ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮುಂಬೈ ಪಂದ್ಯಕ್ಕೆ ಆರ್ಸಿಬಿ ತಂಡದಲ್ಲಿ ಸ್ಥಾನ ಪಡೆಯುವ 11 ಆಟಗಾರರು ಯಾರ್ಯಾರು ಗೊತ್ತೇ?? ಮುಂಬೈ ತಂಡ ಹೇಗಿರಲಿದೆ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಐಪಿಎಲ್ ಟೂರ್ನಿ ಗೆ ವರ್ಣರಂಜಿತ ಆರಂಭ ನೀಡಲು ಎಲ್ಲಾ ಸಿದ್ಧತೆಗಳು ನಡೆದಿವೆ, ಆರ್ಸಿಬಿ ತಂಡವು ನಿರೀಕ್ಷೆಯ ಬೆಟ್ಟವನ್ನು ಹೊತ್ತುಕೊಂಡು ಈ ಬಾರಿಯ ಐಪಿಎಲ್ ಟೂರ್ನಿಗೆ ತಯಾರಿ ನಡೆಸುತ್ತಿದೆ. ಇನ್ನು ಮೊದಲನೇ ಪಂದ್ಯದ್ದಲ್ಲಿ ಆರ್ಸಿಬಿ ತಂಡ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಎದುರಾಳಿಗಳಾಗಿ ಕಾಣಿಸಿಕೊಳ್ಳುತ್ತಿದ್ದು ಮೊದಲ ಪಂದ್ಯ ಗೆಲ್ಲುವುಗಾಗಿ ಸಕಲ ಸಿದ್ಧತೆಗಳನ್ನು ನಡೆಸಿವೆ‌. ಆರ್ಸಿಬಿ ತಂಡ ಬಹಳ ಸಮತೋಲನದಿಂದ ಕೂಡಿರುವ ಕಾರಣ ಈ ಬಾರಿ ಆರ್ಸಿಬಿ ತಂಡ ಮತ್ತಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.

ಇನ್ನು ಮೊದಲ ಪಂದ್ಯದಲ್ಲಿಯೇ ಗೆಲುವಿನ ಮೂಲಕ ಟೂರ್ನಿಯನ್ನು ಆರಂಭಿಸಲು ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ತಂಡಗಳು ಯಾವ ರೀತಿಯಲ್ಲಿ ತಮ್ಮ ಹನ್ನೊಂದರ ಬಳಗವನ್ನು ರಚಿಸಬೇಕು ಎಂಬುದರ ಕುರಿತು ಚರ್ಚೆ ನಡೆಸುತ್ತೀವೆ, ಅದರಲ್ಲಿಯೂ ಕಳೆದ ಸೀಸನ್ ಗಳಲ್ಲಿ ಹನ್ನೊಂದರ ಬಳಗದಲ್ಲಿ ಆಲ್-ರೌಂಡರ್ ಹಾಗೂ ಕೊನೆಯ ಓವರ್ ಗಳಲ್ಲಿ ಬೋಲಿಂಗ್ ಮಾಡ ಬಹುದಾದ ಬೌಲರ್ಗಳ ಸಮಸ್ಯೆಗಳನ್ನು ಹೊಂದಿದ್ದ ಆರ್ಸಿಬಿ ತಂಡ ಈ ಬಾರಿ ಹನ್ನೊಂದರ ಬಳಗದ ಕುರಿತು ಸಾಕಷ್ಟು ಚರ್ಚೆ ನಡೆಸುತ್ತಿದೆ.

ಇಂತಹ ಸಂದರ್ಭದಲ್ಲಿ ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಯಾವ ರೀತಿ ತಮ್ಮ ಹನ್ನೊಂದರ ಬಳಗವನ್ನು ರಚಿಸಬಹುದು ಎಂಬ ಕುತೂಹಲ ಅಭಿಮಾನಿಗಳನ್ನು ಕೂಡ ಬಿಟ್ಟಿಲ್ಲ, ಅದೇ ಕಾರಣಕ್ಕಾಗಿ ಇದೀಗ ಸ್ಪೋರ್ಟ್ಸ್ ಖೆಡ್ಡಾ ಕ್ರಿಕೆಟ್ ಸಂಸ್ಥೆಯ ಕ್ರಿಕೆಟ್ ವಿಶ್ಲೇಷಕರು ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮೊದಲ ಐಪಿಎಲ್ ಪಂದ್ಯದಲ್ಲಿ ಯಾವ ರೀತಿ ತಮ್ಮ ಹನ್ನೊಂದರ ಬಳಗವನ್ನು ರಚಿಸಬಹುದು ಎಂಬುದರ ಕುರಿತು ಚರ್ಚೆ ನಡೆಸಿ ಸಂಭಾವ್ಯ ತಂಡವನ್ನು ಬಿಡುಗಡೆ ಮಾಡಿದ್ದಾರೆ, ಎರಡು ತಂಡಗಳು ಈ ಕೆಳಗಿನಂತೆ ಇದ್ದು ಈ ತಂಡಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಹಾಗೂ ನಿಮ್ಮದೇ ಆದ ಸಂಭಾವ್ಯ ತಂಡ ರಚಿಸಿ ಕಮೆಂಟ್ ಮಾಡಿ.

