ಯುವ ರತ್ನ ಟ್ರೈಲರ್ ನೋಡಿ ಯಶ್ ಅವರ ಮೊದಲ ಪ್ರತಿಕ್ರಿಯೆ ಹೇಗಿದೆ ಗೊತ್ತಾ??

ಯುವ ರತ್ನ ಟ್ರೈಲರ್ ನೋಡಿ ಯಶ್ ಅವರ ಮೊದಲ ಪ್ರತಿಕ್ರಿಯೆ ಹೇಗಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪುನೀತ್ ರಾಜಕುಮಾರ್ ರವರ ಯುವ ರತ್ನ ಟ್ರೈಲರ್ ಇದೀಗ ಬಿಡುಗಡೆಯಾಗಿದೆ, ಈಗಾಗಲೇ ಲಕ್ಷಾಂತರ ವ್ಯೂ ಗಳನ್ನು ಪಡೆದು ಕೊಂಡಿರುವ ಯುವ ರತ್ನ ಟ್ರೈಲರ್ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಕೊಳ್ಳುತ್ತಿದೆ. ಒಂದು ವೇಳೆ ನೀವು ಇನ್ನೂ ಯುವ ರತ್ನ ಟ್ರೈಲರ್ ನೋಡಿಲ್ಲ ಎಂದಾದರೆ ಈ ಕೆಳಗಡೆ ಯುವ ರತ್ನ ಟ್ರೈಲರ್ ಇದೆ ಒಮ್ಮೆ ನೋಡಿ

ಇನ್ನು ಟ್ರೈಲರ್ ನೋಡಿದಾಗ ನಮಗೆ ಚಿತ್ರದಲ್ಲಿ ಅಪ್ಪು ಅಭಿಮಾನಿಗಳೇ ಬೇಕಾದ ಪ್ರತಿಯೊಂದು ಅಂಶಗಳು ಹಾಗೂ ಸಮಾಜಕ್ಕೆ ಉತ್ತಮ ಮೆಸೇಜ್ ಇದೆ ಎಂಬುದು ಸ್ಪಷ್ಟವಾಗುತ್ತಿದೆ, ಕಾಲೇಜ್ ಸ್ಟೂಡೆಂಟ್ ಆಗಿ, ಆಟಗಾರನಾಗಿ ಹಾಗೂ ಖಡಕ್ ಆಫೀಸರ್ ಆಗಿ ಮಿಂಚಿರುವ ಪುನೀತ್ ರಾಜಕುಮಾರ್ ರವರ ಯುವರತ್ನ ಸಿನಿಮಾದ ಮೇಲೆ ಇದ್ದ ನಿರೀಕ್ಷೆಯನ್ನು ಟ್ರೈಲರ್ ಮೂಲಕ ಮತ್ತಷ್ಟು ಹೆಚ್ಚು ಮಾಡಿದ್ದಾರೆ.

ಇದೀಗ ಈ ಕುರಿತು ಕನ್ನಡದ ಖ್ಯಾತ ನಟ ಕೆಜಿಎಫ್ ಖ್ಯಾತಿಯ ಯಶ್ ರವರು ತಮ್ಮ ಫ್ಯಾನ್ಸ್ ಪೇಜ್ ಗಳ ಮೂಲಕ ಪ್ರತಿಕ್ರಿಯೆ ನೀಡಿದ್ದು, ಟೈಲರ್ ನೋಡಿದ ಮೇಲೆ ಟ್ರೈಲರ್ ಬಹಳ ಉತ್ತಮ ವಾಗಿದೆ, ಈ ಟ್ರೈಲರ್ ನಲ್ಲಿ ಪುನೀತ್ ರಾಜಕುಮಾರ್ ಅವರು ಬಹಳ ಎಂಗಾಗೆ ಕಾಣಿಸಿ ಕೊಂಡಿದ್ದಾರೆ ಇನ್ನು ಯುವಕರಿಗೆ ಇಷ್ಟವಾಗುವ ಹಾಗೂ ಸಮಾಜಕ್ಕೆ ಉತ್ತಮ ಮೆಸೇಜನ್ನು ನೀಡುವ ಸಿನಿಮಾ ಇದ್ದಂತೆ ಕಾಣುತ್ತಿದೆ, ಖಂಡಿತ ಈ ಸಿನಿಮಾ ಬಹಳ ಅದ್ಭುತವಾಗಿ ಮೂಡಿ ಬರಲಿದೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.