ಶರ್ಟ್ ಧರಿಸಿ, ಕೈಯಲ್ಲೊಂದು ಊಟದ ಬುತ್ತಿ ಹಿಡಿದ ಲುಕ್ ನಲ್ಲಿ ಕಾಣಿಸಿಕೊಂಡ ಕನ್ನಡತಿ, ಯಾಕೆ ಗೊತ್ತಾ??

ಶರ್ಟ್ ಧರಿಸಿ, ಕೈಯಲ್ಲೊಂದು ಊಟದ ಬುತ್ತಿ ಹಿಡಿದ ಲುಕ್ ನಲ್ಲಿ ಕಾಣಿಸಿಕೊಂಡ ಕನ್ನಡತಿ, ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಜನರ ಅಚ್ಚುಮೆಚ್ಚಿನ ಕನ್ನಡತಿ ಧಾರಾವಾಹಿ ನಾಯಕಿಯಾಗಿರುವ ರಂಜನಿ ರಾಘವನ್ ರವರು ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ನಟನೆ ಮಾಡುತ್ತಿದ್ದಾರೆ. ಈಗಾಗಲೇ ಹಲವಾರು ಧಾರವಾಹಿಗಳಲ್ಲಿ ನಟನೆ ಮಾಡಿರುವ ರಂಜನಿ ರಾಘವನ್ ರವರು ಇತ್ತೀಚೆಗೆ ಕನ್ನಡತಿ ಧಾರಾವಾಹಿ ನಟಿಸುವ ಮೂಲಕ ಮತ್ತಷ್ಟು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ ಇದೇ ರಂಜನಿ ರಾಘವನ್ ರವರು ಶರ್ಟ್ ಧರಿಸಿ, ಕೈಯಲ್ಲೊಂದು ಊಟದ ಬುತ್ತಿ ಹಿಡಿದು ಅಪ್ಪಟ ಗ್ರಾಮೀಣ ಮಹಿಳೆಯ ರೀತಿಯಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಇದು ಯಾವುದೇ ಸಿನಿಮಾ ಮಾಡೋಕೆ ಹೊರಟಿರುವದಲ್ಲ ಅಥವಾ ಯಾವುದೇ ಧಾರವಾಹಿಯ ಶೂಟಿಂಗ್ ಅಲ್ಲ ಬದಲಾಗಿ ಬಹಳ ಉತ್ತಮ ಸಂದೇಶವುಳ್ಳ ಒಂದು ಯೋಜನೆಯನ್ನು ಉತ್ತೇಜಿಸಲು ಗ್ರಾಮೀಣ ಮಹಿಳೆಯ ಲುಕ್ ನಲ್ಲಿ ರಂಜನಿ ರಾಘವನ್ ಅವರು ನಟನೆ ಮಾಡಿದ್ದಾರೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಹಳ್ಳಿಯ ಜನರು ಕೂಲಿಗಾಗಿ ಪೇಟೆಯ ಕಡೆಗೆ ಬರುವುದನ್ನು ತಡೆಯಲು ನರೇಗಾ ಯೋಜನೆಯನ್ನು ಜಾರಿ ಮಾಡಲಾಗಿದೆ. ಯೋಜನೆಯಲ್ಲಿ ನೀವು ನಿಮ್ಮ ಹತ್ತಿರದ ಪಂಚಾಯಿತಿಗಳಲ್ಲಿ ಉದ್ಯೋಗ ಕಾರ್ಡ್ ಪಡೆದುಕೊಂಡರೇ ನಿಮಗೆ ವರ್ಷದಲ್ಲಿ ಕನಿಷ್ಠ 100 ದಿನಗಳ ಉದ್ಯೋಗ ಸಿಗಲಿದೆ, ಪ್ರತಿದಿನವೂ 275 ರೂಪಾಯಿಯಂತೆ ಕೂಲಿ ಸಿಗಲಿದೆ. ಪುರುಷರಿಗೆ ಹಾಗೂ ಮಹಿಳೆಯರಿಗೆ ಇಬ್ಬರಿಗೂ ಸಮಾನ ವೇತನ ನೀಡಲಾಗುತ್ತದೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಳ್ಳಲು ಹಾಗೂ ನರೇಗಾ ಯೋಜನೆ ಯನ್ನು ಪ್ರೋತ್ಸಾಹಿಸಿ ಗ್ರಾಮೀಣ ಜನರು ಈ ಯೋಜನೆಯ ಪ್ರಯೋಜನವನ್ನು ಪಡೆಯುವಂತೆ ಮಾಡಲು ಒಂದು ಜಾಹೀರಾತಿನಲ್ಲಿ ರಂಜನಿ ರಾಘವನ್ ರವರು ಕಾಣಿಸಿಕೊಂಡಿದ್ದಾರೆ.