ಆರ್ಸಿಬಿ ತಂಡಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ ಕ್ಯಾಪ್ಟನ್ ಕೊಹ್ಲಿ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಭಾರತೀಯ ಕ್ರಿಕೆಟ್ ತಂಡವು 5ನೇ ಟಿ-ಟ್ವೆಂಟಿ ಪಂದ್ಯದಲ್ಲಿ ಗೆಲ್ಲುವ ಮೂಲಕ ಇಂಗ್ಲೆಂಡ್ ದೇಶದ ವಿರುದ್ಧ ನಡೆದ ಟಿ-ಟ್ವೆಂಟಿ ಸರಣಿಯನ್ನು ಗೆದ್ದು ಬಿಗಿದೆ, ಈ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದರೂ ಕೂಡ ತದ ನಂತರ ಅತ್ಯದ್ಭುತ ಆಟವಾಡಿ ವಿರಾಟ್ ಕೊಹ್ಲಿ ರವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಇಷ್ಟು ದಿವಸ ಐಪಿಎಲ್ ಗೆ ಕೇವಲ ಇನ್ನು ಕೇವಲ ಕೆಲವೇ ಕೆಲವು ದಿನಗಳು ಇರುವ ಕಾರಣ ಕೊಹ್ಲಿ ಫಾರ್ಮ್ ಒಂದು ಕಡೆ ಚಿಂತೆ ಮಾಡುವಂತೆ ಮಾಡಿದ್ದರೇ ಮತ್ತೊಂದು ಕಡೆಯಿಂದ ಆರ್ಸಿಬಿ ತಂಡಕ್ಕೆ ತನ್ನ ಬ್ಯಾಟಿಂಗ್ ಲೈನ್ ಅಪ್ ಕುರಿತು ಯಾವ್ಯಾವ ಆಟಗಾರರು ಯಾವ ಯಾವ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬುದರ ಕುರಿತು ಚರ್ಚೆ ನಡೆಯುತ್ತಿತ್ತು. ಆದರೆ ಈ ಎರಡು ಆಲೋಚನೆಗಳಿಗೆ ಕೊಹ್ಲಿ ಉತ್ತರ ನೀಡಿದ್ದಾರೆ.

ಹೌದು ಸ್ನೇಹಿತರೇ ಐಪಿಎಲ್ಗೆ ಕೆಲವೇ ಕೆಲವು ದಿನಗಳಿರುವಾಗ ಕೊಹ್ಲಿ ರವರು ಫಾರ್ಮ್ ಗೆ ಮರಳಿದ್ದು ಆರ್ಸಿಬಿ ತಂಡಕ್ಕೆ ಖುಷಿ ನೀಡಿದ್ದರೆ ಮತ್ತೊಂದು ಕಡೆ ಆರಂಭಿಕರಾಗಿ ದೇವದತ್ ಪಡಿಕಲ್ ರವರ ಜೊತೆ ತಾನೆ ಇನ್ನಿಂಗ್ಸ್ ಆರಂಭಿಸುವುದಾಗಿ ವಿರಾಟ್ ಕೊಹ್ಲಿ ರವರು ಖಚಿತಪಡಿಸಿದ್ದಾರೆ, ಈ ಮೂಲಕ ಮಧ್ಯಮ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್, ಮ್ಯಾಕ್ಸ್ವೆಲ್ ಹಾಗೂ ಆಸ್ಟ್ರೇಲಿಯಾದ ಮತ್ತೊಬ್ಬ ಆಟಗಾರ ಫಿನ್ ಅಲೆನ್ ರವರು ಆಡುವುದು ಖಚಿತವಾಗಿದೆ. ಒಂದು ವೇಳೆ ವಿರಾಟ್ ಕೊಹ್ಲಿ ರವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ, ಆರ್ಸಿಬಿ ತಂಡದ ಬ್ಯಾಟಿಂಗ್ ಲೈನ್ ಅಪ್ ಬಹಳ ದೊಡ್ಡದಾಗಿ ಬೌಲಿಂಗ್ ಸಮಸ್ಯೆಯನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು.

Post Author: Ravi Yadav