ಈ ಐಪಿಎಲ್ ನಲ್ಲಿ ಆರ್ಸಿಬಿಯ 11 ರ ಬಳಗದಲ್ಲಿ ಸ್ಥಾನ ಪಡೆಯುವ ವಿದೇಶಿ ಆಟಗಾರರು ಯಾರ್ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಎಲ್ಲ ಟೂರ್ನಿಯು ಆರಂಭವಾಗಲಿದೆ. ಮುಂದಿನ ಬಾರಿಯ ಐಪಿಎಲ್ ನಲ್ಲಿ ಎಲ್ಲಾ ತಂಡಗಳು ಬಹುತೇಕ ಬದಲಾಗುವ ಕಾರಣ ಹಾಗೂ ಹೊಸ ತಂಡಗಳು ಸೇರಿಕೊಳ್ಳುವ ಕಾರಣ ಈ ಬಾರಿಯ ಐಪಿಎಲ್ ಬಹಳ ನಿರೀಕ್ಷೆ ಮೂಡಿಸಿದೆ. ಪ್ರತಿಬಾರಿಯೂ ಐಪಿಎಲ್ ಬಹಳ ನಿರೀಕ್ಷೆ ಮೂಡಿಸುವುದು ಕಿಂತಲೂ ಹೆಚ್ಚಿನ ನಿರೀಕ್ಷೆ ಈ ಬಾರಿಯ ಐಪಿಎಲ್ ಮೇಲೆ ಇದೆ ಎಂದರೆ ತಪ್ಪಾಗಲಾರದು.

ಅದರಲ್ಲಿಯೂ ಆರ್ಸಿಬಿ ಅಭಿಮಾನಿಗಳಿಗೆ ಈ ಬಾರಿ ತಂಡ ಬಹಳ ಸಮತೋಲನದಿಂದ ಕೂಡಿರುವ ಕಾರಣ ಈ ಬಾರಿಯ ಐಪಿಎಲ್ ಮತ್ತಷ್ಟು ಮುಖ್ಯ ಎನಿಸಿದೆ, ಸಾಮಾನ್ಯವಾಗಿಯೆ ಐಪಿಎಲ್ ಟೂರ್ನಿಯಿಂದಲೇ ಆರ್ಸಿಬಿ ಅಭಿಮಾನಿಗಳು ಬಹಳಷ್ಟು ಜೋಷ್ ನಲ್ಲಿ ಇರುತ್ತಾರೆ, ಈ ಬಾರಿ ಕಂಡ ಸಮತೋಲನದಿಂದ ಕೂಡಿರುವ ಕಾರಣ ಐಪಿಎಲ್ ಗೆಲ್ಲುವ ನೆಚ್ಚಿನ ತಂಡವಾಗಿದೆ ಆರ್ಸಿಬಿ, ಆದ ಕಾರಣ ಮತ್ತೊಂದು ಲೆವೆಲ್ ನ ಜೋಷ್ ಅನ್ನು ನಾವು ಕಾಣ ಬಹುದಾಗಿದೆ.

ಆದರೆ ಆರ್ಸಿಬಿ ತಂಡದಲ್ಲಿ ಈ ಬಾರಿ ವಿದೇಶಿಗರು ಕೂಡ ಚೆನ್ನಾಗಿ ಆಟವಾಡಿದರೆ ಮಾತ್ರ ಆರ್ಸಿಬಿ ತಂಡ ಗೆಲ್ಲಲು ಸಾಧ್ಯವಾಗುತ್ತದೆ, ಇಲ್ಲವಾದಲ್ಲಿ ಕೇವಲ ಕೊಹ್ಲಿ, ಎಬಿಡಿ ರವರ ಮೇಲೆ ಮಾತ್ರ ಜವಾಬ್ದಾರಿ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಆಟವಾಡುವ ಹನ್ನೊಂದರ ಬಳಗದಲ್ಲಿ ಯಾವ ಆಟಗಾರರು ಆಯ್ಕೆಯಾಗುತ್ತಾರೆ ಎಂಬುದು ಕೂಡ ಬಾರಿ ಚರ್ಚೆಯನ್ನು ಸೃಷ್ಟಿಯಾಗಿದೆ, ವಿಶ್ಲೇಷಕರ ಪ್ರಕಾರ ಈ ಬಾರಿಯ ಆಟವಾಡುವ ಹನ್ನೊಂದರ ಬಳಗದಲ್ಲಿ ಯಾವ್ಯಾವ ವಿದೇಶಿ ಆಟಗಾರರು ಇರುತ್ತಾರೆ ಎಂಬುವುದನ್ನು ನಾವು ನೋಡುವುದಾದರೇ ಎಬಿ ಡಿವಿಲಿಯರ್ಸ್, ಮ್ಯಾಕ್ಸ್ವೆಲ್, ಡ್ಯಾನ್ ಕ್ರಿಶ್ಚಿಯನ್ ಮತ್ತು ಕೆಯ್ಲ್ ಜೆಮಿಸನ್ ರವರು ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ.

Post Author: Ravi Yadav