ಕನ್ನಡತಿಗೆ ಸಿಹಿಸುದ್ದಿ, ಬಿಡುಗಡೆಯಾಗಿದೆ ಟಿಆರ್ಪಿ ಲಿಸ್ಟ್ ! ಟಾಪ್ 10 ಧಾರವಾಹಿಗಳು ಯಾವ್ಯಾವು ಗೊತ್ತಾ??

ಕನ್ನಡತಿಗೆ ಸಿಹಿಸುದ್ದಿ, ಬಿಡುಗಡೆಯಾಗಿದೆ ಟಿಆರ್ಪಿ ಲಿಸ್ಟ್ ! ಟಾಪ್ 10 ಧಾರವಾಹಿಗಳು ಯಾವ್ಯಾವು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡದ ಬಹು ನಿರೀಕ್ಷಿತ ಟಿಆರ್ಪಿ ಲಿಸ್ಟ್ ಇದೀಗ ಬಿಡುಗಡೆಯಾಗಿದೆ, ಈ ಲಿಸ್ಟಿನಲ್ಲಿ ಕೆಲವೊಂದು ಧಾರವಾಹಿಗಳ ಪಾರುಪತ್ಯ ಮುಂದುವರೆದಿದ್ದು ಮತ್ತಷ್ಟು ಧಾರಾವಾಹಿಗಳು ತಾವು ಅಂದುಕೊಂಡಂತೆ ಕೆಲವೊಂದು ಸ್ಥಾನಗಳ ಮೇಲೇರಲು ಯಶಸ್ವಿಯಾಗಿವೆ, ಇನ್ನು ಕೆಲವು ಧಾರವಾಹಿಗಳು ಟಿಆರ್ಪಿ ಲಿಸ್ಟಿನಲ್ಲಿ ಕಳಪೆ ಸಾಧನೆ ಮಾಡುವ ಮೂಲಕ ಕೆಳಗೆ ಜಾರಿವೆ.

ಇನ್ನು ಈ ವಾರದ ಟಾಪ್ 10 ಧಾರವಾಹಿಗಳು ಯಾವುದು ಎಂಬುದನ್ನು ನಾವು ನೋಡುವುದಾದರೇ, ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ಕಾವ್ಯಾಂಜಲಿ ಧಾರಾವಾಹಿಯು ಟಾಪ್ 10 ರ ಲಿಸ್ಟಿನಲ್ಲಿ ಸ್ಥಾನ ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಟಾಪ್ ಹತ್ತನೇ ಧಾರವಾಹಿಯಾಗಿ ಸ್ಥಾನ ಪಡೆದು ಕೊಂಡಿದೆ, ಇನ್ನುಳಿದಂತೆ ಟಾಪ್ 9ನೇ ಧಾರವಾಹಿಯಾಗಿ ಕಳೆದ ವಾರ ಏಳನೇ ಸ್ಥಾನದಲ್ಲಿದ್ದ ಗಿಣಿರಾಮ ಧಾರಾವಾಹಿ ಸ್ಥಾನ ಪಡೆದು ಕೊಂಡಿದೆ.

ಇನ್ನು ಕಳೆದ ವಾರ ಟಿಆರ್ಪಿ ಲಿಸ್ಟಿನಲ್ಲಿ ಏಳನೇ ಸ್ಥಾನದಲ್ಲಿದ್ದ ಗೀತ ಧಾರವಾಹಿ ಈ ಬಾರಿ ಎಂಟನೇ ಸ್ಥಾನ ಪಡೆದು ಕೊಂಡಿದೆ, ಬಹಳ ನಿರೀಕ್ಷೆ ಮೂಡಿಸುತ್ತಿದ್ದರೂ ಟಿಆರ್ಪಿ ಲಿಸ್ಟಿನಲ್ಲಿ ಮೇಲೇರಲು ವಿಫಲವಾಗಿದ್ದ ಕನ್ನಡತಿ ಈ ಬಾರಿ ಎರಡು ಸ್ಥಾನ ಮೇಲೆ ಏರಿ ಏಳನೇ ಸ್ಥಾನ ಪಡೆದು ಕೊಂಡಿದೆ, ಇನ್ನುಳಿದಂತೆ ಕಳೆದವಾರ ದಂತೆ ಈ ವಾರ ಕೂಡ ಆರನೇ ಸ್ಥಾನದಲ್ಲಿ ಮಂಗಳ ಗೌರಿ, ಪಾರು 5 ನೇ ಸ್ಥಾನದಲ್ಲಿ, ನಾಗಿಣಿ 4 ನೇ ಸ್ಥಾನದಲ್ಲಿ ಗಟ್ಟಿಮೇಳ ಧಾರವಾಹಿಯು 3 ನೇ ಸ್ಥಾನ, ಜೊತೆ ಜೊತೆಯಲಿ 2 ನೇ ಸ್ಥಾನ ಹಾಗೂ ಸತ್ಯ ಧಾರವಾಹಿ ಮೊದಲನೇ ಸ್ಥಾನ ಪಡೆದುಕೊಳ್ಳುವಲ್ಲಿ ಈ ವಾರವೂ ಕೂಡ ಯಶಸ್ವಿಯಾಗಿವೆ.