ಶೈನ್ ಶೆಟ್ಟಿ ರವರ ಗಲ್ಲಿ ಕಿಚನ್ ಷಲ್ ಸಬ್ಬಕ್ಕಿ ಇಡ್ಲಿ ಹಾಗೂ ಚಟ್ನಿ ಹೇಗೆ ಮಾಡುವುದು ಗೊತ್ತೇ??

ಶೈನ್ ಶೆಟ್ಟಿ ರವರ ಗಲ್ಲಿ ಕಿಚನ್ ಷಲ್ ಸಬ್ಬಕ್ಕಿ ಇಡ್ಲಿ ಹಾಗೂ ಚಟ್ನಿ ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಗಲ್ಲಿ ಕಿಚನ್ ಸ್ಪೆಷಲ್ ಸಬ್ಬಕ್ಕಿ ಇಡ್ಲಿ ಹಾಗೂ ಚಟ್ನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಗಲ್ಲಿ ಕಿಚನ್ ಶೈಲಿಯ ಸಬ್ಬಕ್ಕಿ ಇಡ್ಲಿ ಹಾಗೂ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು: 5 ಗಂಟೆಗಳ ಕಾಲ ನೆನೆಸಿದ ಒಂದು ಬಟ್ಟಲು ಸಬ್ಬಕ್ಕಿ, 5 ನಿಮಿಷಗಳ ಕಾಲ ನೆನೆಸಿದ ಒಂದು ಬಟ್ಟಲು ರವೆ,1 ಬಟ್ಟಲು ಮೊಸರು, ಸ್ವಲ್ಪ ಸಬ್ಬಕ್ಕಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಮುಕ್ಕಾಲು ಬಟ್ಟಲು ತೆಂಗಿನಕಾಯಿತುರಿ, 5 ಒಣಮೆಣಸಿನಕಾಯಿ, 1 ಚಮಚ ಧನಿಯಾ, ಸ್ವಲ್ಪ ಹುಣಸೆಹಣ್ಣು, ಸ್ವಲ್ಪ ಎಣ್ಣೆ.

ಗಲ್ಲಿ ಕಿಚನ್ ಶೈಲಿಯ ಸಬ್ಬಕ್ಕಿ ಇಡ್ಲಿ ಹಾಗೂ ಚಟ್ನಿ ಮಾಡುವ ವಿಧಾನ: ಸಬ್ಬಕ್ಕಿ ಇಡ್ಲಿ ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸಿ ಜಾರಿಗೆ 5 ಗಂಟೆಗಳ ಕಾಲ ನೆನೆಸಿದ ಸಬ್ಬಕ್ಕಿಯನ್ನು ಹಾಕಿ ತರಿತರಿಯಾಗಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಅದೇ ಬಟ್ಟಲಿಗೆ 5 ನಿಮಿಷಗಳ ಕಾಲ ನೆನೆಸಿದ ರವೆ, 1 ಬಟ್ಟಲು ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಬ್ಬಕ್ಕಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಡ್ಲಿ ಹಿಟ್ಟಿನ ಹದಕ್ಕೆ ಬರುವುದಕ್ಕೆ ನೀರಿನ ಅವಶ್ಯಕತೆ ಇದ್ದರೆ ಸ್ವಲ್ಪ ನೀರನ್ನು ಹಾಕಿಕೊಂಡು ಮಿಕ್ಸ್ ಮಾಡಿ 2 ಗಂಟೆಗಳ ಕಾಲ ನೆನೆಯಲು ಬಿಡಿ.

ಒಂದು ವೇಳೆ ನಿಮಗೆ ತಕ್ಷಣ ಬೇಕಾದರೆ ಸ್ವಲ್ಪ ಸೋಡವನ್ನು ಹಾಕಿ ಮಿಕ್ಸ್ ಮಾಡಿಕೊಂಡು ಇಡ್ಲಿ ಮಾಡಿಕೊಳ್ಳಬಹುದು. ನಂತರ ಗ್ಯಾಸ್ ಮೇಲೆ ಇಡ್ಲಿ ಕುಕ್ಕರ್ ನನ್ನು ಇಟ್ಟು 2 ಬಟ್ಟಲಿನಷ್ಟು ನೀರನ್ನು ಹಾಕಿ ಕಾಯಲು ಬಿಡಿ. ನಂತರ ಇಡ್ಲಿ ಪ್ಲೇಟಿಗೆ ಎಣ್ಣೆಯನ್ನು ಸವರಿ ಹಿಟ್ಟನ್ನು ಹಾಕಿ 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. 5 ನಿಮಿಷಗಳ ನಂತರ ಚಮಚದ ಸಹಾಯದಿಂದ ಇಡ್ಲಿಯನ್ನು ಪ್ಲೇಟಿನಿಂದ ತೆಗೆದರೆ ಗಲ್ಲಿ ಕಿಚನ್ ಸಬ್ಬಕ್ಕಿ ಇಡ್ಲಿ ಸವಿಯಲು ಸಿದ್ಧ.

ಚಟ್ನಿ ಮಾಡುವ ವಿಧಾನ: ಮಿಕ್ಸಿ ಜಾರಿಗೆ ಮುಕ್ಕಾಲು ಬಟ್ಟಲು ತೆಂಗಿನತುರಿ, 5 ಒಣಮೆಣಸಿನಕಾಯಿ, 1 ಚಮಚ ಧನಿಯಾ, ಸ್ವಲ್ಪ ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರನ್ನು ಹಾಕಿ ರುಬ್ಬಿಕೊಂಡರೆ ಚಟ್ನಿ ಸಿದ್ದವಾಗುತ್ತದೆ.