ಹೆಸರುಬೇಳೆ ಕೋಸಂಬರಿಯನ್ನು ಹೀಗೆ ಮಾಡಿ ನೋಡಿ, ಒಮ್ಮೆ ತಿಂದರೇ ಮತ್ತೆ ಮತ್ತೆ ಕೇಳುತ್ತಾರೆ. ಹೇಗೆ ಗೊತ್ತೇ??

ಹೆಸರುಬೇಳೆ ಕೋಸಂಬರಿಯನ್ನು ಹೀಗೆ ಮಾಡಿ ನೋಡಿ, ಒಮ್ಮೆ ತಿಂದರೇ ಮತ್ತೆ ಮತ್ತೆ ಕೇಳುತ್ತಾರೆ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೆಸರುಬೇಳೆ ಕೋಸಂಬರಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ನಾವು ಹೇಳುವ ರೀತಿ ಮಾಡಿದರೆ 2 ದಿನ ಇಟ್ಟರೂ ಸಹ ಹಾಳಾಗುವುದಿಲ್ಲ.

ಹೆಸರುಬೇಳೆ ಕೋಸಂಬರಿ ಮಾಡಲು ಬೇಕಾಗುವ ಸಾಮಗ್ರಿಗಳು: ಅರ್ಧ ಗಂಟೆಗಳ ಕಾಲ ನೆನೆಸಿದ 300 ಗ್ರಾಂನಷ್ಟು ಹೆಸರುಬೇಳೆ, 1 ಬಟ್ಟಲು ತೆಂಗಿನಕಾಯಿ ತುರಿ, ಸ್ವಲ್ಪ ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಸಾಸಿವೆ, 4 ಬ್ಯಾಡಿಗೆ ಮೆಣಸಿನಕಾಯಿ, ಸ್ವಲ್ಪ ಎಣ್ಣೆ, 1 ಸೌತೆಕಾಯಿ, 1 ಕ್ಯಾರೆಟ್, 2 ಹಸಿಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಅರ್ಧ ನಿಂಬೆ ಹಣ್ಣು.

ಹೆಸರುಬೇಳೆ ಕೋಸಂಬರಿ ಮಾಡುವ ವಿಧಾನ: ಒಂದು ದೊಡ್ಡ ಪ್ಲೇಟನ್ನು ತೆಗೆದುಕೊಂಡು ಅದಕ್ಕೆ ನೆನೆಸಿದ ಹೆಸರು ಬೇಳೆಯನ್ನು ಸಮದಟ್ಟಾಗಿ ಹರಡಿಕೊಳ್ಳಿ. ನಂತರ ಸಣ್ಣಗೆ ಹಚ್ಚಿದ ಸೌತೆಕಾಯಿಯನ್ನು ಹರಡಿಕೊಳ್ಳಿ. ನಂತರ ಇದಕ್ಕೆ ತುರಿದ ಕ್ಯಾರೆಟನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿಯನ್ನು ಹಾಕಿಕೊಳ್ಳಿ.ನಂತರ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು ತೆಂಗಿನಕಾಯಿ ತುರಿಯನ್ನು ಪ್ಲೇಟಿನ ಎಲ್ಲಾ ಭಾಗಕ್ಕೆ ಸಮನಾಗಿ ಹರಡಿಕೊಳ್ಳಿ. ನಂತರ ನಿಂಬೆಹಣ್ಣಿನ ರಸವನ್ನು ಹಿಂಡಿಕೊಳ್ಳಿ.

ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ ಸಾಸುವೆ, ಬ್ಯಾಡಿಗೆ ಮೆಣಸಿನಕಾಯಿ, ಸ್ವಲ್ಪ ಕರಿಬೇವನ್ನು ಹಾಕಿ ಒಗ್ಗರಣೆ ಮಾಡಿಕೊಂಡು ಪ್ಲೇಟಿನ ಎಲ್ಲಾ ಭಾಗಕ್ಕೆ ಹಾಕಿಕೊಳ್ಳಿ. ಕೊನೆಯದಾಗಿ ನಿಮಗೆ ಬೇಕಾಗುವಷ್ಟು ಒಂದು ಕಡೆಯಿಂದ ಹೆಸರುಬೇಳೆ ಕೋಸಂಬರಿಯನ್ನು ತೆಗೆದುಕೊಂಡು ಬೇಕಾಗುವಷ್ಟು ಉಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಂಡರೆ ಹೆಸರುಬೇಳೆ ಕೋಸಂಬರಿ ಸವಿಯಲು ಸಿದ್ದ. ಒಂದು ಕಡೆಯಿಂದ ತೆಗೆದುಕೊಂಡರೆ 2 ದಿನಗಳವರೆಗೆ ಸಂಗ್ರಹಿಸಬಹುದು.