ರೆಸ್ಟೋರೆಂಟ್ ಶೈಲಿಯ ದಾಲ್ ಕಿಚಡಿ ಮನೆಯಲ್ಲಿಯೇ ಸುಲಭವಾಗಿ ಮಾಡಿ, ಹೇಗೆ ಗೊತ್ತೇ??ವಿಡಿಯೋ ಸಮೇತ ವಿವರಣೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ರೆಸ್ಟೋರೆಂಟ್ ಶೈಲಿಯ ದಾಲ್ ಕಿಚಡಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ದಾಲ್ ಕಿಚಡಿ ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ಅಕ್ಕಿ, ಅರ್ಧ ಬಟ್ಟಲು ತೊಗರಿಬೇಳೆ, ಅರ್ಧ ಬಟ್ಟಲು ಹೆಸರುಬೇಳೆ, 1 ಈರುಳ್ಳಿ, 1 ಟೊಮೇಟೊ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, 2 ಹಸಿಮೆಣಸಿನಕಾಯಿ, 1 ಇಂಚು ಶುಂಠಿ, 1 ಗೆಡ್ಡೆ ಬೆಳ್ಳುಳ್ಳಿ, 1 ಚಮಚ ಜೀರಿಗೆ, ಸ್ವಲ್ಪ ಎಣ್ಣೆ, 2 ಚಮಚ ತುಪ್ಪ, 1 ಚಮಚ ಅಚ್ಚ ಖಾರದ ಪುಡಿ, ಅರ್ಧ ಚಮಚ ಅರಿಶಿಣ ಪುಡಿ, 1 ಚಮಚ ಸಾಸಿವೆ, ರುಚಿಗೆ ತಕ್ಕಷ್ಟು ಉಪ್ಪು.

ದಾಲ್ ಕಿಚಡಿ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬಟ್ಟಲಿಗೆ ತೆಗೆದುಕೊಂಡ ಅಕ್ಕಿ, ತೊಗರಿಬೇಳೆ, ಹೆಸರುಬೇಳೆ ಹಾಗೂ ನೀರನ್ನು ಹಾಕಿ 10 ನಿಮಿಷಗಳ ಕಾಲ ನೆನೆಯಲು ಬಿಡಿ. 10 ನಿಮಿಷಗಳ ನಂತರ ನೆನೆಸಿದ ಪದಾರ್ಥಗಳನ್ನು 2 – 3 ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಇದನ್ನು ಒಂದು ಕುಕ್ಕರಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ 5 ಲೋಟದಷ್ಟು ನೀರನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಅರಿಶಿನ ಪುಡಿ ಹಾಗೂ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಕುಕ್ಕರ್ ನ ಮುಚ್ಚಳವನ್ನು ಮುಚ್ಚಿ 3 ವಿಷಲ್ ಹಾಕಿಸಿಕೊಂಡು ತಣ್ಣಗಾಗಲು ಬಿಡಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 1 ಚಮಚದಷ್ಟು ಎಣ್ಣೆ ಹಾಗೂ 2 ಚಮಚ ತುಪ್ಪವನ್ನು ಹಾಕಿ ಕಾಯಲು ಬಿಡಿ.

ಕಾದ ನಂತರ ಇದಕ್ಕೆ ಸಾಸಿವೆ, ಜೀರಿಗೆ, ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿ, ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ, ತುರಿದ ಶುಂಠಿಯನ್ನು ಹಾಕಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಕರಿಬೇವನ್ನು ಹಾಕಿ ಮತ್ತೆ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣದಾಗಿ ಹಚ್ಚಿದ ಈರುಳ್ಳಿಯನ್ನು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಅಚ್ಚಖಾರದ ಪುಡಿಯನ್ನು ಹಾಕಿ 30 ಸೆಕೆಂಡುಗಳ ಕಾಲ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮೆಟೊವನ್ನು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಮತ್ತೊಂದು ಕಡೆ ಕುಕ್ಕರ್ ನಲ್ಲಿರುವ ಅನ್ನವನ್ನು ಒಂದು ಬಾರಿ ಮಿಕ್ಸ್ ಮಾಡಿಕೊಂಡು ಅದಕ್ಕೆ 2 ಲೋಟದಷ್ಟು ಬಿಸಿ ನೀರನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದನ್ನು ಒಗ್ಗರಣೆ ಮಾಡಿಕೊಂಡ ಬಾಣಲೆಗೆ ಹಾಕಿ ಮಿಕ್ಸ್ ಮಾಡಿದರೆ ರೆಸ್ಟೋರೆಂಟ್ ಶೈಲಿಯ ದಾಲ್ ಕಿಚಡಿ ಸವಿಯಲು ಸಿದ್ಧ.

Post Author: Ravi Yadav