ಕಷ್ಟಪಟ್ಟು ಮೇಲೆ ಬಂದು, ಎಲ್ಲರನ್ನೂ ನಗಿಸುತ್ತಿದ್ದರೂ ಬಿಗ್ ಬಾಸ್ ನಲ್ಲಿ ಮಂಜು ರವರಿಗೆ ನೀಡುವ ಸಂಭಾವನೆಗೆ ಎಷ್ಟು ಕಡಿಮೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಇದೀಗ ಕೇವಲ ಕೆಲವೇ ಕೆಲವು ವಾರಗಳು ಕಳೆದಿದ್ದರೂ ಕೂಡ ಬಹುತೇಕರ ಬಾಯಿಯಲ್ಲಿ ಯಾವ ಸ್ಪರ್ಧಿ ವಿಜೇತರು ಆಗಬಹುದು ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿದೆ, ಬಿಗ್ ಬಾಸ್ ಆರಂಭವಾದ ಮೊದಲನೇ ದಿನದಿಂದಲೂ ಕೂಡ ಈ ಸ್ಪರ್ಧಿ ಬಹಳ ಅತ್ಯುತ್ತಮವಾಗಿ ಜನರನ್ನು ಮನ ರಂಜಿಸುವುದರಲ್ಲಿ ಯಶಸ್ವಿಯಾಗಿದ್ದು ಈತನೇ ವಿನರ್ ಆಗಬೇಕು ಎಂದು ಎಲ್ಲರೂ ಅಭಿಪ್ರಾಯ ಪಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಬಾರಿ ಮಂಜು ಪಾವಗಡ ರವರು ವಿನ್ನರ್ ಎಂಬ ಮಾತು ಕೇಳಿ ಬಂದಿದೆ.

ಅದರಲ್ಲಿಯೂ ಮಂಜು ಪಾವಗಡ ರವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ ಜೀವನದ ಕುರಿತು ಮಾತುಗಳನ್ನು ಹಂಚಿಕೊಂಡಾಗ, ಬಿಗ್ ಬಾಸ್ ಮನೆಯಲ್ಲಿರುವ ಪ್ರತಿಯೊಬ್ಬರೂ ಹಾಗೂ ಟಿವಿ ನೋಡುತ್ತಿದ್ದ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಕಣ್ಣೀರಿಟ್ಟು ಭಾವುಕರಾಗಿದ್ದಾರೆ. ಹೀಗೆ ಭಾವನಾತ್ಮಕವಾಗಿ ಹಾಗೂ ಸಾಕಷ್ಟು ಮನರಂಜನೆ ಕೂಡ ನೀಡುತ್ತಾ ಬಿಗ್ ಬಾಸ್ ಮನೆಯ ಫೇವರೆಟ್ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದು ಕೊಂಡಿದ್ದಾರೆ.

ಇಷ್ಟೆಲ್ಲಾ ಮನರಂಜನೆ ನೀಡುತ್ತಿರುವ ಮಂಜು ರವರಿಗೆ ನೀಡುತ್ತಿರುವ ಸಂಭಾವನೆ ಕಂಡರೆ ನಿಜಕ್ಕೂ ಒಂದು ಕ್ಷಣ ಬೇಸರವಾಗುತ್ತದೆ ಯಾಕೆಂದರೇ ಬಹುತೇಕ ಸ್ಪರ್ಧಿಗಳು ಅವರಿಗಿಂತ ಹೆಚ್ಚಿನ ಹಣವನ್ನು ಸಂಭಾವನೆಯಾಗಿ ಪಡೆದು ಕೊಳ್ಳುತ್ತಿದ್ದಾರೆ, ನಿಧಿ ಸುಬ್ಬಯ್ಯ ರವರು ವಾರಕ್ಕೆ ಒಂದು ಲಕ್ಷ ಪಡೆದು ಕೊಂಡರೇ, ಶುಭ ಪೂಂಜಾ ರವರು 90000 ಪಡೆದು ಕೊಳ್ಳುತ್ತಿದ್ದಾರೆ, ಇನ್ನುಳಿದಂತೆ ದಿವ್ಯ ಸುರೇಶ್, ವೈಷ್ಣವಿ ಗೌಡ, ಶಂಕರ್ ಅಶ್ವಥ್, ರಾಜೀವ್ ಹೀಗೆ ಬಹುತೇಕ ಸ್ಪರ್ಧಿಗಳು ಮಂಜು ಅವರಿಗಿಂತ ಹೆಚ್ಚು ಹಣವನ್ನು ಪಡೆದು ಕೊಳ್ಳುತ್ತಿದ್ದಾರೆ. ಮಂಜು ರವರ ಸಂಭಾವನೆ ಕುರಿತು ಮಾತನಾಡುವುದಾದರೇ ವಾರಕ್ಕೆ 35 ಸಾವಿರ ರೂಪಾಯಿಗಳನ್ನು ಸಂಭಾವನೆಯನ್ನಾಗಿ ಮಂಜುರವರು ಪಡೆದು ಕೊಳ್ಳುತ್ತಿದ್ದಾರೆ.

Facebook Comments

Post Author: Ravi Yadav