ಸ್ನೇಹಿತರೆ ನಾವು ಮೊದಲಿಗೆ ಮುಂಬೈ ತಂಡದ ಕುರಿತು ಮಾತನಾಡುವುದಾದರೆ ಕಳೆದ ಬಾರಿಯ ಐಪಿಎಲ್ ನಲ್ಲಿ ಬಹುತೇಕ ಬಾರಿ ಮೂರನೇ ಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದ ರೋಹಿತ್ ಶರ್ಮಾ ಈ ಬಾರಿ ಆರಂಭಿಕ ಆಟಗಾರರಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ, ಇನ್ನು ಕಳೆದ ಬಾರಿ ಟೂರ್ನಿಯಲ್ಲಿ ಆಟವಾಡಲು ಅವಕಾಶ ಪಡೆಯದ ಕ್ರಿಸ್ಲಿನ್ ರವರು ಈ ಬಾರಿ ಮೊದಲ ಪಂದ್ಯದಲ್ಲಿಯೇ ಅವಕಾಶ ಪಡೆಯಲಿದ್ದಾರೆ, ಇನ್ನು ಮೂರನೇ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್, ನಾಲ್ಕನೇ ಕ್ರಮಾಂಕದಲ್ಲಿ ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರಿತ್ ಬುಮ್ರಾ, ನಾಥನ್ ಕೌಲ್ಟರ್ ರವರು ಸ್ಥಾನ ಪಡೆಯಲಿದ್ದಾರೆ.

ಇನ್ನು ನಾವು ಆರ್ಸಿಬಿ ತಂಡದ ಕುರಿತು ಮಾತನಾಡುವುದಾದರೆ ಸ್ನೇಹಿತರೇ ದೇವದತ್ತ ಪಡಿಕಲ್ ರವರು ಕೊರೋನಾ ಪಾಸಿಟಿವ್ ರಿಪೋರ್ಟ್ ಪಡೆದು ಕೊಂಡಿರುವ ಕಾರಣ ಮೊದಲ ಪಂದ್ಯದಲ್ಲಿ ಇವರು ದೂರ ಉಳಿಯಲಿದ್ದಾರೆ. ಆದಕಾರಣ ಕ್ಯಾಪ್ಟನ್ ಕಿಂಗ್ ಕೊಹ್ಲಿ ಅವರ ಜೊತೆ ಮೊಹಮ್ಮದ್ ಅಜರುದ್ದಿನ್ ರವರು ಆರಂಭಿಕ ಆಟಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ, ಇನ್ನು ಎಬಿ ಡಿವಿಲಿಯರ್ಸ್ ರವರು ಮೂರನೇ ಕ್ರಮಾಂಕದಲ್ಲಿ ಕಾಣಿಸಿಕೊಂಡರೇ ನಾಲ್ಕನೇ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ರವರಿಗೆ ಅವಕಾಶ ನೀಡಲಾಗುತ್ತದೆ,

ಇನ್ನು ಮೊದಲ ವೇಗದ ಆಲ್-ರೌಂಡರ್ ಆಗಿ ಡೆನ್ ಕ್ರಿಶ್ಚಿಯನ್, ಹಾಗೂ ಮೊದಲ ಸ್ಪಿನರ್ ಆಲ್-ರೌಂಡರ್ ಆಗಿ ವಾಷಿಂಗ್ಟನ್ ಸುಂದರ್ ಅವರು ಕಾಣಿಸಿಕೊಳ್ಳಲಿದ್ದಾರೆ, ಇನ್ನು ನಾಲ್ಕು ಸಂಪೂರ್ಣ ಬೌಲರ್ಗಳಿಗೆ ಮಣೆ ಹಾಕಲು ನಿರ್ಧಾರ ಮಾಡಲಾಗಿದ್ದು ಸ್ಪಿನರ್ ಆಗಿ ಯುಜ್ವೇಂದ್ರ ಚಾಹಲ್ ರವರು ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮೂರು ವೇಗದ ಬೌಲರ್ ಗಳಿಗೆ ಮಣೆ ಹಾಕಲು ನಿರ್ಧಾರ ಮಾಡಲಾಗಿದ್ದು, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಕೈಲ್ ಜೇಮೀಸನ್ ರವರು ಆರ್ಸಿಬಿ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಈ ತಂಡಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಹಾಗೂ ನಿಮ್ಮದೇ ಆದ ಸಂಭಾವ್ಯ ತಂಡ ರಚಿಸಿ ಕಮೆಂಟ್ ಮಾಡಿ

Get real time updates directly on you device, subscribe now.