ಪ್ರಶಾಂತ್ ಸಂಬರ್ಗಿ ರವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಬಿಗ್ ಬಾಸ್ ! ತಡೆಯಲು ಯಾರಿಂದಲೂ ಸಾಧ್ಯವಿಲ್ಲ !

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರಶಾಂತ್ ಸಂಬರ್ಗಿ ರವರು ಈಗಾಗಲೇ ನಾಲ್ಕು ವಾರಗಳನ್ನು ಕಳೆದಿದ್ದಾರೆ. ಈ ನಾಲ್ಕು ವಾರಗಳಲ್ಲಿ ಸುಳ್ಳು, ಆರೋಪ, ತಾಳ್ಮೆ, ಕೋಪ, ವಾಗ್ವಾದ, ಭಾವನಾತ್ಮಕತೆ, ಹೀಗೆ ಎಲ್ಲಾ ರೀತಿಯ ಭಾವನೆಗಳನ್ನು ಪ್ರಶಾಂತ ಸಂಬರ್ಗಿ ರವರು ವ್ಯಕ್ತಪಡಿಸಿದ್ದಾರೆ. ಆದರೆ ಮನೆಯಲ್ಲಿ ಬಹುತೇಕ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರಶಾಂತ್ ಸಂಬರ್ಗಿ ರವರು ಹಲವಾರು ವಿಚಾರಗಳಲ್ಲಿ ಮನೆಯ ಸದಸ್ಯರ ನಿರ್ಧಾರದ ವಿರುದ್ಧ ಮಾತನಾಡುವುದು ಸಾಮಾನ್ಯ.

ಆದರೆ ಹಲವಾರು ಬಾರಿ ಪ್ರಶಾಂತ ಸಂಬರ್ಗಿ ರವರು ಉತ್ತಮ ನಿರ್ಧಾರ ಕೈಗೊಂಡರು ಕೂಡ ಅದು ತಪ್ಪು ಎಂದು ಬಿಂಬಿಸಲಾಗುತ್ತಿದೆ ಎಂಬ ಅಭಿಪ್ರಾಯಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದೆ. ಇದೇ ಸಮಯದಲ್ಲಿ ಮನೆಯಲ್ಲಿಯೂ ಕೂಡ ಪ್ರಶಾಂತ ರವರು ಏನೇ ಮಾಡಲು ಹೋದರೂ ಹಲವಾರು ಸ್ಪರ್ಧಿಗಳು ಅಡ್ಡಗಾಲು ಹಾಕುತ್ತಿದ್ದಾರೆ. ಈ ಬಾರಿ ಹೆಚ್ಚಿನ ಸ್ಪರ್ಧಿಗಳು ಬಹಳ ಆಲೋಚನೆ ಮಾಡಿ ಪ್ರತಿ ಹೆಜ್ಜೆಯನ್ನು ಇಡುತ್ತಿರುವ ಕಾರಣ ಮನೆಯಲ್ಲಿ ಇಲ್ಲಿಯವರೆಗೂ ಟಾಸ್ಕ್ ಬಿಟ್ಟು ಬೇರೆ ಏನು ಹೇಳಿಕೊಳ್ಳುವಂತಹ ಘಟನೆಗಳು ನಡೆದಿಲ್ಲ,

ಪ್ರಶಾಂತ್ ಸಂಬರ್ಗಿ ರವರು ಸ್ವಲ್ಪ ಕಿರಿಕ್ ಆರಂಭ ಮಾಡಬಹುದು ಎಂಬ ಸಮಯದಲ್ಲಿ ಎಲ್ಲರೂ ಸೇರಿ ಪ್ರಶಾಂತ್ ರವರ ಬಾಯಿಗೆ ಬೀಗ ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಶಾಂತ್ ರವರ ಆಪ್ತ ಸ್ನೇಹಿತ ಚಕ್ರವರ್ತಿ ಚಂದ್ರಚೂಡ್ ರವರು ಮನೆಗೆ ಹೋಗಿರುವುದು ಹಾಗೂ ಮೊದಲ ಸಭೆಯಲ್ಲಿ ಎಲ್ಲರಿಗೂ ಕಡಕ್ ಆಗಿ ಮಾತನಾಡಿರುವುದು ನಿಜಕ್ಕೂ ಮನೆಯಲ್ಲಿ ಮತ್ತಷ್ಟು ವಿವಾದ ಸೃಷ್ಟಿಸುವ ಸೂಚನೆಗಳು ನೀಡಿವೆ, ಒಂದು ವೇಳೆ ಇವರು ಪ್ರಶಾಂತ್ ಸಂಬರ್ಗಿ ರವರ ಚಕ್ರವರ್ತಿ ಚಂದ್ರಚೂಡ್ ನಿಂತುಕೊಂಡರೇ ವಾಗ್ವಾದ ನೋಡಬಹುದು ಅಥವಾ ಇವರು ಪ್ರಶಾಂತ್ ರವರ ಜೊತೆ ಸೇರಿಕೊಂಡು ಇಡೀ ಮನೆಯವರ ಜೊತೆ ತಿರುಗಿಬಿದ್ದರೆ ಅದು ಖಂಡಿತ ಪ್ರಥಮ್ ರವರ ಸರ್ವಾಧಿಕಾರಿ ಎಪಿಸೋಡ್ ಗಳನ್ನು ನೆನಪು ಮಾಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

Post Author: Ravi Yadav