ಸಾಮಾನ್ಯ ರೀತಿ ಬೇಡ, ಹೊಸ ರೀತಿಯಲ್ಲಿ ಟೊಮೊಟೊ ಕರಿ ಹೀಗೆ ಮಾಡಿ ನೋಡಿ. ಎಲ್ಲರೂ ಇಷ್ಟ ಪಡ್ತಾರೆ.

ಸಾಮಾನ್ಯ ರೀತಿ ಬೇಡ, ಹೊಸ ರೀತಿಯಲ್ಲಿ ಟೊಮೊಟೊ ಕರಿ ಹೀಗೆ ಮಾಡಿ ನೋಡಿ. ಎಲ್ಲರೂ ಇಷ್ಟ ಪಡ್ತಾರೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೊಸ ರೀತಿಯ ಟೊಮೊಟೊ ಕರಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹೊಸ ರೀತಿಯ ಟೊಮೊಟೊ ಕರಿ ಮಾಡಲು ಬೇಕಾಗುವ ಸಾಮಗ್ರಿಗಳು: 3 ಚಮಚ ಎಣ್ಣೆ, 4 ಲವಂಗ, 4 ಚಕ್ಕೆ, 4 ಎಸಳು ಬೆಳ್ಳುಳ್ಳಿ, ಸ್ವಲ್ಪ ಶುಂಠಿ, 1 ಚಮಚ ಕಾಳು ಮೆಣಸು, 1 ಚಮಚ ಜೀರಿಗೆ, 5 – 6 ಹಸಿಮೆಣಸಿನಕಾಯಿ, 2 ಈರುಳ್ಳಿ,1 ಚಮಚ ಸೋಂಪು ಕಾಳು, ಅರ್ಧ ಬಟ್ಟಲು ಕರಿಬೇವು, 1 ಹಿಡಿಯಷ್ಟು ಕೊತ್ತಂಬರಿ ಸೊಪ್ಪು, ಅರ್ಧ ಬಟ್ಟಲು ಕೊಬ್ಬರಿ ತುರಿ,3 ಚಮಚ ಕಡಲೆಬೀಜ,1 ಟೊಮೇಟೊ ,1 ಚಮಚ ಧನಿಯಾ ಪುಡಿ, ರುಚಿಗೆ ತಕಷ್ಟು ಉಪ್ಪು.

ಹೊಸ ರೀತಿಯ ಟೊಮೊಟೊ ಕರಿ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ 4 ಲವಂಗ, 4 ಚಕ್ಕೆ, 4 ಎಸಳು ಬೆಳ್ಳುಳ್ಳಿ, ಸ್ವಲ್ಪ ಶುಂಠಿ, 1 ಚಮಚ ಕಾಳು ಮೆಣಸು, 1 ಚಮಚ ಜೀರಿಗೆ, 5 – 6 ಹಸಿಮೆಣಸಿನಕಾಯಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ 1 ಬಟ್ಟಲು ಈರುಳ್ಳಿ,1 ಚಮಚ ಸೋಂಪು ಕಾಳುನ್ನು ಹಾಕಿ ಈರುಳ್ಳಿ ಕಂದುಬಣ್ಣ ತಿರುಗುವವರೆಗೂ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ಅರ್ಧ ಬಟ್ಟಲು ಕರಿಬೇವನ್ನು ಹಾಕಿ ಒಂದು ಬಾರಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಒಂದು ಹಿಡಿಯಷ್ಟು ಕೊತ್ತಂಬರಿ ಸೊಪ್ಪುನ್ನು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ. ನಂತರ ಇದಕ್ಕೆ ಅರ್ಧಬಟ್ಟಲು ಕೊಬ್ಬರಿತುರಿ, ಹುರಿದು ಸಿಪ್ಪೆ ತೆಗೆದ 3 ಚಮಚ ಚಮಚ ಕಡಲೇಕಾಯಿ ಬೀಜವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ತಣ್ಣಗಾದ ನಂತರ ಈ ಮಿಶ್ರಣವನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಅರ್ಧ ಬಟ್ಟಲು ನೀರನ್ನು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ.

ನಂತರ ಅದೇ ಬಾಣಲಿಗೆ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ 1 ಬಟ್ಟಲು ಈರುಳ್ಳಿ, ಸ್ವಲ್ಪ ಕರಿಬೇವನ್ನು ಹಾಕಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ 1 ಟೊಮ್ಯಾಟೋ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಚಮಚ ಧನಿಯಾ ಪುಡಿಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ರುಬ್ಬಿದ ಮಸಾಲೆ, 1 ಬಟ್ಟಲು ನೀರನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕಡಿಮೆ ಉರಿಯಲ್ಲಿ 7 – 8 ನಿಮಿಷಗಳ ಕಾಲ ಕುದಿಸಿಕೊಂಡರೆ ಹೊಸ ರೀತಿಯ ಟೊಮೊಟೊ ಕರಿ ಸವಿಯಲು ಸಿದ್ಧ.