ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಆರ್ಸಿಬಿ ತಂಡಕ್ಕೆ ಕೊನೆಗೂ ಸಿಕ್ತು ಗುಡ್ ನ್ಯೂಸ್ ! ನಿಟ್ಟುಸಿರು ಬಿಟ್ಟ ಆರ್ಸಿಬಿ ಅಭಿಮಾನಿಗಳು. ಏನು ಗೊತ್ತಾ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇದೀಗ ದೇಶದ ಎಲ್ಲೆಡೆ ಕೋರೋಣ ಎರಡನೇ ಅಲೆಯ ನಡುವೆಯೂ ಕೂಡ ಬಿಸಿಸಿಐ ಸಂಸ್ಥೆಯು ಈ ಬಾರಿಯ ಐಪಿಎಲ್ ಟೂರ್ನಿ ಯನ್ನು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಸಲು ಸಕಲ ಸಿದ್ಧತೆಗಳನ್ನು ನಡೆಸಿದೆ ಅಂದು ಕೊಂಡಂತೆ ಎಲ್ಲಾ ಸರಿಯಾಗಿ ನಡೆದಲ್ಲಿ ಇನ್ನು ಬೆರಳೆಣಿಕೆಯ ದಿನಗಳಲ್ಲಿ ಐಪಿಎಲ್ ಟೂರ್ನಿಯ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಆರ್ಸಿಬಿ ತಂಡ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಎದುರಾಳಿ ಯಾಗಲಿದ್ದು, ಮೊದಲ ಗೆಲುವಿಗಾಗಿ ಎರಡು ತಂಡಗಳು ಸಕಲ ಸಿದ್ಧತೆಗಳನ್ನು ನಡೆಸಿದೆ

ಇಂತಹ ಸಂದರ್ಭದಲ್ಲಿ ಕಳೆದ ಕೆಲವೇ ಕೆಲವು ದಿನಗಳ ಹಿಂದೆ ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭರವಸೆ ಮೂಡಿಸಿರುವ ಆರ್ಸಿಬಿ ತಂಡದ ಆರಂಭಿಕ ಆಟಗಾರ ದೇವದತ್ತ ಪಡಿಕಲ್ ರವರ ಕೊರೊನ ಟೆಸ್ಟ್ ಪಾಸಿಟಿವ್ ರಿಪೋರ್ಟ್ ಬಂದಿತ್ತು. ಆದ ಕಾರಣ ನಿಜಕ್ಕೂ ಆರ್ಸಿಬಿ ಅಭಿಮಾನಿಗಳಲ್ಲಿ ಕೊಂಚ ಅಸಮಾಧಾನ ಕಾಣಿಸಿಕೊಂಡಿತ್ತು.

ಆದರೆ ಇದೀಗ ಇತ್ತೀಚೆಗೆ ನಡೆಸಿರುವ ಕೊರೊನ ಟೆಸ್ಟ್ನಲ್ಲಿ ದೇವದತ್ತ ಪಡಿಕಲ್ ರವರ ರಿಪೋರ್ಟ್ ನೆಗೆಟಿವ್ ಬಂದಿದ್ದು, ಇನ್ನು ಎರಡು ಟೆಸ್ಟುಗಳು ಬಾಕಿ ಇದ್ದು ಇವೆರಡರಲ್ಲಿ ಒಂದು ರಿಪೋರ್ಟ್ ನೆಗೆಟಿವ್ ಬಂದರೂ ಕೂಡ ಆರ್ ಸಿ ಬಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಹಾಗೂ ಅಭ್ಯಾಸ ಆರಂಭಿಸಿ ಮೊದಲನೇ ಪಂದ್ಯದಲ್ಲಿ ಮುಂಬೈ ತಂಡದ ವಿರುದ್ಧ ಕಾಣಿಸಿ ಕೊಳ್ಳಲಿದ್ದಾರೆ. ಬೇಗ ಗುಣಮುಖರಾಗಿ ತಂಡ ಸೇರಿಕೊಳ್ಳಲಿ ಎಂಬುದು ಆರ್ಸಿಬಿ ಅಭಿಮಾನಿಗಳ ಆಶಯವಾಗಿದೆ.

Get real time updates directly on you device, subscribe now.