ಟಾಪ್ 10 ಟಿಆರ್ಪಿ ಲಿಸ್ಟ್ ಬಿಡುಗಡೆ, ನೀರಿಕ್ಷೆ ಮೂಡಿಸಿದ್ದ ಕನ್ನಡತಿ ಧಾರಾವಾಹಿಗೆ ಎಷ್ಟನೇ ಸ್ಥಾನ ಗೊತ್ತಾ??

ಟಾಪ್ 10 ಟಿಆರ್ಪಿ ಲಿಸ್ಟ್ ಬಿಡುಗಡೆ, ನೀರಿಕ್ಷೆ ಮೂಡಿಸಿದ್ದ ಕನ್ನಡತಿ ಧಾರಾವಾಹಿಗೆ ಎಷ್ಟನೇ ಸ್ಥಾನ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕಿರುತೆರೆಯಲ್ಲಿ ಬಹು ನಿರೀಕ್ಷಿತ ಕಳೆದ ವಾರದ ಟಿಆರ್ಪಿ ಲಿಸ್ಟ್ ಇಂದು ಎಂದಿನಂತೆ ಗುರುವಾರ ಬಿಡುಗಡೆಯಾಗಿದೆ. ಬಹು ನಿರೀಕ್ಷೆ ಮೂಡಿಸಿದ್ದ ದಾರವಾಹಿಗಳು ಈ ಬಾರಿ ತಮ್ಮ ಟಿಆರ್ಪಿ ಅನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಆದರೆ ಹೆಚ್ಚಿನ ನಿರೀಕ್ಷೆ ದಿನೇ ದಿನೇ ಮೂಡಿಸುತ್ತಿದ್ದರು ಕೂಡ ಕಲರ್ಸ್ ಕನ್ನಡ ಧಾರಾವಾಹಿಯ ಕನ್ನಡತಿ ಧಾರವಾಹಿ, ಈ ಬಾರಿ ಉತ್ತಮ ಸಾಧನೆ ಮಾಡುವಲ್ಲಿ ವಿಫಲವಾಗಿದೆ.

ಸ್ನೇಹಿತರೇ ಈ ವಾರದ ಟಾಪ್ 10 ಧಾರವಾಹಿಗಳ ಲಿಸ್ಟನ್ನು ನಾವು ನೋಡುವುದಾದರೇ, ನನ್ನರಸಿ ರಾಧೇ ಧಾರಾವಾಹಿ ಈ ವಾರ ಹತ್ತನೇ ಧಾರವಾಹಿಯಾಗಿ ಸ್ಥಾನ ಪಡೆದು ಕೊಂಡಿದೆ. ಇನ್ನುಳಿದಂತೆ ಟಾಪ್ 9 ನೇ ಧಾರವಾಹಿಯಾಗಿ ಮುದ್ದುಲಕ್ಷ್ಮಿ ಧಾರವಾಹಿ ಸ್ಥಾನ ಪಡೆದು ಕೊಂಡಿದ್ದು, ನಿರೀಕ್ಷೆ ಮೂಡಿಸುತ್ತಿದ್ದರೂ ಕೂಡ ಕನ್ನಡತಿ ಧಾರಾವಾಹಿ ಎಂಟನೇ ಸ್ಥಾನ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದೆ.

ಇನ್ನುಳಿದಂತೆ ಗಿಣಿರಾಮ 7, ಗೀತಾ ಧಾರಾವಾಹಿ 6, ಮಂಗಳ ಗೌರಿ ಮದುವೆ ಧಾರಾವಾಹಿಯೂ ಟಾಪ್ ಐದನೇ ಧಾರಾವಾಹಿಯಾಗಿ ಹೊರ ಹೊಮ್ಮಿದೆ. ಇನ್ನುಳಿದಂತೆ ಜೀ ಕನ್ನಡ ವಾಹಿನಿಯ ಧಾರವಾಹಿಗಳು ಟಾಪ್ ನಾಲ್ಕರ ಎಲ್ಲ ಸ್ಥಾನಗಳನ್ನು ಪಡೆದು ಕೊಂಡಿದ್ದು, ಪಾರು 4, ಗಟ್ಟಿಮೇಳ ಹಾಗೂ ನಾಗಿಣಿ ಮೂರನೇ ಸ್ಥಾನ ಹಂಚಿ ಕೊಂಡಿವೆ, ಜೊತೆ ಜೊತೆಯಲಿ 2 ಹಾಗೂ ಮೊದಲನೆ ಸ್ಥಾನದಲ್ಲಿ ಸತ್ಯ ಧಾರವಾಹಿ ಮುಂದುವರೆದಿದೆ. ಈ ಟಿ ಆರ್ ಪಿ ಲಿಸ್ಟ್ ಅನ್ನು ಅಧೀಕೃತ ಬಾರ್ಕ್ ಸಂಸ್ಥೆ ಬಿಡುಗಡೆ ಮಾಡಿದೆ. ಈ ಲಿಸ್ಟಿನ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.