ಖಡಕ್ ರುಚಿಯ ಉತ್ತರ ಕರ್ನಾಟಕ ಸ್ಪೆಷಲ್ ಒಣ ಮೆಣಸಿನಕಾಯಿ ಚಟ್ನಿ ಮಾಡುವುದು ಹೇಗೆ ಗೊತ್ತೇ??

ಖಡಕ್ ರುಚಿಯ ಉತ್ತರ ಕರ್ನಾಟಕ ಸ್ಪೆಷಲ್ ಒಣ ಮೆಣಸಿನಕಾಯಿ ಚಟ್ನಿ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಉತ್ತರ ಕರ್ನಾಟಕ ಸ್ಪೆಷಲ್ ಒಣ ಮೆಣಸಿನಕಾಯಿ ಚಟ್ನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಒಣಮೆಣಸಿನ ಕಾಯಿ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು: 100ಗ್ರಾಂ ಬ್ಯಾಡಿಗೆ ಮೆಣಸಿನಕಾಯಿ, 1 ಗೆಡ್ಡೆ ಬೆಳ್ಳುಳ್ಳಿ, ಸಣ್ಣ ನಿಂಬೆ ಹಣ್ಣು ಗಾತ್ರದ ಹುಣಸೆಹಣ್ಣು, ಅರ್ಧ ಚಮಚ ಮೆಂತ್ಯ, 4 – 5 ಚಮಚ ಒಣಕೊಬ್ಬರಿ, 1 ಚಮಚ ಜೀರಿಗೆ, 2 ಚಮಚ ಬೆಲ್ಲ, 2 – 3 ಚಮಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು.

ಒಣ ಮೆಣಸಿನಕಾಯಿ ಚಟ್ನಿ ಮಾಡುವ ವಿಧಾನ: ಮೊದಲಿಗೆ ಬ್ಯಾಡಿಗೆ ಮೆಣಸಿನಕಾಯಿಯನ್ನು ಮುರಿದುಕೊಳ್ಳಿ. ನಂತರ ಸಾಧ್ಯವಾದಷ್ಟು ಅದರೊಳಗಿರುವ ಮೆಣಸಿನ ಬೀಜವನ್ನು ತೆಗೆಯಿರಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ ಬ್ಯಾಡಿಗೆ ಮೆಣಸಿನಕಾಯಿಯನ್ನು ಹಾಕಿಕೊಂಡು 2 – 3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಮೆಣಸಿನಕಾಯಿ ಮುಳುಗುವಷ್ಟು ನೀರನ್ನು ಹಾಕಿ 2 ನಿಮಿಷಗಳ ಕಾಲ ಕುದಿಸಿಕೊಂಡರೆ ಮೆಣಸಿನಕಾಯಿ ಸಾಫ್ಟ್ ಆಗುತ್ತದೆ. ನಂತರ ಗ್ಯಾಸ್ ಆಫ್ ಮಾಡಿ ಮೆಣಸಿನಕಾಯಿಯನ್ನು ನೀರಿನಿಂದ ಬೇರ್ಪಡಿಸಿಕೊಳ್ಳಿ.

ನಂತರ ಮೆಣಸಿನಕಾಯಿಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ತುರಿದ ಒಣ ಕೊಬ್ಬರಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವು, ಬೆಳ್ಳುಳ್ಳಿ, 1 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿದ ಮೆಂತ್ಯ, ಬೆಲ್ಲ, ಜೀರಿಗೆ, ಕೊತ್ತಂಬರಿ ಸೊಪ್ಪು ಹಾಗೂ ನೀರಿನಲ್ಲಿ ನೆನೆಸಿದ ಹುಣಸೆ ಹಣ್ಣು ಹಾಗೂ ಹುಣಸೆ ಹಣ್ಣಿನ ರಸ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಮತ್ತೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 – 3 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಗ್ಯಾಸ್ ಆಫ್ ಮಾಡಿಕೊಳ್ಳಿ. ನಂತರ ಇದಕ್ಕೆ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಎಣ್ಣೆಯೊಂದಿಗೆ ಮಿಕ್ಸ್ ಮಾಡಿಕೊಂಡರೆ ಒಣ ಮೆಣಸಿನಕಾಯಿ ಚಟ್ನಿ ಸವಿಯಲು ಸಿದ್ಧ. ಇದನ್ನು 15 ರಿಂದ 20 ದಿನಗಳ ಕಾಲ ಫ್ರಿಜ್ನಲ್ಲಿ ಸ್ಟೋರ್ ಮಾಡಬಹುದು.