ಹೋಟೆಲ್ ನಲ್ಲಿ ಇಡ್ಲಿ, ದೋಸೆಗೆ ಮಾಡುವ ಅದ್ಭುತ ಸಾಂಬರ್ ಮನೆಯಲ್ಲಿಯೇ ಮಾಡುವುದು ಹೇಗೆ ಗೊತ್ತೇ??

ಹೋಟೆಲ್ ನಲ್ಲಿ ಇಡ್ಲಿ, ದೋಸೆಗೆ ಮಾಡುವ ಅದ್ಭುತ ಸಾಂಬರ್ ಮನೆಯಲ್ಲಿಯೇ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೋಟೆಲ್ ಗಳಲ್ಲಿ ಇಡ್ಲಿ, ದೋಸೆಗೆ ಮಾಡುವ ಸಾಂಬಾರ್ ರೆಸಿಪಿ ಯನ್ನು ನಿಮಗೆ ತಿಳಿಸಲಾಗಿದೆ. ಸಾಂಬಾರ್ ಮಾಡಲು ಬೇಕಾಗುವ ಪದಾರ್ಥಗಳು: 10 – 15 ಸಾಂಬಾರ್ ಈರುಳ್ಳಿ, 3 ಚಮಚ ತೊಗರಿಬೇಳೆ, 15 – 20 ಬ್ಯಾಡಿಗೆ ಮೆಣಸಿನಕಾಯಿ, 1 ಟೊಮಾಟೊ, 100ml ಎಣ್ಣೆ, 3 ಚಮಚ ತೆಂಗಿನ ಕಾಯಿ ತುರಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, 1 ಚಮಚ ಬೆಲ್ಲ, 1 ಚಮಚ ಕಡಲೆ ಬೇಳೆ, 1 ಚಮಚ ಜೀರಿಗೆ, 1 ಚಮಚ ಕಾಳು ಮೆಣಸು, 1 ಚಮಚ ಗಸಗಸೆ, 1 ಚಮಚ ಉದ್ದಿನಬೇಳೆ, 1 ಚಮಚ ಸಾಸಿವೆ, ಸ್ವಲ್ಪ ಚಕ್ಕೆ, 1 ಚಮಚ ಧನಿಯಾ, ಸ್ವಲ್ಪ ಇಂಗು, ಚಿಟಿಕೆ ಅರಿಶಿನಪುಡಿ, ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು, ಸ್ವಲ್ಪ ಮೆಂತ್ಯ, ರುಚಿಗೆ ತಕ್ಕಷ್ಟು ಉಪ್ಪು.

ಸಾಂಬಾರ್ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಕುಕ್ಕರ್ ನನ್ನು ಇಟ್ಟು ಅದಕ್ಕೆ ತೆಗೆದುಕೊಂಡ ತೊಗರಿಬೇಳೆ, ತೊಗರಿಬೇಳೆ ಮುಳುಗುವಷ್ಟು ನೀರು, ಚಿಟಿಕೆ ಅರಿಶಿನ ಪುಡಿ ,1 ಚಮಚ ಎಣ್ಣೆಯನ್ನು ಹಾಕಿ ಮುಚ್ಚಳವನ್ನು ಮುಚ್ಚಿ 3 ವಿಷಲ್ ಹಾಕಿಸಿಕೊಂಡು ಪಕ್ಕಕ್ಕಿಡಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಗೂ 15 ಬ್ಯಾಡಗಿ ಮೆಣಸಿನಕಾಯಿಯನ್ನೂ ಹಾಕಿ ಫ್ರೈ ಮಾಡಿಕೊಂಡು ಒಂದು ಪ್ಲೇಟಿಗೆ ಹಾಕಿಕೊಳ್ಳಿ. ಮತ್ತೆ ಅದೇ ಬಾಣಲಿಗೆ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಕಡ್ಲೆಬೇಳೆ, ಗಸಗಸೆ, ಉದ್ದಿನಬೇಳೆ, ಧನಿಯಾ, ಜೀರಿಗೆ, ಕರಿ ಮೆಣಸು, ಮೆಂತ್ಯ, ಚಕ್ಕೆ ಹಾಗೂ ಇಂಗನ್ನು ಹಾಕಿ ಚೆನ್ನಾಗಿ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಿಕೊಳ್ಳಿ.

ನಂತರ ಒಂದು ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಬ್ಯಾಡಿಗೆ ಮೆಣಸಿನಕಾಯಿ, ಫ್ರೈ ಮಾಡಿಕೊಂಡ ಮಿಶ್ರಣ, ತೆಂಗಿನಕಾಯಿತುರಿ, ಸ್ವಲ್ಪ ನೀರನ್ನು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಮತ್ತೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, ಸ್ವಲ್ಪ ಕರಿಬೇವು, 5 ಬ್ಯಾಡಿಗೆ ಮೆಣಸಿನಕಾಯಿ,ಸಾಂಬಾರ್ ಈರುಳ್ಳಿಯನ್ನು ಹಾಕಿ ಮುಚ್ಚಳವನ್ನು ಮುಚ್ಚಿ 2 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮೊಟೊವನ್ನು ಹಾಕಿ ಬೇಯಿಸಿಕೊಳ್ಳಿ. ನಂತರ ಇದಕ್ಕೆ ರುಬ್ಬಿದ ಮಸಾಲೆಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ತದನಂತರ ಇದಕ್ಕೆ ತೆಗೆದುಕೊಂಡ ಬೆಲ್ಲ ಹಾಗೂ ಹುಣಸೆಹಣ್ಣಿನ ರಸವನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಬೇಯಿಸಿಕೊಂಡು ಸ್ಮ್ಯಾಶ್ ಮಾಡಿದ ಬೇಳೆ ಹಾಗೂ ಸಾಂಬಾರಿಗೆ ಬೇಕಾಗುವಷ್ಟು ನೀರನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ .ಕೊನೆಯದಾಗಿ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮುಚ್ಚುಳವನ್ನು ಮುಚ್ಚಿ 5 ನಿಮಿಷಗಳ ಕಾಲ ಕುದಿಸಿಕೊಂಡರೆ ಹೋಟೆಲ್ ಶೈಲಿಯ ಸಾಂಬಾರ್ ಸವಿಯಲು ಸಿದ್ಧ.