ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಭಾರಿ ಕುಸಿತ ! ಹೂಡಿಕೆಗೆ ಇದು ಸದಾವಕಾಶವೇ??

ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಭಾರಿ ಕುಸಿತ ! ಹೂಡಿಕೆಗೆ ಇದು ಸದಾವಕಾಶವೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವೇ ಕೆಲವು ತಿಂಗಳುಗಳ ಹಿಂದೆ ಸರಿ ಸುಮಾರು 10 ಗ್ರಾಂ ಚಿನ್ನದ ಬೆಲೆ ಇಂದು 56,200 ರೂಪಾಯಿ ಇತ್ತು. ಇದೇ ಸಂದರ್ಭದಲ್ಲಿ ಮಧ್ಯಮ ವರ್ಗದ ಕುಟುಂಬದವರು ಚಿನ್ನದ ಬೆಲೆ ಕೇಳಿ ಕೊಂಡುಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಂತಾಗಿತ್ತು. ಹೀಗೆ ಬಿಟ್ಟರೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಸಾಲ ಮಾಡಿ ಕೊಂಡು ಕೊಂಡವರು ಕೂಡ ಇದ್ದಾರೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿ ಗಣನೆಯ ಪ್ರಮಾಣವಾಗಿ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ.

ಹೌದು ಸ್ನೇಹಿತರೇ ಕಳೆದ ಕೆಲವು ತಿಂಗಳುಗಳಿಂದ ಚಿನ್ನದ ಬೆಲೆ ನಿಜಕ್ಕೂ ಕಡಿಮೆಯಾಗಿದೆ. ಅದರಲ್ಲೂ ಈ ತಿಂಗಳ ಆರಂಭದಲ್ಲಿ ಅಂದರೇ ಮಾರ್ಚ್ ತಿಂಗಳ ಆರಂಭದಲ್ಲಿ ಭಾರತದಲ್ಲಿ ಸತತ ಆರು ಬಾರಿ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಇದೀಗ ಮತ್ತೊಮ್ಮೆ ಚಿನ್ನದ ಬೆಲೆ ಹಾಗೂ ಬೆಳ್ಳಿಯ ಬೆಲೆ ಕುಸಿದಿದ್ದು ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಈ ಕೆಳಗಿನಂತಿದೆ.

ಸ್ನೇಹಿತರೇ ಬೆಂಗಳೂರು ಮೈಸೂರು ಹಾಗೂ ಮಂಗಳೂರಿನ ಬೆಲೆಗಳ ಕುರಿತು ನಾವು ನೋಡುವುದಾದರೆ 22 ಕ್ಯಾರೆಟ್ ಚಿನ್ನ 10 ಗ್ರಾಮಿಗೆ 41900, 24 ಕ್ಯಾರೆಟ್ ಚಿನ್ನ 45700 ಹಾಗೂ ಒಂದು ಕೆಜಿಯ ಬೆಳ್ಳಿ ಬೆಲೆ 65300 ರೂಪಾಯಿಗಳಾಗಿವೆ. ಇನ್ನು ಈ ಸಮಯದಲ್ಲಿ ಹೂಡಿಕೆಗೆ ಸದಾವಕಾಶವೇ ಎಂಬುದನ್ನು ನಾವು ನೋಡುವುದಾದರೇ ಇನ್ನು ಕೆಲವೊಂದಷ್ಟು ದಿನಗಳ ನಂತರ ಮತ್ತಷ್ಟು ಬೆಲೆ ಕಡಿಮೆಯಾಗಲಿದ್ದು, ಆಗ ಹೂಡಿಕೆ ಮಾಡಿದರೇ ಸೂಕ್ತ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಅದೇ ಸಮಯದಲ್ಲಿ ಮಾರುಕಟ್ಟೆ ಹೀಗೆ ಇರುತ್ತದೆ ಎಂದು ಯಾರು ಹೇಳಲು ಕೂಡ ಸಾಧ್ಯವೇ ಇಲ್ಲ.