1 ತಿಂಗಳಾದರೂ ಕೆಡದ ಹಳ್ಳಿ ಶೈಲಿಯ ಗೊಡ್ಡು ಖಾರವನ್ನು ಮಾಡುವುದು ಹೇಗೆ ಗೊತ್ತೇ??

1 ತಿಂಗಳಾದರೂ ಕೆಡದ ಹಳ್ಳಿ ಶೈಲಿಯ ಗೊಡ್ಡು ಖಾರವನ್ನು ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು 1 ತಿಂಗಳಾದರೂ ಕೆಡದ ಹಳ್ಳಿ ಶೈಲಿಯ ಗೊಡ್ಡು ಖಾರ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಗೊಡ್ಡು ಖಾರ ಮಾಡಲು ಬೇಕಾಗುವ ಪದಾರ್ಥಗಳು: 15 ಒಣಮೆಣಸಿನಕಾಯಿ, 15 ಮಣ್ ಕಟ್ ಮೆಣಸಿನಕಾಯಿ, 10 ಬ್ಯಾಡಿಗೆ ಮೆಣಸಿನಕಾಯಿ, 50 ಗ್ರಾಂ ಹುಣಸೆಹಣ್ಣು, ಅರ್ಧ ಈರುಳ್ಳಿ, 1 ಹಿಡಿ ಕೊತ್ತಂಬರಿ ಸೊಪ್ಪು, 1 ಹಿಡಿ ಪುದಿನ, ಸ್ವಲ್ಪ ಕರಿಬೇವು, 2 ಗಡ್ಡೆ ಬೆಳ್ಳುಳ್ಳಿ, 1 ಚಮಚ ಬೆಲ್ಲ, 1 ಚಮಚ ತೆಂಗಿನ ಕಾಯಿತುರಿ, 1 ಚಮಚ ಎಣ್ಣೆ, 2 ಚಮಚ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು.

ಗೊಡ್ಡು ಖಾರ ಮಾಡುವ ವಿಧಾನ: ಮೊದಲಿಗೆ ತೆಗೆದುಕೊಂಡ ಹುಣಸೆಹಣ್ಣನ್ನು ನೀರಿನಿಂದ ತೊಳೆದುಕೊಳ್ಳಿ. ಮತ್ತೆ ನೀರನ್ನು ಹಾಕಿ 5 – 10 ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆತೆಗೆದುಕೊಂಡ 3 ರೀತಿಯ ಮೆಣಸಿನಕಾಯಿ ಹಾಗೂ 1 ಚಮಚದಷ್ಟು ಎಣ್ಣೆಯನ್ನು ಹಾಕಿ 4 – 5 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಒಂದು ತಟ್ಟೆಗೆ ಹಾಕಿಕೊಳ್ಳಿ. ನಂತರ ಅದೇ ಬಾಣಲಿಗೆ ಸಣ್ಣಗೆ ಹಚ್ಚಿದ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ.

ನಂತರ ಒಂದು ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಮೆಣಸಿನಕಾಯಿಯನ್ನು ಹಾಕಿ ತರಿತರಿಯಾಗಿ ಪುಡಿಮಾಡಿಕೊಳ್ಳಿ. ನಂತರ ಇದೇ ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಈರುಳ್ಳಿ, ಬೆಳ್ಳುಳ್ಳಿ, 1 ಚಮಚ ತೆಂಗಿನಕಾಯಿತುರಿ, ಬೆಲ್ಲ, ಜೀರಿಗೆ, ಸ್ವಲ್ಪ ಕರಿಬೇವು, ಕೊತ್ತಂಬರಿ ಸೊಪ್ಪು, ಪುದಿನಾ, ರುಚಿಗೆ ತಕ್ಕಷ್ಟು ಉಪ್ಪು, ಹುಣಸೆ ಹಣ್ಣು ಹಾಗೂ ಹುಣಸೆಹಣ್ಣಿನ ರಸವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅವಶ್ಯಕತೆ ಇದ್ದರೆ ಸ್ವಲ್ಪ ನೀರನ್ನು ಸಹ ಹಾಕಿಕೊಂಡು ನುಣ್ಣಗೆ ರುಬ್ಬಿಕೊಂಡರೆ ಹಳ್ಳಿ ಶೈಲಿಯ ಗೊಡ್ಡು ಖಾರ ಸವಿಯಲು ಸಿದ್ಧ.