ರಾತ್ರಿ ಉಳಿದ ಅನ್ನದಿಂದ ಮುಂಜಾನೆ ತಿಂಡಿಗೆ ಗರಿ ಗರಿಯಾದ ದೋಸೆ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ರಾತ್ರಿಯಲ್ಲಿ ಅನ್ನ ಉಳಿಯುವುದು ವಿಶೇಷವಾದ ವಿಷಯವೇನಲ್ಲ, ಎಷ್ಟೇ ಸರಿಯಾಗಿ ಅಳತೇ ಇಟ್ಟು ಮಾಡಿದರೂ ಕೂಡ ರಾತ್ರಿ ಅನ್ನ ಸಾಮಾನ್ಯವಾಗಿ ಉಳಿದು ಬಿಡುತ್ತದೆ, ಕೆಲವೊಮ್ಮೆ ಹೊರಗಡೆ ತಿಂಡಿಗಳ ಪ್ರಭಾವದಿಂದ ಮಾಡಿರುವ ಅನ್ನ ಉಳಿದು ಹೋಗುವುದು ಸಾಮಾನ್ಯ. ಇನ್ನು ಈ ರೀತಿಯ ಅನ್ನವನ್ನು ಬಹುತೇಕ ಜನರು ವ್ಯರ್ಥ ಮಾಡುತ್ತಾರೆ, ಆದ ಕಾರಣ ರಾತ್ರಿ ಉಳಿದ ಅನ್ನದಿಂದ ಮುಂಜಾನೆ ತಿಂಡಿಗೆ ಗರಿ ಗರಿಯಾದ ದೋಸೆ ಮಾಡುವುದು ಹೇಗೆ ಎಂಬುದನ್ನು ಇನ್ನು ನಾವು ತಿಳಿಸಿ ಕೊಡುತ್ತೇವೆ ಕೇಳಿ. ನಿಮ್ಮ ಅನುಕೂಲತೆಗಾಗಿ ವಿಡಿಯೋ ಕೂಡ ಹಾಕಲಾಗಿದ್ದು ಒಮ್ಮೆ ನೋಡಿ ಮನೆಯಲ್ಲಿ ಟ್ರೈ ಮಾಡಿ ಹೇಗಿದೆ ಎಂದು ಹೇಳುವುದನ್ನು ಮರೆಯಬೇಡಿ

ದೋಸೆ ಮಾಡಲು ಬೇಕಾಗುವ ಪದಾರ್ಥಗಳು: ಒಂದು ಬಟ್ಟಲು ಉಳಿದಿರುವ ಅನ್ನ, ಮುಕ್ಕಾಲು ಬಟ್ಟಲು ರವೆ, ಮುಕ್ಕಾಲು ಬಟ್ಟಲು ಗಟ್ಟಿಮೊಸರು, ರುಚಿಗೆ ತಕಷ್ಟು ಉಪ್ಪು, ಸ್ವಲ್ಪ ಅಡಿಗೆಸೋಡಾ , ಎಣ್ಣೆ.

ದೋಸೆ ಮಾಡುವ ವಿಧಾನ: ಮೊದಲು ಒಂದು ಮಿಕ್ಸಿ ಜಾರಿಗೆ ತೆಗೆದುಕೊಂಡ ರವೆಯನ್ನು ಹಾಕಿ ನುಣ್ಣಗೆ ಪುಡಿಮಾಡಿಕೊಳ್ಳಿ. ನಂತರ ಅದೇ ಮಿಕ್ಸಿ ಜಾರಿಗೆ ಅನ್ನವನ್ನು ಹಾಕಿ ರುಬ್ಬಿಕೊಳ್ಳಿ. ಮತ್ತೆ ಇದೇ ಮಿಕ್ಸಿ ಜಾರಿಗೆ ತೆಗೆದುಕೊಂಡ ಮೊಸರು ಹಾಗೂ ಸ್ವಲ್ಪ ನೀರನ್ನು ಹಾಕಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಕಾಲು ಚಮಚ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 10 – 15 ನಿಮಿಷಗಳ ಕಾಲ ದೋಸೆ ಹಿಟ್ಟನ್ನು ನೆನೆಯಲು ಪಕ್ಕಕ್ಕೆ ಇಡಿ. ನಂತರ ಗ್ಯಾಸ್ ಮೇಲೆ ದೋಸೆ ಹೆಂಚನ್ನು ಕಾಯಲುಬಿಡಿ. ಹೆಂಚು ಕಾದ ನಂತರ ಸ್ವಲ್ಪ ನೀರನ್ನು ಹೆಂಚಿನ ಮೇಲೆ ಹಾಕಿ ಒಂದು ಮೃದುವಾದ ಕಾಟನ್ ಬಟ್ಟೆಯಲ್ಲಿ ಒರೆಸಿಕೊಂಡು ನಂತರ ದೋಸೆಯನ್ನು ಹಾಕಿದರೆ ಉಳಿದ ಅನ್ನದಿಂದ ಮಾಡಿದ ಗರಿಗರಿಯಾದ ದೋಸೆ ಸವಿಯಲು ಸಿದ್ದ

Post Author: Ravi Yadav