಟು ದಿನಗಳಲ್ಲಿ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ, ಚಿತ್ರಕ್ಕೆ ಉತ್ತಮ ಬೆಲೆ ನೀಡಿ ಅಮೆಜಾನ್ ಪ್ರೈಮ್ ಖರೀದಿ ಮಾಡಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಆದರೆ ಇಷ್ಟು ಬೇಗನೇ ಚಿತ್ರವನ್ನು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಲು ಇರುವ ಕಾರಣವನ್ನು ನಾವು ನೋಡಿದರೆ ನಿಜಕ್ಕೂ ಬೇಸರವೆನಿಸುತ್ತದೆ.

ಹೌದು ಸ್ನೇಹಿತರೇ, ಸಾಮಾನ್ಯವಾಗಿ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಥಿಯೇಟರ್ಗಳ ಸಮಸ್ಯೆ ಕಾಣಿಸುತ್ತದೆ ಅದರಲ್ಲಿಯೂ ಇತರ ಭಾಷೆಗಳ ನಟರ ಚಿತ್ರಗಳು ರಿಲೀಸ್ ಆದರೆ ಖಂಡಿತ ಥಿಯೇಟರ್ಗಳ ಸಮಸ್ಯೆ ಹೆಚ್ಚಾಗುತ್ತದೆ. ಆದರೆ ಕನ್ನಡದ ಟಾಪ್ ನಟರಿಗೆ ಈ ಸಮಸ್ಯೆಗಳು ಹೆಚ್ಚಾಗಿ ಕಾಣಿಸುತ್ತಿರಲಿಲ್ಲ, ಯಾಕೆಂದರೆ ಟಾಪ್ ನಟರ ಸಿನಿಮಾಗಳನ್ನು ಜನರು ಹೆಚ್ಚು ನೋಡುತ್ತಾರೆ ಎಂಬ ಕಾರಣದಿಂದ ಥಿಯೇಟರ್ಗಳಲ್ಲಿ ಕನ್ನಡ ಚಿತ್ರಗಳಿಗೆ ಅವಕಾಶ ನೀಡಲಾಗುತ್ತಿತ್ತು.

ಆದರೆ ತೆಲುಗು ಚಿತ್ರರಂಗದ ಪವನ್ ಕಲ್ಯಾಣ್ ರವರ ಬಹು ನಿರೀಕ್ಷಿತ ವಕೀಲ್ ಸಾಹೇಬ ಚಿತ್ರ ಇದೀಗ ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ವಿತರಣೆ ಹಕ್ಕನ್ನು ಹೊಂಬಾಳೆ ಫಿಲಂಸ್ ಪಡೆದು ಕೊಂಡಿದೆ, ಇಲ್ಲಿ ನಾವು ಗಮನಿಸಬೇಕಾದ ವಿಷಯ ಏನೆಂದರೆ ಯುವರತ್ನ ಸಿನಿಮಾವನ್ನು ಇದೇ ಸಂಸ್ಥೆ ನಿರ್ಮಾಪನೆ ಮಾಡಿದೆ. ಹೇಗಿದ್ದರೂ ರಾಬರ್ಟ್ ಸಿನಿಮಾ ಎತ್ತಂಗಡಿ ಮಾಡಲು ಸಾಧ್ಯವಿಲ್ಲ, ಅಭಿಮಾನಿಗಳು ಒಪ್ಪುತ್ತಿಲ್ಲ. ಆದಕಾರಣ ಹೊಂಬಾಳೆ ಫಿಲಂಸ್ ಪವನ್ ಕಲ್ಯಾಣ್ ರವರ ಸಿನಿಮಾಗೆ ಥಿಯೇಟರ್ಗಳಲ್ಲಿ ಅವಕಾಶ ನೀಡಲು ತನ್ನ ಸಿನಿಮಾವನ್ನು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಲು ನಿರ್ಧಾರ ಮಾಡಿ ಎಲ್ಲ ಥಿಯೇಟರ್ ಗಳನ್ನು ಪವನ್ ಕಲ್ಯಾಣ್ ರವರ ನೀಡಲಾಗಿದೆ ಎಂಬ ಮಾಹಿತಿ ಗಾಂಧಿ ನಗರದಿಂದ ತಿಳಿದುಬಂದಿದೆ.

Get real time updates directly on you device, subscribe now.