ದಿಡೀರನೆ ಮಾಡುವ ಹುಳಿ ಅನ್ನ ರೆಸಿಪಿ ನಿಮಗೆ ಗೊತ್ತೇ?? ದಿಡೀರ್ ಎಂದು ಮಾಡಿದರೂ ಅದ್ಬುತ ರುಚಿ.

ದಿಡೀರನೆ ಮಾಡುವ ಹುಳಿ ಅನ್ನ ರೆಸಿಪಿ ನಿಮಗೆ ಗೊತ್ತೇ?? ದಿಡೀರ್ ಎಂದು ಮಾಡಿದರೂ ಅದ್ಬುತ ರುಚಿ.

ನಮಸ್ಕಾರ ಸ್ನೇಹಿತರೇ, ಇಂದು ನಾವು ದಿಡೀರನೆ ಮಾಡುವ ಹುಳಿ ಅನ್ನ ರೆಸಿಪಿಯನ್ನು ನಿಮಗೆ ತಿಳಿಸಲಾಗಿದೆ. ಹುಳಿ ಅನ್ನ ಮಾಡಲು ಬೇಕಾಗುವ ಪದಾರ್ಥಗಳು: 3 ಚಮಚ ಕಡ್ಲೆಬೇಳೆ, ಕಾಲು ಚಮಚ ಮೆಂತ್ಯ, 2 ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, 4 – 5 ಬ್ಯಾಡಿಗೆ ಮೆಣಸಿನಕಾಯಿ, ನಿಂಬೆಹಣ್ಣು ಗಾತ್ರದ ಹುಣಸೆ ಹಣ್ಣಿನ ರಸ, ಸ್ವಲ್ಪ ಎಣ್ಣೆ, 10 – 12 ಎಸಳು ಬೆಳ್ಳುಳ್ಳಿ, 2 ಒಣಮೆಣಸಿನಕಾಯಿ, ಸ್ವಲ್ಪ ಕರಿಬೇವು, 2 ಚಮಚ ಕಡಲೇಕಾಯಿ ಬೀಜ, 1 ಚಮಚ ಬಿಳಿ ಎಳ್ಳು, ಸ್ವಲ್ಪ ಕೊಬ್ಬರಿ, ಸ್ವಲ್ಪ ಬೆಲ್ಲ, ಸ್ವಲ್ಪ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಗೊಜ್ಜಿಗೆ ಬೇಕಾಗುವಷ್ಟು ಅನ್ನ.

ಹುಳಿ ಅನ್ನ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚ ಕಡ್ಲೆಬೇಳೆ, ಅರ್ಧ ಚಮಚ ಮೆಂತ್ಯ, 1 ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, 4 – 5 ಬ್ಯಾಡಿಗೆ ಮೆಣಸಿನಕಾಯಿಯನ್ನು ಹಾಕಿ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ತದನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ 1 ಚಮಚ ಸಾಸಿವೆ, 10 – 12 ಎಸಳು ಬೆಳ್ಳುಳ್ಳಿ, 2 ಒಣಮೆಣಸಿನಕಾಯಿ, ಸ್ವಲ್ಪ ಕರಿಬೇವನ್ನು ಹಾಕಿ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ 1 ಚಮಚ ಕಡ್ಲೆಬೇಳೆ, 2 ಚಮಚ ಕಡಲೆಕಾಯಿಬೀಜವನ್ನು ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಚಮಚ ಬಿಳಿ ಎಳ್ಳನ್ನು ಹಾಕಿ ಪ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಪುಡಿಮಾಡಿಕೊಂಡ ಪೌಡರ್, ಸ್ವಲ್ಪ ಕೊಬ್ಬರಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹುಣಸೆ ಹಣ್ಣಿನ ರಸ ವನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಬೆಲ್ಲ, ಸ್ವಲ್ಪ ಅರಿಶಿನ ಪುಡಿ, ರುಚಿಗೆ ತಕಷ್ಟು ಉಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಇದಕ್ಕೆ ಮಾಡಿಕೊಂಡ ಅನ್ನ ಹಾಕಿ ಮಿಕ್ಸ್ ಮಾಡಿದರೆ ದಿಡೀರ್ ಹುಳಿ ಅನ್ನ ಸವಿಯಲು ಸಿದ್ಧ.