ಕೊನೆಗೂ ಸುಶಾಂತ್ ಪ್ರಕರಣಕ್ಕೆ ಕೇಂದ್ರದ ಅಧಿಕೃತ ನೇರ ಎಂಟ್ರಿ, ರಿಯಾ ರವರಿಗೆ ಮತ್ತೊಂದು ಶಾಕ್. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಸುಶಾಂತ್ ಸಿಂಗ್ ರವರ ಪ್ರಕರಣದ ತನಿಖೆ ಮಾಡಲು ಹೋದಾಗ ನಿಮಗೆಲ್ಲರಿಗೂ ತಿಳಿದಿರುವಂತೆ ಘಟನೆಯನ್ನು ತನಿಖೆ ಮಾಡಲು ಹೋದಾಗ ವಿವಿಧ ಪ್ರಕರಣಗಳಲ್ಲಿ ವಿವಿಧ ಸೆಲೆಬ್ರಿಟಿಗಳ ಹೆಸರು ಬಹಿರಂಗ ಗೊಂಡಿತ್ತು. ಅದರಲ್ಲಿಯೂ ಸುಶಾಂತ್ ಸಿಂಗ್ ರವರ ಮಾಜಿ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿ ರವರಿಗೆ ಈ ಪ್ರಕರಣದಲ್ಲಿ ಅಷ್ಟೇ ಅಲ್ಲದೆ ಈಡೀ ಅಧಿಕಾರಿಗಳು ಹಣ ವರ್ಗಾವಣೆ ಪ್ರಕಾರದಲ್ಲಿಯೂ ಕೂಡ ಬಿಸಿ ಮುಟ್ಟಿಸಿದರು. ಅಷ್ಟೇ ಅಲ್ಲದೆ ಎನ್ ಐ ಎ ಅಧಿಕಾರಿಗಳು ಕೂಡಲ ಚಕ್ರವರ್ತಿ ರವರಿಗೆ ಬಿಸಿ ಮುಟ್ಟಿಸಿದರು

ಈ ಎಲ್ಲ ಪ್ರಕರಣಗಳಿಂದ ಹಲವಾರು ತಿಂಗಳುಗಳ ಕಾಲ ರಿಯಾ ಚಕ್ರವರ್ತಿ ಜೈಲಿನಲ್ಲಿ ಕಾಲ ಕಳೆದಿದ್ದರು, ಸೆಪ್ಟೆಂಬರ್ 8 ರಂದು ಎನ್ಸಿಪಿ ಅಧಿಕಾರಿಗಳು ರಿಯಾ ಅವರನ್ನು ವಶಕ್ಕೆ ಪಡೆದು ಕೊಂಡು ಜೈಲಿಗೆ ಕಳುಹಿಸಿ ತದ ನಂತರ ಅಕ್ಟೋಬರ್ 7ರಂದು ರಿಯಾ ಅವರಿಗೆ ಜಾಮೀನು ಸಿಕ್ಕಿತ್ತು. ಆದರೆ ಇದೀಗ ಜಾಮೀನಿನ ಮೇಲೆ ಕೇಂದ್ರ ಸ’ರ್ಕಾರದ ಕಣ್ಣು ಬಿದ್ದಂತೆ ಕಾಣುತ್ತಿದೆ.

ಹೌದು ಸ್ನೇಹಿತರೇ ರಿಯಾ ಚಕ್ರವರ್ತಿ ರವರಿಗೆ ನಿಮಗೆಲ್ಲರಿಗೂ ತಿಳಿದಿರುವಂತೆ ಒಂದು ಲಕ್ಷ ರೂಗಳ ವೈಯಕ್ತಿಕ ಬಾಂಡ್ ಆಧಾರದ ಮೇರೆಗೆ ಜಾಮೀನು ಜಾರಿ ಮಾಡಲಾಗಿತ್ತು, ಇದರ ಕುರಿತು ಇದೀಗ ಅಪಸ್ವರ ಎತ್ತಿರುವ ಕೇಂದ್ರ ಸ’ರ್ಕಾರವು ಈ ಕೂಡಲೇ ರಿಯಾ ಅವರ ಜಾಮೀನು ರದ್ದು ಮಾಡಿ ಆದೇಶ ಹೊರಡಿಸಬೇಕು ಹಾಗೂ ರಿಯಾ ರವರನ್ನು ಈ ಕೂಡಲೇ ಮತ್ತೊಮ್ಮೆ ಎನ್ಸಿಬಿ ಅಧಿಕಾರಿಗಳ ವಶಕ್ಕೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಬಳಿ ಅರ್ಜಿ ಸಲ್ಲಿಸಿದೆ. ಆದ ಕಾರಣ ಇದೀಗ ರಿಯಾ ರವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮುಂದೇನಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Post Author: Ravi Yadav