ಬಿಗ್ ಬಾಸ್ ಗೆ ದಾಖಲೆ ಮೊತ್ತದ ಸಂಭಾವನೆ ! ಒಂದು ಎಪಿಸೋಡಿಗೆ ಎಷ್ಟು ಕೋಟಿ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮ ಇನ್ನು ಕೆಲವೇ ಕೆಲವು ದಿನಗಳಲ್ಲಿ ಆರಂಭವಾಗಲಿದೆ, ಬಹು ನಿರೀಕ್ಷಿತ ಕನ್ನಡ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕಾರ್ಯಕ್ರಮವನ್ನು ಈ ಬಾರಿಯೂ ಕೂಡ ಕರ್ನಾಟಕದ ಅಭಿನಯ ಚಕ್ರವರ್ತಿ ಎಂದು ಖ್ಯಾತಿ ಪಡೆದು ಕೊಂಡಿರುವ ಕಿಚ್ಚ ಸುದೀಪ್ ರವರು ನಡೆಸಿ ಕೊಡುತ್ತಾರೆ. ಕನ್ನಡದಲ್ಲಿ ಬಿಗ್ ಬಾಸ್ ಆರಂಭವಾದ ದಿನದಿಂದಲೂ ಕೂಡ ಬಿಗ್ ಬಾಸ್ ಕಾರ್ಯಕ್ರಮಕ್ಕೆ ನಿರೂಪಕರಾಗಿ ಸುದೀಪ್ ರವರು ಕಾಣಿಸಿಕೊಳ್ಳುತ್ತಿದ್ದಾರೆ

ಹೀಗೆ ಪ್ರತಿ ಬಿಗ್ ಬಾಸ್ ನಲ್ಲಿಯೂ ಕಾಣಿಸಿಕೊಳ್ಳುವ ಕಿಚ್ಚ ಸುದೀಪ್ ರವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಮೆರುಗು ನೀಡುತ್ತಾರೆ ಎಂದರೆ ತಪ್ಪಾಗಲಾರದು. ಇದಕ್ಕೆ ಸ್ಪಷ್ಟ ಉದಾಹರಣೆ ಏನು ಎಂದರೇ ವಾರದ ಪೂರ್ತಿ ಪಡೆದು ಕೊಳ್ಳುವ ಟಿಆರ್ಪಿ ವಾರದ ಕೊನೆಯ ದಿನಗಳಲ್ಲಿ ಅಂದರೆ ಸುದೀಪ್ ಬರುವ ದಿನಗಳಂದು ಶೇಕಡ 50 ಕ್ಕಿಂತಲೂ ಹೆಚ್ಚು ಏರಿಕೆ ಕಾಣುತ್ತದೆ. ಹೀಗೆ ಕಾರ್ಯಕ್ರಮಕ್ಕೆ ಮೆರುಗು ನೀಡುವ ಸುದೀಪ್ ರವರು ಈ ಬಾರಿ ದಾಖಲೆ ಸಂಭಾವನೆಯನ್ನು ಪಡೆದು ಕೊಳ್ಳುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಹೌದು ಸ್ನೇಹಿತರೇ 2015 ರಿಂದ 2020 ರವರಿಗೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಇಡೀ ಸೀಸನ್ ಗೇ ಕಿಚ್ಚ ಸುದೀಪ್ ರವರು 4 ಕೋಟಿ ಪಡೆಯಲು ಒಪ್ಪಂದ ಮಾಡಿ ಕೊಂಡಿದ್ದರು. ಅಂದರೆ ಒಟ್ಟಾರೆಯಾಗಿ ಐದು ವರ್ಷಕ್ಕೆ ಒಟ್ಟು ಇಪ್ಪತ್ತು ಕೋಟಿ. ಆದರೆ ಇದೀಗ ಕಾರ್ಯಕ್ರಮ ಊಹಿಸಿದ ಕ್ಕಿಂತಲೂ ಹೆಚ್ಚು ಯಶಸ್ಸು ಪಡೆದು ಕೊಳ್ಳುತ್ತಿರುವ ಕಾರಣ ಒಮ್ಮೆಲೆ ಸುದೀಪ್ ರವರು ಕೇವಲ ಒಂದು ಎಪಿಸೋಡಿಗೆ ಬರೋಬ್ಬರಿ ಎಂಟು ಕೋಟಿ ಪಡೆದು ಕೊಳ್ಳಲಿದ್ದಾರೆ ಎಂಬುದು ತಿಳಿದು ಬಂದಿದೆ. ದೇಶದ ಪ್ರಖ್ಯಾತ ಮಾಧ್ಯಮಗಳಲ್ಲಿ ಒಂದಾಗಿರುವ ಸಾಕ್ಷಿ ಪತ್ರಿಕೆಯಲ್ಲಿ ಈ ಕುರಿತು ಸುದ್ದಿ ಪ್ರಸಾರವಾಗಿದ್ದು, ಸೀಸನ್ ಗೆ 4 ಕೋಟಿ ಪಡೆದು ಕೊಳ್ಳುತ್ತಿದ್ದ ಸುದೀಪ್ ರವರು ಇದೀಗ ಕೇವಲ 1 ಎಪಿಸೋಡೆ 8 ಕೋಟಿ ಪಡೆಯಲು ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ. ಇನ್ನು ಇವರು ಸಂಭಾವನೆ ಏರಿಸಿಕೊಂಡರೂ ಕೂಡ ವಾಹಿನಿಯು ಯಾವುದೇ ಹೆಚ್ಚಿನ ಮಾತುಕತೆ ನಡೆಸದೆ ಕೇಳಿದ ತಕ್ಷಣ ಸರಿ ಎಂದಿದೆ ಎಂಬುದು ತಿಳಿದು ಬಂದಿದೆ.

Post Author: Ravi Yadav