ಅಂದಾಜು ಬಿಡಿ ರಾಬರ್ಟ ಚಿತ್ರದ ಒಂದು ವಾರದ ಅಸಲಿ ಕಲೆಕ್ಷನ್ ಇಲ್ಲಿದೆ ನೋಡಿ ! ಎಷ್ಟು ಕೋಟಿ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಸಾಲಿನ ಚಿತ್ರಗಳಿಗೆ ಈಗಾಗಲೇ ರಾಬರ್ಟ್ ಚಿತ್ರ ಸೇರಿಕೊಂಡಿದೆ, ಕೇವಲ ಒಂದು ವಾರದಲ್ಲಿಯೇ ಥಿಯೇಟರ್ಗಳಲ್ಲಿ ಬಹಳ ಅತ್ಯುತ್ತಮವಾಗಿ ಪ್ರದರ್ಶನ ಕಾಣುತ್ತಿರುವ ರಾಬರ್ಟ ಚಿತ್ರ ತಂಡ ಅಭಿಮಾನಿಗಳ ಮನೆ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ. ಕ್ಲಾಸ್ ಹಾಗೂ ಮಾಸ್ ಎರಡು ರೀತಿಯ ಅಭಿಮಾನಿಗಳಿಗೆ ಚಿತ್ರ ಇಷ್ಟವಾಗಿರುವ ಕಾರಣ ಈಗಾಗಲೇ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕಲೆಕ್ಷನ್ ಮೂಲಕ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿ ಕೊಂಡಿರುವ ರಾಬರ್ಟ್ ಚಿತ್ರ, ಬಿಡುಗಡೆಯಾದ ಒಂದು ವಾರದಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದರ ಪಕ್ಕ ಅಂಕಿ ಅಂಶಗಳು ಇದೀಗ ಬಿಡುಗಡೆಯಾಗಿದ್ದು ಈ ಕೆಳಗಿನಂತೆ ಕಲೆಕ್ಷನ್ ಇದೆ.

ಸ್ನೇಹಿತರೇ ಮೊದಲ ದಿನ 17.24 ಕೋಟಿ ಹಣವನ್ನು ಕೇವಲ ಕನ್ನಡದಲ್ಲಿ ರಾಬರ್ಟ ಚಿತ್ರ ಗಳಿಸಿತ್ತು, ಇನ್ನು ತೆಲುಗಿನಲ್ಲಿ 3.12 ಕೋಟಿ ಕಲಿಸುವುದರಲ್ಲಿ ಯಶಸ್ವಿಯಾಗಿತ್ತು ಇನ್ನು ಎರಡನೇ ದಿನ ಕನ್ನಡದಲ್ಲಿ 12.78 ಕೋಟಿ ಹಾಗೂ ಮೂರನೇ ದಿನ 14.10 ಕೋಟಿ ಗಳಿಸಿದ ರಾಬರ್ಟ್ ಚಿತ್ರ ನಾಲ್ಕನೇ ದಿನ ಭಾನುವಾರ ವಾದ ಕಾರಣ 15.68 ಕೋಟಿ ರೂಪಾಯಿಗಳಷ್ಟು ಕಲೆಕ್ಷನ್ ಮಾಡಿತ್ತು, ಇನ್ನು ಒಟ್ಟಾರೆಯಾಗಿ ಒಂದು ವಾರದ ಕನ್ನಡ ಕಲೆಕ್ಷನ್ ಎಷ್ಟು ಎಂಬುದನ್ನು ನಾವು ನೋಡುವುದಾದತರ್ 78.36 ಕೋಟಿಯನ್ನು ಕನ್ನಡದಲ್ಲಿ ಕಳಿಸಿದೆ. ಇನ್ನು ಒಂದು ವಾರದ ತೆಲುಗು ಕಲೆಕ್ಷನ್ ಎಷ್ಟು ಎಂದರೆ 7.61 ಕೋಟಿ ರೂಪಾಯಿಗಳು.

Post Author: Ravi Yadav