ಕೊಹ್ಲಿ-ರೋಹಿತ್ ಆರಂಭಿಕರಾದರೇ ರಾಹುಲ್ ಕಥೆ ಏನು?? ಉತ್ತರ ನೀಡಿದ ಉಪ ನಾಯಕ ರೋಹಿತ್

ಕೊಹ್ಲಿ-ರೋಹಿತ್ ಆರಂಭಿಕರಾದರೇ ರಾಹುಲ್ ಕಥೆ ಏನು?? ಉತ್ತರ ನೀಡಿದ ಉಪ ನಾಯಕ ರೋಹಿತ್

ನಮಸ್ಕಾರ ಸ್ನೇಹಿತರೇ ಇಂಗ್ಲೆಂಡ್ ವಿರುದ್ಧ ನಡೆದ ಅಂತಿಮ ಟಿ-ಟ್ವೆಂಟಿ ಪಂದ್ಯದಲ್ಲಿ ‌ಎಲ್ಲರೂ ಅಚ್ಚರಿ ಪಡುವಂತೆ ವಿರಾಟ್ ಕೊಹ್ಲಿ ರವರು ಪ್ರಮುಖ ಪಂದ್ಯ ಆದರೂ ಕೂಡ ಆರಂಭಿಕರಾಗಿ ಕಣಕ್ಕಿಳಿದಿದ್ದರು, ಸಾಮಾನ್ಯವಾಗಿ ಸರಣಿಯನ್ನು ನಿರ್ಧಾರ ಪಡಿಸುವ ಕೊನೆಯ ಪಂದ್ಯಗಳಲ್ಲಿ ಯಾವುದೇ ನಾಯಕರು ತಂಡದ ಬ್ಯಾಟಿಂಗ್ ಲೈನ್ ಅಪ್ ಅನ್ನು ಬದಲಾಯಿಸಲು ಇಷ್ಟಪಡುವುದಿಲ್ಲ, ಆದರೆ ಕಿಂಗ್ ಕೊಹ್ಲಿ ರವರು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೂ ಕೂಡ ಸ್ಕ್ರೀಜ್ ಗೆ ಕಚ್ಚಿ ಕೊಂಡರೆ ಪಂದ್ಯ ಗೆಲ್ಲುವುದು ಖಚಿತ ಎಂಬ ಕಾರಣಕ್ಕಾಗಿ ಇರ ಬಹುದು ನೇರವಾಗಿ ಹೆಚ್ಚಿನ ಆಲೋಚನೆ ನಡೆಸದೇ ಆರಂಭಿಕರಾಗಿ ಕಣಕ್ಕೆ ಇಳಿದು ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದರು

ಮೂರನೇ ಪಂದ್ಯದ ವೇಳೆಯಲ್ಲಿ ಕೆಎಲ್ ರಾಹುಲ್ ರವರು, ಕೆಲವೊಂದು ಪಂದ್ಯಗಳಲ್ಲಿ ವಿಫಲವಾದ ತಕ್ಷಣ ತಂಡದಿಂದ ಹೊರಗೆ ಹೋಗುವುದಿಲ್ಲ ಎಂದು ಹೇಳಿದ್ದ ವಿರಾಟ್ ಕೊಹ್ಲಿ ರವರು ಈಗ ಈಗ್ಯಾಕೆ ಮಾಡಿದರೂ, ಮಧ್ಯಮ ಕ್ರಮಾಂಕದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಲು ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಡಲಾಗುತ್ತದೆಯೇ ಎಂಬ ಪ್ರಶ್ನೆಗಳು ಎಲ್ಲರಲ್ಲೂ ಮೂಡಿದ್ದವು.

ಈ ಪ್ರಶ್ನೆಗಳಿಗೆ ಇದೀಗ ಉತ್ತರ ನೀಡಿರುವ ರೋಹಿತ್ ಶರ್ಮಾ ರವರು, ಇದು ಕೇವಲ ಒಂದು ಗೇಮಿನ ಪ್ಲಾನ ಆಗಿದೆ, ಹೇಗಿದ್ದರೂ ಯುವ ಆಟಗಾರರು ಹಾಗೂ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ ನಲ್ಲಿ ಇದ್ದ ಕಾರಣ ಒಂದು ಹೆಚ್ಚುವರಿ ಬೌಲಿಂಗ್ ಆಯ್ಕೆಯನ್ನು ಹೊಂದುವ ಆಲೋಚನೆ ಮೇರೆಗೆ ಕೆಎಲ್ ರಾಹುಲ್ ರವರು ತಂಡದಿಂದ ಕೈ ಬಿಡಲಾಗಿತ್ತು, ಕೊಹ್ಲಿ ಕಾಯಂ ಆರಂಭಿಕರಾಗಿ ಎಂದಿಗೂ ಬ್ಯಾಟಿಂಗ್ ಮಾಡುವುದಿಲ್ಲ, ರಾಹುಲ್ ಅವರು ಮತ್ತೊಮ್ಮೆ ತಂಡಕ್ಕೆ ವಾಪಸು ಬರಲಿದ್ದಾರೆ, ಈ ಆರಂಭಿಕ ಜೋಡಿ ಕೇವಲ ಒಂದು ಗೇಮಿನ ಆಯೋಜನೆ ಹೊರತು ಕಾಯಂ ಆಲೋಚನೆ ಎಲ್ಲಾ ಎಂದು ಹೇಳುವ ಮೂಲಕ ಸ್ಪಷ್ಟಪಡಿಸಿದ್ದಾರೆ.