ದಿಡೀರ್ ಎಂದು ಕೇವಲ 10 ನಿಮಿಷಗಳಲ್ಲಿ ಮಾಡಿ ಗರಿ ಗರಿಯಾದ ದೋಸೆ, ಹೇಗೆ ಗೊತ್ತೇ??

ದಿಡೀರ್ ಎಂದು ಕೇವಲ 10 ನಿಮಿಷಗಳಲ್ಲಿ ಮಾಡಿ ಗರಿ ಗರಿಯಾದ ದೋಸೆ, ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಕೇವಲ 10 ನಿಮಿಷಗಳಲ್ಲಿ ಗರಿಗರಿಯಾದ ಗೋಧಿ ರವೆ ದೋಸೆ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಗೋಧಿ ರವೆ ದೋಸೆ ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ಗೋದಿ ಹಿಟ್ಟು, ಅರ್ಧ ಬಟ್ಟಲು ಚಿರೋಟಿ ರವೆ, ರುಚಿಗೆ ತಕ್ಕಷ್ಟು ಉಪ್ಪು, ಕಾಲು ಚಮಚ ಸಕ್ಕರೆ, ಸ್ವಲ್ಪ ಅಡುಗೆ ಸೋಡಾ, ಸ್ವಲ್ಪ ಎಣ್ಣೆ ಅಥವಾ ತುಪ್ಪ, ಕಾಲು ಬಟ್ಟಲು ಮೊಸರು.

ಗೋಧಿ ರವೆ ದೋಸೆ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ತೆಗೆದುಕೊಂಡ ಗೋದಿಹಿಟ್ಟು, ರವೆ, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಹಾಗೂ ನೀರನ್ನು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ 10 ನಿಮಿಷಗಳ ಕಾಲ ನೆನೆಯಲು ಬಿಡಿ.10 ನಿಮಿಷಗಳ ನಂತರ ಇದಕ್ಕೆ ಕಾಲು ಬಟ್ಟಲು ಮೊಸರು ಹಾಗೂ ಸ್ವಲ್ಪ ಅಡುಗೆ ಸೋಡಾ ವನ್ನು ಹಾಕಿ 2 – 3 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಗ್ಯಾಸ್ ನ ಮೇಲೆ ತವಾವನ್ನು ಇಟ್ಟು ತೆಳುವಾದ ದೋಸೆ ಸವರಿ, ಸ್ವಲ್ಪ ಎಣ್ಣೆಯನ್ನು ಹಾಕಿ ಒಂದು ಬದಿಯಲ್ಲಿ ಬೇಯಿಸಿಕೊಂಡರೆ ಗರಿಗರಿಯಾದ ಗೋಧಿ ರವೆ ದೋಸೆ ಸವಿಯಲು ಸಿದ್ಧ.