ಮಮತಾ ರವರಿಗೆ ಬಂಗಾಳದಲ್ಲಿ ಗಾಯದ ಮೇಲೆ ಉಪ್ಪು ಸುರಿದ ಓವೈಸಿ ! ಬಿಜೆಪಿ ಫುಲ್ ಖುಷ್, ಯಾಕೆ ಗೊತ್ತಾ??

ಮಮತಾ ರವರಿಗೆ ಬಂಗಾಳದಲ್ಲಿ ಗಾಯದ ಮೇಲೆ ಉಪ್ಪು ಸುರಿದ ಓವೈಸಿ ! ಬಿಜೆಪಿ ಫುಲ್ ಖುಷ್, ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ನೇರ ಹಣಾಹಣಿ ಏರ್ಪಟ್ಟಿದೆ, ಕಾಂಗ್ರೆಸ್ ಪಕ್ಷ ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ತನ್ನ ಅಸ್ತಿತ್ವವನ್ನು ಬಹುತೇಕ ಕಳೆದು ಕೊಂಡಿರುವ ಕಾರಣ ಈ ಬಾರಿ ತೃಣಮೂಲ ಕಾಂಗ್ರೆಸ್ ಜೊತೆ ಕೈಜೋಡಿಸಿದರೇ ಕೆಲವೊಂದು ಸೀಟುಗಳನ್ನು ಗೆಲ್ಲಬಹುದು ಇಲ್ಲವಾದಲ್ಲಿ ಕೇವಲ ಬೆರಳೆಣಿಕೆಯ ಸೀಟುಗಳಿಗೆ ಮಾತ್ರ ಸೀಮಿತವಾಗಲಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

ಆದ ಕಾರಣ ಪಶ್ಚಿಮ ಬಂಗಾಳ ರಾಜ್ಯದ ಚುನಾವಣೆಯನ್ನು ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ನಡುವಿನ ನೇರ ಹಣಾಹಣಿ ಎಂದು ಕರೆಯಲಾಗುತ್ತಿದೆ, ಇಂತಹ ಸಂದರ್ಭದಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸಲು ಮಮತಾ ಬ್ಯಾನರ್ಜಿ ರವರು ಪ್ರಮುಖವಾಗಿ ನಂಬಿಕೊಂಡಿರುವ ಮತ ಬ್ಯಾಂಕುಗಳಲ್ಲಿ ಮುಸ್ಲಿಂ ಸಮುದಾಯದವರ ಮತಗಳು ಕೂಡ ಪ್ರಮುಖ ಪ್ರಭಾವವನ್ನು ಬೀರುತ್ತವೆ.

ಅದೇ ಕಾರಣಕ್ಕಾಗಿ ಮುಸ್ಲಿಂ ಸಮುದಾಯಕ್ಕಾಗಿ ಹಲವಾರು ಘೋಷಣೆಗಳನ್ನು ಕೂಡ ಮಮತಾ ಬ್ಯಾನರ್ಜಿ ಅವರು ಮಾಡಿದ್ದಾರೆ, ಆದರೆ ಮಮತಾ ಬ್ಯಾನರ್ಜಿ ಅವರು ಕೈಜೋಡಿಸುವಂತೆ ಕರೆ ನೀಡಿದರೂ ಕೂಡ ಎಐಎಂಐಎಂ ಪಕ್ಷದ ನಾಯಕ ಓವೈಸಿ ರವರು ಮಮತಾ ಬ್ಯಾನರ್ಜಿ ಅವರ ಮನವಿಯನ್ನು ತಿರಸ್ಕಾರ ಮಾಡುವುದಷ್ಟೇ ಅಲ್ಲದೆ ತಾವೇ ಸ್ವತಹ ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ನಿಲ್ಲಲು ನಿರ್ಧಾರ ಮಾಡಿದ್ದಾರೆ. ಈ ಮೂಲಕ ಪಕ್ಷದ ಬಂಗಾಳದಲ್ಲಿ ಮುಸ್ಲಿಂ ಮತಗಳು ಟಿಎಂಸಿ ಪಕ್ಷ ಹಾಗೂ ಓವೈಸಿ ಪಕ್ಷದ ನಡುವೆ ವಿಭಜನೆ ಯಾಗುವುದು ಖಚಿತವಾಗಿದೆ. ಒಂದು ವೇಳೆ ಅದೇ ನಡೆದಲ್ಲಿ ಬಿಜೆಪಿ ಪಕ್ಷಕ್ಕೆ ಇದು ಒಂದು ರೀತಿಯ ಆನೆಬಲ ತಂದಂತೆ ಆಗಲಿದೆ