ವಿರಾಟ್ ಬದಲು, ಆರಂಭಿಕರಾಗಿ ಆರ್ಸಿಬಿಯಲ್ಲಿ ಈತ ಅಖಾಡಕ್ಕೆ ಇಳಿದರೇ ದೊಡ್ಡ ಮೊತ್ತ ಪಕ್ಕ ! ಯಾರು ಗೊತ್ತಾ??

ವಿರಾಟ್ ಬದಲು, ಆರಂಭಿಕರಾಗಿ ಆರ್ಸಿಬಿಯಲ್ಲಿ ಈತ ಅಖಾಡಕ್ಕೆ ಇಳಿದರೇ ದೊಡ್ಡ ಮೊತ್ತ ಪಕ್ಕ ! ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ವಿರಾಟ್ ಕೊಹ್ಲಿ ರವರು ಆರಂಭಿಕರಾಗಿ ಯಶಸ್ಸು ಕಂಡಿದ್ದರು, ಇದಾದ ಬಳಿಕ ಅಧಿಕೃತ ಘೋಷಣೆ ಯನ್ನು ಮಾಡಿದ ವಿರಾಟ್ ಕೊಹ್ಲಿ ರವರು ಮುಂದಿನ ಐಪಿಎಲ್ ಎಲ್ಲಿಯೂ ಕೂಡ ತಾನೇ ಆರಂಭಿಕರಾಗಿ ಕಾಣಿಸುತ್ತೇನೆ ಹಾಗೂ ದೇವದತ್ತ ಪಡಿಕಲ್ ರವರ ಜೊತೆ ಇನಿಂಗ್ಸ್ ಆರಂಭಿಸುತ್ತೇನೆ ಎಂಬುದನ್ನು ಖಚಿತಪಡಿಸಿದ್ದರು.

ಆದರೆ ವಿರಾಟ್ ಕೊಹ್ಲಿ ರವರು ಆರಂಭಿಕರಾಗಿ ಕಣಕ್ಕಿಳಿದರೇ, ಮೂರನೇ ಕ್ರಮಾಂಕಕ್ಕೆ ಎಬಿ ಡಿವಿಲಿಯರ್ಸ್ ರವರು ಬಡ್ತಿ ಪಡೆಯ ಬೇಕಾಗುತ್ತದೆ, ಆದರೆ ಎಬಿ ಡಿವಿಲಿಯರ್ಸ್ ರವರು ಯಾವುದೇ ಕ್ರಮಾಂಕದಲ್ಲಿ ಕೂಡ ಬ್ಯಾಟಿಂಗ್ ಮಾಡಬಹುದಾದರೂ ಕೂಡ ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೇ ಕೊನೆಯ ಓವರ್ ಗಳಲ್ಲಿ ಬಹಳ ಸುಲಭವಾಗಿ ಮ್ಯಾಚ್ ಫಿನಿಷ್ ಮಾಡಲಿದ್ದಾರೆ. ಆದ ಕಾರಣ ವಿರಾಟ್ ಕೊಹ್ಲಿ ರವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಇಂತಹ ಸಂದರ್ಭದಲ್ಲಿ ಆರಂಭಿಕರಾಗಿ ಬಹಳ ಬಲಾಡ್ಯ ಆಟಗಾರ ಕಣಕ್ಕೆ ಇಳಿಯಬೇಕು ಎಂಬ ಲೆಕ್ಕಾಚಾರ ಇರುವ ಕಾರಣ ವಿರಾಟ್ ಕೊಹ್ಲಿ ರವರ ಬದಲು ಆಸ್ಟ್ರೇಲಿಯಾ ತಂಡದ ಆಟಗಾರ ಗ್ಲೇನ್ ಮ್ಯಾಕ್ಸ್ವೆಲ್ ರವರು ಕಣಕ್ಕಿಳಿದರೆ, ಆರ್ಸಿಬಿ ದೊಡ್ಡ ಮೊತ್ತ ಕಲೆ ಹಾಕಬಹುದಾಗಿದೆ, ಈಗಾಗಲೇ ವಿವಿಧ ಟಿ ಟ್ವೆಂಟಿ ಸರಣಿಗಳಲ್ಲಿ ಗ್ಲೇನ್ ಮ್ಯಾಕ್ಸ್ವೆಲ್ ರವರು ಆರಂಭಿಕರಾಗಿ ಕಣಕ್ಕಿಳಿದು ಯಶಸ್ಸು ಕಂಡಿರುವ ಕಾರಣ ಇವರು ಆರಂಭಿಕರಾದರೇ ಒಳಿತು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸುವುದನ್ನು ಮರೆಯಬೇಡಿ