ದಿಡೀರ್ ಎಂದು 2 ನಿಮಿಷದಲ್ಲಿ ಮಾಡಿ ಚಟ್ನಿ ಪುಡಿ, ಬ್ಯಾಚುಲರ್ಸ್ ನೋಡ್ರಪ್ಪಾ, ಥಟ್ ಅಂತ ಮಾಡಿ.

ದಿಡೀರ್ ಎಂದು 2 ನಿಮಿಷದಲ್ಲಿ ಮಾಡಿ ಚಟ್ನಿ ಪುಡಿ, ಬ್ಯಾಚುಲರ್ಸ್ ನೋಡ್ರಪ್ಪಾ, ಥಟ್ ಅಂತ ಮಾಡಿ.

ನಮಸ್ಕಾರ ಸ್ನೇಹಿತರೇ, ಚಟ್ನಿಪುಡಿ ಎಂಬುದು ಅಗತ್ಯದ ಸಂದರ್ಭದಲ್ಲಿ ಬಹಳ ಉಪಯೋಗಕ್ಕೆ ಬರುತ್ತದೆ, ಅದರಲ್ಲಿಯೂ ಕೆಲಸ ಅಥವಾ ವಿದ್ಯೆಗಾಗಿ ಇತರ ಊರುಗಳಿಗೆ ಹೋಗುವ ಪ್ರತಿಯೊಬ್ಬರ ಆಪತ್ಬಾಂಧವ ಈ ಚಟ್ನಿ ಪುಡಿ. ಮನೆಯಲ್ಲಿ ತಾಯಂದಿರು ಮಕ್ಕಳು ಹೊರಗೆ ಉಳಿಯುತ್ತಾರೆ ಎಂದಾಗ ಚಟ್ನಿ ಪುಡಿಯನ್ನು ಅಗತ್ಯದ ಸಂದರ್ಭದಲ್ಲಿ ಬಳಸಿ ಕೊಳ್ಳುವಂತೆ ಮಾಡಿ ಕಳುಹಿಸುತ್ತಾರೆ.

ಇಂತಹ ಚಟ್ನಿಪುಡಿಯನ್ನು ಇಂದು ನಾವು ಕೇವಲ 2 ನಿಮಿಷಗಳಲ್ಲಿ ದಿಡೀರ್ ಆಗಿ ಮಾಡುವ ಚಟ್ನಿಪುಡಿ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಚಟ್ನಿ ಪುಡಿ ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ಹುರಿಗಡಲೆ, 1 ಚಮಚ ಅಚ್ಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಎಣ್ಣೆ, ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಇಂಗು, ಅರ್ಧ ಚಮಚ ಅರಿಶಿನ ಪುಡಿ, ಸ್ವಲ್ಪ ಕರಿಬೇವು, ಖಾರಕ್ಕೆ ಬೇಕಾಗುವಷ್ಟು ಕೆಂಪು ಒಣಮೆಣಸಿನಕಾಯಿ.

ಚಟ್ನಿ ಪುಡಿ ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸಿ ಜಾರಿಗೆ ತೆಗೆದುಕೊಂಡ ಹುರಿಗಡಲೆ, 1 ಚಮಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನುಣ್ಣಗೆ ಪುಡಿಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ.

ಎಣ್ಣೆ ಕಾದ ನಂತರ ಅದಕ್ಕೆ ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಇಂಗು, ಅರ್ಧ ಚಮಚ ಅರಿಶಿನ ಪುಡಿ, ಸ್ವಲ್ಪ ಕರಿಬೇವು, ಖಾರಕ್ಕೆ ಬೇಕಾಗುವಷ್ಟು ಕೆಂಪು ಒಣಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಂಡು ರುಬ್ಬಿಕೊಂಡ ಪುಡಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಚಟ್ನಿಪುಡಿ ಸವಿಯಲು ಸಿದ್ಧ.