ಬಹಳ ನಿರೀಕ್ಷೆ ಮೂಡಿಸಿದ್ದ ರಾಬರ್ಟ್ ಎರಡನೇ ದಿನದ ಕಲೆಕ್ಷನ್ ಎಷ್ಟು ಗೊತ್ತೆ?? ಪೈರಸಿ ಭೂತ ಕಾಡಿತೇ??

ಬಹಳ ನಿರೀಕ್ಷೆ ಮೂಡಿಸಿದ್ದ ರಾಬರ್ಟ್ ಎರಡನೇ ದಿನದ ಕಲೆಕ್ಷನ್ ಎಷ್ಟು ಗೊತ್ತೆ?? ಪೈರಸಿ ಭೂತ ಕಾಡಿತೇ??

ನಮಸ್ಕಾರ ಸ್ನೇಹಿತರೇ ಕನ್ನಡದ ಖ್ಯಾತ ನಟರಲ್ಲಿ ಒಬ್ಬರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಟನೆ ಮಾಡಿರುವ ರಾಬರ್ಟ್ ಚಿತ್ರ ಇದೀಗ ಕನ್ನಡ ಹಾಗೂ ತೆಲುಗು ಚಿತ್ರರಂಗಗಳಲ್ಲಿ ಭರ್ಜರಿ ಯಶಸ್ಸಿನತ್ತ ದಾಪುಗಾಲು ಇಟ್ಟಿದೆ, ಬಿಡುಗಡೆಯಾದ ಮೊದಲನೇ ದಿನವೇ ಕನ್ನಡ ಹಾಗೂ ತೆಲುಗು ಎರಡು ಸೇರಿ 20 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದ ರಾಬರ್ಟ್ ಸಿನಿಮಾಗೆ ಪೈರಸಿ ಭೂತ ಕಾಡುತ್ತಿದೆಯೇ ಎಂಬ ಅನುಮಾನ ಮೂಡಿದೆ

ಹೌದು ಸ್ನೇಹಿತರೇ ನಿಮಗೆಲ್ಲರಿಗು ತಿಳಿದಿರುವಂತೆ ಇದೀಗ ರಾಬರ್ಟ್ ಸಿನಿಮಾ ಹಲವಾರು ವೆಬ್ಸೈಟ್ಗಳಲ್ಲಿ ಅಪ್ಲೋಡ್ ಆಗಿ ಬಿಟ್ಟಿದೆ, ಕೆಲವರು ರಾಬರ್ಟ್ ಸಿನಿಮಾ ಮೊಬೈಲ್ನಲ್ಲಿ ನೋಡುತ್ತಿರುವ ದೃಶ್ಯಗಳನ್ನು ಸ್ಕ್ರೀನ್ಶಾಟ್ ತೆಗೆದು ಪೋಸ್ಟ್ ಮಾಡುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಎರಡನೇ ದಿನದ ಕಲೆಕ್ಷನ್ ಹೊರ ಬಿದ್ದಿದ್ದು ನಿಜಕ್ಕೂ ಬೇಸರ ಮೂಡಿಸುವಂತಿದೆ.

ಹೌದು ಸ್ನೇಹಿತರೇ ರಾಬರ್ಟ್ ಸಿನಿಮಾ ಇದೀಗ ಎರಡನೇ ದಿನ ಮೊದಲ ದಿನಕ್ಕಿಂತ ಬಹುತೇಕ 5 ಕೋಟಿ ಕಡಿಮೆ ಕಲೆಕ್ಷನ್ ಮಾಡಿದ್ದು, ಸ್ಯಾಂಡಲ್ ವುಡ್ ನಲ್ಲಿ ಎರಡನೇ ದಿನ ಕೇವಲ 12.78 ಕೋಟಿ ಗಳಿಸುವುದರಲ್ಲಿ ಮಾತ್ರ ಯಶಸ್ವಿಯಾಗಿದೆ, ವಿಮರ್ಶೆ ಚೆನ್ನಾಗಿ ಕೇಳಿ ಬಂದ ಕಾರಣ ಕೇವಲ ಕನ್ನಡದಲ್ಲಿಯೇ ಎರಡನೇ ದಿನ 20 ಕೋಟಿ ದಾಟುತ್ತದೆ ಎಂಬ ಅಂದಾಜು ಮಾಡಲಾಗಿತ್ತು, ಆದರೆ ಅದು ಸಾಧ್ಯವಾಗಿಲ್ಲ. ಇನ್ನು ತೆಲುಗಿನ ರಾಜ್ಯಗಳ ಅಧಿಕೃತ ಮಾಹಿತಿ ಇನ್ನು ಹೊರ ಬಂದಿಲ್ಲ.