ತಾನು ಹಿಡಿದ ಜಿಂಕೆ ಗರ್ಭಿಣಿಯೆಂದು ಗೊತ್ತಾದಾಗ ಮೊಸಳೆ ಮಾಡಿದ್ದೇನು ಗೊತ್ತಾ?? ವೈರಲ್ ಆಯಿತು ವಿಡಿಯೋ

ನಮಸ್ಕಾರ ಸ್ನೇಹಿತರೇ ಜೀವನದಲ್ಲಿ ತಾಯಿಯನ್ನು ದೇವರಿಗೆ ಹೋಲಿಸಲಾಗುತ್ತದೆ, ನಾವು ದೇವರನ್ನು ಕೇವಲ ಫೋಟೋ ಹಾಗೂ ದೇವಸ್ಥಾನಗಳಲ್ಲಿ ಮಾತ್ರ ನೋಡಿರುತ್ತೇವೆ ಆದರೆ ದೇವರು ಪ್ರತಿ ಬಾರಿಯೂ ಎಲ್ಲರ ಬಳಿಯೂ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಇರಬಹುದು ಆತನು ತಾಯಿ ಎಂಬ ದೇವರನ್ನು ಎಲ್ಲರಿಗೂ ನೀಡಿರುತ್ತಾರೆ. ತಾಯಿಯ ಪ್ರೀತಿ ಹುಟ್ಟಿನಿಂದ ಅಂತ್ಯದವರೆಗೂ ಸದಾ ಹಾಗೆ ಇರುತ್ತದೆ

ಮಕ್ಕಳು ಏನೇ ಮಾಡಿದರೂ ಎಷ್ಟೇ ತಪ್ಪು ಮಾಡಿದರೂ ತಾಯಿಯ ಪ್ರೀತಿ ಕಿಂಚಿತ್ತು ಕಡಿಮೆ ಯಾಗುವುದಿಲ್ಲ. ಈ ಬಾಂಧವ್ಯ ಕೇವಲ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಅನ್ವಯವಾಗುತ್ತದೆ, ಪ್ರತಿಯೊಂದು ಪ್ರಾಣಿಗಳು ಕೂಡ ತಾಯಿಯ ಬಾಂಧವ್ಯದಿಂದ ದೂರ ಹೋಗಲು ಸಾಧ್ಯವೇ ಇಲ್ಲ. ಹೀಗ್ಯಾಕೆ ಈ ವಿಷಯ ಎಂದುಕೊಂಡಿರಾ, ಸ್ನೇಹಿತರೇ ನಾವು ಯೂಟ್ಯೂಬ್ ನಲ್ಲಿ ಬಹಳ ವೈರಲ್ ಆಗುತ್ತಿರುವ ಒಂದು ವಿಡಿಯೋ ಕುರಿತು ಇಂದು ನಿಮಗೆ ತಿಳಿಸುತ್ತೇವೆ.

ಈ ವಿಡಿಯೋದಲ್ಲಿ ಗರ್ಭಿಣಿಯಾಗಿರುವ ಜಿಂಕೆ ಎಂದಿನಂತೆ ಆಹಾರ ಹುಡುಕಿಕೊಂಡು ಕಾಡಿನಲ್ಲಿ ಅಲೆಯುತ್ತಿರುವಾಗ ನೀರು ಕುಡಿಯಲು ಒಂದು ಹಳ್ಳದ ಬಳಿ ತೆರಳುತ್ತದೆ, ನಾವು ಮನುಷ್ಯರು ಗರ್ಭಿಣಿಯಾದಾಗ ಮನೆಯವರೆಲ್ಲರೂ ನಮ್ಮ ಆಹಾರ ನೀರು ನಮ್ಮ ಬಳಿಗೆ ತರುತ್ತಾರೆ. ಆದರೆ ಪ್ರಾಣಿಗಳು ಹಾಗಲ್ಲ ಅವುಗಳೆ ಆಹಾರ ಅರಸಿಕೊಂಡು ಹೋಗಬೇಕು, ಅದೇ ರೀತಿ ನೀರನ್ನು ಕುಡಿಯಲು ಒಂದು ಜಿಂಕೆ ತೆರಳಿದಾಗ, ಮೊಸಳೆಯ ಕೈಗೆ ಸಿಕ್ಕಿಬಿಡುತ್ತದೆ, ಮೊಸಳೆಯು ತನ್ನ ಬಿಗಿ ಹಿಡಿತದಿಂದ ಗರ್ಭಿಣಿಯಾದ ಜಿಂಕೆಯನ್ನು ಹಿಡಿಯುತ್ತದೆ, ಆದರೆ ಗರ್ಭಿಣಿ ಜಿಂಕೆ ಸೋಲನ್ನು ಒಪ್ಪಿಕೊಂಡು ಸುಮ್ಮನಾದಾಗ ಮೊಸಳೆಗೆ ಅದೇನು ಅನ್ನಿಸಿತೋ ಏನೋ ಗರ್ಭಿಣಿ ಜಿಂಕೆಯನ್ನು ಕಂಡು ಬಿಟ್ಟು ಬಿಡುತ್ತದೆ. ಈ ವಿಡಿಯೋ ಕೆಳಗಡೆ ಇದ್ದು ಒಮ್ಮೆ ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಳಿಸುವುದನ್ನು ಮರೆಯಬೇಡಿ.