ಆರ್ಸಿಬಿ ತಂಡದ ಮತ್ತೊಬ್ಬ ವಿದೇಶಿ ಆಟಗಾರ ಅಲಭ್ಯ, ಕೊಂಚ ಯಾಮಾರಿದರೂ ಸಮಸ್ಯೆ ಕಟ್ಟಿಟ್ಟ ಬುತ್ತಿ.

ಆರ್ಸಿಬಿ ತಂಡದ ಮತ್ತೊಬ್ಬ ವಿದೇಶಿ ಆಟಗಾರ ಅಲಭ್ಯ, ಕೊಂಚ ಯಾಮಾರಿದರೂ ಸಮಸ್ಯೆ ಕಟ್ಟಿಟ್ಟ ಬುತ್ತಿ.

ನಮಸ್ಕಾರ ಸ್ನೇಹಿತರೇ ಆರ್ಸಿಬಿ ತಂಡ ಈಗಾಗಲೇ ಮುಂದಿನ ಐಪಿಎಲ್ ಕುರಿತು ಲೆಕ್ಕಾಚಾರಗಳನ್ನು ಆರಂಭಿಸಿದೆ. ಇನ್ನೇನು ಇನ್ನು ಕೆಲವೇ ಕೆಲವು ದಿನಗಳಲ್ಲಿ ಐಪಿಎಲ್ ಆರಂಭವಾಗುವ ಕಾರಣ ಆರ್ಸಿಬಿ ತಂಡದಲ್ಲಿನ ಆಟಗಾರರು ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಇನ್ನು ಕೆಲವು ವಿದೇಶಿ ಆಟಗಾರರು ಹಾಗೂ ರಾಷ್ಟ್ರೀಯ ತಂಡದಲ್ಲಿ ಆಡುವ ಆಟಗಾರರು ಅಭ್ಯಾಸದಿಂದ ದೂರವುಳಿದರು ಕೂಡ ಇನ್ನು ಕೆಲವೇ ಕೆಲವು ದಿನಗಳಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಇದೇ ಏಪ್ರಿಲ್ ತಿಂಗಳಲ್ಲಿ ಒಂಬತ್ತನೇ ತಾರೀಖಿನಿಂದ ಐಪಿಎಲ್ ಟೂರ್ನಿಯ ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಆರ್ಸಿಬಿ ತಂಡ ಹಾಗೂ ಮುಂಬೈ ತಂಡಗಳು ಟೂರ್ನಿಯನ್ನು ಅಧಿಕೃತವಾಗಿ ಆರಂಭಿಸಲಿವೇ. ಇನ್ನು ಇದೇ ಸಂದರ್ಭದಲ್ಲಿ ಆರ್ಸಿಬಿ ತಂಡಕ್ಕೆ ಕಹಿ ಸುದ್ದಿಯೊಂದು ಕೇಳಿ ಬಂದಿದೆ.

ಹೌದು ಸ್ನೇಹಿತರೇ ಟೂರ್ನಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಲೆಗ್ ಸ್ಪಿನ್ನರ್ ಆಡಂ ಜಂಪಾ ರವರು ಕೆಲವೊಂದು ಪಂದ್ಯಗಳಿಗೆ ತಮ್ಮ ಮದುವೆಯ ಕಾರಣ ಅಲಭ್ಯರಾಗಿದ್ದಾರೆ ಎಂಬುದು ತಿಳಿದು ಬಂದಿದೆ, ಟೂರ್ನಿಯ ಆರಂಭಿಕ ಹಂತದಲ್ಲಿ ಆಡಂ ಜಂಪಾ ರವರು ಅಲಭ್ಯವಾಗಲಿದ್ದು ತದ ನಂತರ ಭಾರತಕ್ಕೆ ಬಂದು ಕ್ವಾರಂಟೈನ್ ಮುಗಿದ ಬಳಿಕ ಆರ್ಸಿಬಿ ತಂಡ ಸೇರಿ ಕೊಳ್ಳಲಿದ್ದಾರೆ. ಇದರಿಂದ ತಂಡದ ಮೇಲೆ ಹೆಚ್ಚಿನ ಪ್ರಭಾವ ಬೀರದೆ ಇದ್ದರೂ ಕೂಡ ಇರುವ ಏಕೈಕ ಲೆಗ್ ಸ್ಪಿನ್ನರ್ ಚಹಲ್ ರವರು ಅಲಭ್ಯರಾದರೆ ಆರ್ಸಿಬಿ ತಂಡಕ್ಕೆ ಖಂಡಿತ ಸಮಸ್ಯೆ ಉಂಟಾಗಲಿದೆ.