5 ನಿಮಿಷಗಳಲ್ಲಿ ನಾನ್ ರೋಟಿ ಮಾಡುವ ವಿಧಾನ ಹೇಗೆ ಗೊತ್ತೇ?? ಇಂದೇ ಟ್ರೈ ಮಾಡಿ ನೋಡಿ.

5 ನಿಮಿಷಗಳಲ್ಲಿ ನಾನ್ ರೋಟಿ ಮಾಡುವ ವಿಧಾನ ಹೇಗೆ ಗೊತ್ತೇ?? ಇಂದೇ ಟ್ರೈ ಮಾಡಿ ನೋಡಿ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೋಟೆಲ್ ಶೈಲಿಯ ನಾನ್ ರೋಟಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ನಾನ್ ರೋಟಿ ಮಾಡಲು ಬೇಕಾಗುವ ಸಾಮಗ್ರಿಗಳು: 1 ಚಮಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಬಟ್ಟಲು ಮೊಸರು, 1 ಎನೊ ಪ್ಯಾಕೆಟ್ ಅಥವಾ ಅಡುಗೆ ಸೋಡಾ, 300 ಗ್ರಾಂ ಮೈದಾ ಹಿಟ್ಟು, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಎಣ್ಣೆ, ಸ್ವಲ್ಪ ಕರಿ ಎಳ್ಳು.

ನಾನ್ ರೋಟಿ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಜರಡಿ ಹಿಡಿದುಕೊಂಡ ಮೈದಾ, 1 ಚಮಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು, 1 ಪ್ಯಾಕೆಟ್ ಎನೊ ಅಥವಾ ಅಡಿಗೆ ಸೋಡಾವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಚೆನ್ನಾಗಿ ಕಲಿಸಿಕೊಳ್ಳಬೇಕು. ನಂತರ 2 ಗಂಟೆಗಳ ಕಾಲ ಒಂದು ಪಾತ್ರೆಯನ್ನು ಅಥವಾ ಬಟ್ಟಲನ್ನು ಮುಚ್ಚಿ ನೆನೆಯಲು ಬಿಡಿ. ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಅದರ ಹೊರಭಾಗದ ಪೂರ್ತಿಯಾಗಿ ಎಣ್ಣೆಯನ್ನು ಹಚ್ಚಿಕೊಳ್ಳಿ. 2 ಗಂಟೆಗಳ ಕಾಲ ನೆನೆಸಿದ ಹಿಟ್ಟಿಗೆ ಸ್ವಲ್ಪ ಒಣ ಮೈದಾಹಿಟ್ಟನ್ನು ಹಾಕಿ ಚೆನ್ನಾಗಿ ನಾದಿಕೊಳ್ಳಿ. ಹಿಟ್ಟನ್ನು ಚಪಾತಿಗೆ ಬೇಕಾಗುವಷ್ಟು ಗಾತ್ರದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ.

ನಂತರ ಒಣ ಮೈದಾಹಿಟ್ಟನ್ನು ಉಪಯೋಗಿಸಿಕೊಂಡು ಚಪಾತಿ ಲಟ್ಟಿಸಿದ ಹಾಗೆ ಹಿಟ್ಟನ್ನು ಲಟ್ಟಿಸಿಕೊಳ್ಳಿ. ನಂತರ ಹಿಟ್ಟಿನ ಮೇಲೆ ಕರಿ ಎಳ್ಳು ಉದುರಿಸಿ ಕೊಳ್ಳಿ. ಅದೇ ರೀತಿಯಾಗಿ ಸಣ್ಣ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಸಹ ಉದುರಿಸಿಕೊಂಡು ಮತ್ತೊಂದು ಬಾರಿಗೆ ಲಟ್ಟಿಸಿಕೊಳ್ಳಿ. ಈ ರೀತಿ ಲಟ್ಟಿಸುವುದರಿಂದ ಹಿಟ್ಟಿನ ಮೇಲೆ ಹಾಕಿರುವ ಕೊತ್ತಂಬರಿ ಸೊಪ್ಪು ಹಾಗೂ ಕರಿಎಳ್ಳು ಹಿಟ್ಟಿಗೆ ಅಂಟಿಕೊಳ್ಳುತ್ತದೆ. ಇದೇ ರೀತಿಯಾಗಿ ಎಲ್ಲಾ ಹಿಟ್ಟನ್ನು ಮಾಡಿಕೊಳ್ಳಿ. ನಂತರ ಎಣ್ಣೆ ಹಚ್ಚಿದ ಬಾಣಲಿಗೆ ಮೇಲೆ ಇದನ್ನು ಹಾಕುವಾಗ ಅದರ ಹಿಂಭಾಗಕ್ಕೆ ಸ್ವಲ್ಪ ನೀರನ್ನು ಹಚ್ಚಿ ಬಾಣಲೆ ಮೇಲೆ ಹಾಕಿಕೊಳ್ಳಿ.

ನಂತರ ಗ್ಯಾಸನ್ನು ಹಚ್ಚಿ ಬಾಣಲೆಯನ್ನು ಇಟ್ಟುಕೊಳ್ಳಿ. ನಂತರ ರೋಟಿ ಬೆಂದು ಉಬ್ಬುವುದಕ್ಕೆ ಪ್ರಾರಂಭವಾಗುತ್ತದೆ. ನಂತರ ಬಾಣಲೆಯನ್ನು ಉಲ್ಟಾ ಮಾಡಿ ಬೆಂಕಿಯಲ್ಲಿ ಇನ್ನೊಂದು ಭಾಗವನ್ನು ಬೇಯಿಸಿಕೊಳ್ಳಿ. ಕೊನೆಯದಾಗಿ ರೋಟಿಯ ಮೇಲೆ ಎಣ್ಣೆ ಸವರಿಕೊಂಡರೆ ಹೋಟೆಲ್ ಶೈಲಿಯ ನಾನ್ ರೋಟಿ ಸವಿಯಲು ಸಿದ್ಧ.