2021ರಲ್ಲಿ ಕಿರುತೆರೆ ನಟಿಯರ ಸಂಭಾವನೆ ಹೇಗಿದೆ ಗೊತ್ತಾ?? ಅತಿ ಹೆಚ್ಚು ಹಣ ಮಾಡುವ ನಟಿ ಯಾರು ಗೊತ್ತಾ??

2021ರಲ್ಲಿ ಕಿರುತೆರೆ ನಟಿಯರ ಸಂಭಾವನೆ ಹೇಗಿದೆ ಗೊತ್ತಾ?? ಅತಿ ಹೆಚ್ಚು ಹಣ ಮಾಡುವ ನಟಿ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಇದೀಗ ಭಾರಿ ಬಜೆಟ್ ಹೊಂದಿರುವ ಧಾರವಾಹಿಗಳು ನಿರ್ಮಾಣವಾಗುತ್ತಿವೆ. ಒಂದು ಎಪಿಸೋಡಿಗೆ ಹಲವಾರು ಕೋಟಿಗಳನ್ನು ಖರ್ಚು ಮಾಡಲು ಕೂಡ ನಿರ್ಮಾಪಕರು ತಯಾರಾಗಿದ್ದಾರೆ. ಬಹಳ ವರ್ಣರಂಜಿತವಾಗಿ ಮೂಡಿ ಬರುತ್ತಿರುವ ಕಾರಣ ಪ್ರೇಕ್ಷಕರು ಕೂಡ ಬಹಳ ಆಸಕ್ತಿಯಿಂದ ಧಾರವಾಹಿಗಳನ್ನು ನೋಡುತ್ತಿದ್ದಾರೆ, ಇದರಿಂದ ನಿರ್ಮಾಪಕರು ಕೂಡ ಹಣದ ಕುರಿತು ಆಲೋಚನೆ ನಡೆಸುತ್ತಿಲ್ಲ. ಹೀಗೆ ಹಣದ ಕುರಿತು ಆಲೋಚನೆ ನಡೆಸಿದೆ ಬಿಗ್ ಬಜೆಟ್ ನಲ್ಲಿ ಧಾರವಾಹಿಗಳನ್ನು ನಿರ್ಮಾಣ ಮಾಡಿದಾಗ ಹಾಗೂ ಆ ಧಾರವಾಹಿ ಗಳು ಜನರಿಂದ ಹೆಚ್ಚು ಜನಪ್ರಿಯತೆ ಗಳಿಸಿದ ಕ್ರಮೇಣ ಕಲಾವಿದರ ಸಂಭಾವನೆಯೂ ಕೂಡ ಹೆಚ್ಚುತ್ತದೆ. ನಾವು ಇಂದು ಕನ್ನಡ ಕಿರುತೆರೆಯಲ್ಲಿ ಯಾವ್ಯಾವ ನಟಿಯರು ಎಷ್ಟು ಸಂಭಾವನೆ ಪಡೆಯುತ್ತಾರೆ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು ಎಂಬುದನ್ನು ತಿಳಿಸುತ್ತೇವೆ.

ಸ್ನೇಹಿತರೆ ಕನ್ನಡ ಕಲರ್ಸ್ ನಲ್ಲಿ ಪ್ರಸಾರವಾಗುವ ಮಿಥುನ ರಾಶಿ ಧಾರವಾಹಿ ನಟಿಗೆ ಒಂದು ದಿನಕ್ಕೆ 20 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ, ಇನ್ನು ಕನ್ನಡತಿ ಧಾರವಾಹಿಗೆ ನಟಿ ರಂಜಿನಿ ರವರು ಬರೋಬ್ಬರಿ 1 ಎಪಿಸೋಡೆ 30 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬುದು ತಿಳಿದು ಬಂದಿದೆ. ಇನ್ನು ಬ್ರಹ್ಮಗಂಟು ಧಾರವಾಹಿ ನಟಿ ಗೀತಾ ರವರು ಎಪಿಸೋಡಿಗೆ 20 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ, ಮಂಗಳ ಗೌರಿ ಧಾರಾವಾಹಿ ನಟಿ ಕಾವ್ಯ ರವರು 25 ಸಾವಿರ ರೂಪಾಯಿಯನ್ನು ಸಂಭಾವನೆಯಾಗಿ ಪಡೆಯುತ್ತಾರೆ ಎಂಬುದು ತಿಳಿದುಬಂದಿದೆ.

ಇನ್ನುಳಿದಂತೆ ಕನ್ನಡದ ಟಾಪ್ ಧಾರವಾಹಿಗಳಲ್ಲಿ ಒಂದಾಗಿರುವ ಪಾರು ಧಾರವಾಹಿ ನಟಿ ಮೋಕ್ಷಿತ ರವರು ಒಂದು ಎಪಿಸೋಡಿಗೆ 28000, ನಾಗಿಣಿ ಟು ಧಾರಾವಾಹಿ ನಟಿ ನಮ್ರತ ಗೌಡರವರು 1 ಎಪಿಸೋಡೆ 20 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಇನ್ನು ಕನ್ನಡದ ಟಾಪ್ ಧಾರವಾಹಿಗಳಲ್ಲಿ ಮೊದಲನೇ ಸಾರಿನಲ್ಲಿ ಕಂಡು ಬರುವ ಜೊತೆ ಜೊತೆಯಲಿ ಧಾರವಾಹಿ ನಟಿ ಅನು ಸಿರಿಮನೆ ಪಾತ್ರದಾರಿ ಮೇಘ ಶೆಟ್ಟಿ ರವರು ಬರೋಬ್ಬರಿ ಒಂದು ಎಪಿಸೋಡಿಗೆ 35 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ, ಇನ್ನು ಇವರನ್ನು ಮೀರಿಸುವ ಸಂಭಾವನೆ ಪಡೆಯುವುದು ಗಟ್ಟಿಮೇಳ ಧಾರವಾಹಿಯ ಅಮೂಲ್ಯ ಪಾತ್ರದಾರಿ ನಿಶಾ ರವರು, ಇವರು ಮೂಲಗಳ ಪ್ರಕಾರ ಒಂದು ಎಪಿಸೋಡಿಗೆ 40 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ ಎಂಬುದು ತಿಳಿದುಬಂದಿದೆ.