ಅತ್ಯದ್ಭುತ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಕನ್ನಡತಿ ಪಾತ್ರಕ್ಕೆ ರಂಜಿನಿ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯಲ್ಲಿ ಕನ್ನಡತಿ ಧಾರಾವಾಹಿ ತನ್ನದೇ ಆದ ಪ್ರತ್ಯೇಕ ಅಭಿಮಾನಿ ಬಳಗ ವನ್ನು ಹೊಂದಿದೆ, ಧಾರವಾಹಿ ದಿನ ದಿನಕ್ಕೂ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು ಧಾರಾವಾಹಿಗಳನ್ನು ನೋಡಿದ ಅದೆಷ್ಟೋ ಜನ ಹಾಗೂ ಮನೆಯ ಗಂಡಸರು ಕೂಡ ಧಾರವಾಹಿಯನ್ನು ತಪ್ಪದೆ ನೋಡುತ್ತಿರುವ ಧಾರವಾಹಿ ಎಂದರೆ ಅದು ಕನ್ನಡತಿ ಮಾತ್ರ.

ಇನ್ನು ಕನ್ನಡತಿ ಧಾರಾವಾಹಿ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಪಡುವ ಧಾರವಾಹಿ ಎಂಬ ಖ್ಯಾತಿ ಕೂಡ ಒಳಗೊಂಡಿದೆ, ಈ ದಾರವಾಹಿಯ ಪ್ರತಿಯೊಂದು ಸನ್ನಿವೇಶಗಳ ಕುರಿತು ನಡೆಯುವ ಚರ್ಚೆ ನೋಡಿದರೇ ನಿರ್ದೇಶಕರು ಹಾಗೂ ಕಥೆಗೆ ಬರೆಯುವರು ಬೇಡವೇ ಬೇಡ ಎನಿಸುತ್ತದೆ ಯಾಕೆಂದರೆ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಕಥೆಯನ್ನು ಹೇಳಿ ಈ ರೀತಿ ನಿರ್ಮಾಣ ಮಾಡಿ ಆ ರೀತಿ ನಿರ್ಮಾಣ ಮಾಡಿ ಎಂದು ಚರ್ಚೆ ಮಾಡುತ್ತಿರುತ್ತಾರೆ.

ಇನ್ನು ಈ ಧಾರವಾಹಿಯಲ್ಲಿ ರಂಜನಿ ರಾಘವನ್ ಅವರ ಕನ್ನಡ ಟೀಚರ್ ಪಾತ್ರ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು, ಮತ್ತೊಮ್ಮೆ ರಂಜನಿ ರಾಘವನ್ ಅವರು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿ ಯಾಗಿದ್ದಾರೆ, ಇದಕ್ಕೂ ಮುನ್ನ ಇವರು ಪುಟ್ಟ ಗೌರಿ ಮದುವೆಯಲ್ಲಿ ನಟಿಸುವ ಮೂಲಕ ಮನೆಮಾತಾಗಿದ್ದರು, ಹೀಗೆ ದಿನೇ ದಿನೇ ತನ್ನ ಜನಪ್ರಿ ಯತೆಯನ್ನು ಹೆಚ್ಚಿಸಿ ಕೊಳ್ಳುತ್ತಿರುವ ಕನ್ನಡತಿ ದಾರವಾಹಿಯಲ್ಲಿ ನಾಯಕ ನಟಿಯಾಗಿ ನಟಿಸುತ್ತಿರುವ ಭುವಿ ಪಾತ್ರದಾರಿ ರಂಜನಿ ರಾಘವನ್ ರವರು ಒಂದು ಎಪಿಸೋಡಿಗೆ 20 ಸಾವಿರ ರೂಪಾಯಿಗಳನ್ನು ಪಡೆದು ಕೊಳ್ಳುತ್ತಾರೆ ಎಂಬುದು ಕಿರುತೆರೆಯ ಮೂಲಗಳಿಂದ ತಿಳಿದು ಬಂದಿದೆ. ಇವರ ಈ ಪಾತ್ರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav