ಕರುನಾಡ ವಾಣಿ
ಇದು ನಿಮ್ಮ ಧ್ವನಿ

ರವಿ ಬೆಳಗೆರೆಯವರ ವೀಕೆಂಡ್ ವಿತ್ ರಮೇಶ್ ಎಪಿಸೋಡ್ ಡಿಲೀಟ್ ಆಗಲು ಕಾರಣವೇನು ಗೊತ್ತಾ??

6

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಪ್ರತಿಯೊಬ್ಬರು ಇಷ್ಟಪಡುವಂತಹ ಕಾರ್ಯಕ್ರಮ ಇದ್ದರೆ ಅದು ನಮ್ಮ ನಿಮ್ಮೆಲ್ಲರ ನೆಚ್ಚಿನ ರಮೇಶ್ ಅರವಿಂದ್ ಅವರು ನಡೆಸಿ ಕೊಡುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ. ಬಹುತೇಕ ಕಾರ್ಯಕ್ರಮಗಳ ಕುರಿತು ಒಂದಲ್ಲ ಒಂದು ರೀತಿಯಲ್ಲಿ ಒಬ್ಬರಲ್ಲ ಒಬ್ಬರು ವ್ಯತಿರಿಕ್ತ ಪ್ರತಿಕ್ರಿಯೆಗಳನ್ನು ನೀಡುತ್ತಾ ಇರುತ್ತಾರೆ. ಆದರೆ ಯಾರೂ ಕೂಡ ವ್ಯತಿರಿಕ್ತ ಪ್ರತಿಕ್ರಿಯೆಯನ್ನು ನೀಡದ ಕಾರ್ಯಕ್ರಮ ಎಂದರೆ ಅದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮಾತ್ರ.

ಜೀವನದಲ್ಲಿ ಸಾಧನೆ ಮಾಡಿರುವ ಹಲವಾರು ಸಾಧಕರನ್ನು ಕರೆದು ಕೊಂಡು ಅವರ ಜೀವನದ ಕುರಿತು ಹಾಗೂ ಅವರು ಜೀವನದಲ್ಲಿ ನಡೆದು ಬಂದ ಹಾದಿಯ ಕುರಿತು ತಿಳಿಸುತ್ತಾ ಪ್ರತಿಯೊಬ್ಬರಿಗೂ ಜೀವನದ ಮೌಲ್ಯಗಳ ಕುರಿತು ತಿಳಿ ಸಿಕೊಡುವ ಈ ಕಾರ್ಯಕ್ರಮದಲ್ಲಿ ಹಲವಾರು ಸಾಧಕರು ಸಾಧಕರ ಕುರ್ಚಿಯಲ್ಲಿ ಕುಳಿತುಕೊಂಡು ತಮ್ಮ ಜೀವನದ ಕುರಿತು ತಿಳಿಸಿದ್ದಾರೆ.

ಇನ್ನು ಇದೇ ರೀತಿ ಕನ್ನಡದ ಖ್ಯಾತ ಬರಹಗಾರರಾಗಿದ್ದ ರವಿ ಬೆಳಗೆರೆಯವರ ಕಾರ್ಯಕ್ರಮ ಕೂಡ ತಯಾರಾಗಿತ್ತು. ಆದರೆ ರವಿ ಬೆಳಗೆರೆಯವರ ಸಂಪೂರ್ಣ ಇಂಟರ್ವ್ಯೂ ಕಾರ್ಯಕ್ರಮ ಡಿಲೀಟ್ ಆಗಿತ್ತು, ಇದಕ್ಕೆ ಕಾರಣ ಏನು ಎಂಬುದನ್ನು ನಾವು ಗಮನಿಸುವುದಾದರೆ ಸ್ನೇಹಿತರೇ ರವಿ ಬೆಳಗೆರೆಯವರ ಕಾರ್ಯಕ್ರಮ ಬಹಳ ಅದ್ಭುತವಾಗಿ ಮೂಡಿ ಬಂದಿತ್ತು ಆದರೆ ಕೊನೆಯ ಸಮಯದಲ್ಲಿ ಮುಂಬೈ ಜಿ ವಾಹಿನಿ ಆಫೀಸಿನಿಂದ ಒಂದು ಕರೆ ಬರುತ್ತದೆ. ಆ ಕರೆಯಲ್ಲಿ ಒಂದು ಕಾಲದಲ್ಲಿ ಚಾನೆಲ್ನ ಕುರಿತು ರವಿ ಬೆಳಗೆರೆ ಅವರ ಬರುವ ವ್ಯತಿರಿಕ್ತವಾಗಿ ಬರೆದಿದ್ದಾರೆ ಕೂಡಲೇ ಇವರ ಎಪಿಸೋಡುಗಳನ್ನು ಡಿಲೀಟ್ ಮಾಡಬೇಕು ಹಾಗು ಇನ್ನು ಮುಂದೆ ಪ್ರಸಾರ ಮಾಡಬಾರದು ಎಂದು ಹೇಳಲಾಗುತ್ತದೆ, ಈ ಕರೆಯ ನಂತರ ರವಿ ಬೆಳಗೆರೆ ಅವರ ಸಂಪೂರ್ಣ ಕಾರ್ಯಕ್ರಮ ಡಿಲೀಟ್ ಮಾಡಲಾಗುತ್ತದೆ.