ಮಿಲನ ಧಾರಾವಾಹಿ ಪ್ರಾರ್ಥನಾ ಪಾತ್ರದಾರಿ ನೆನೆಪಿದ್ದಾರಾ?? ಇವರ ಕುರಿತು ನಿಮಗೆ ತಿಳಿಯದ ಮಾಹಿತಿ.

ನಮಸ್ಕಾರ ಸ್ನೇಹಿತರೆ ಕಳೆದ ಹಲವಾರು ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಿಲನ ಧಾರಾವಾಹಿ ನಿಮಗೆಲ್ಲರಿಗೂ ತಿಳಿದಿರುತ್ತದೆ. ಅಂದಿನ ಕಾಲದಲ್ಲಿ ಧಾರಾವಾಹಿ ಗಳಿಗೆ ಹೆಚ್ಚಿನ ವೀಕ್ಷಕರು ಇಲ್ಲದೆ ಇದ್ದರೂ ಕೂಡ ಮಿಲನ ಧಾರವಾಹಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಧಾರವಾಹಿ ಮುಗಿದು ಹಲವಾರು ವರ್ಷಗಳು ಕಳೆದರೂ ಕೂಡ ಮೇಲಿನ ಧಾರವಾಹಿ ಅಭಿಮಾನಿಗಳು ಇನ್ನು ವಿಡಿಯೋಗಳು ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಈ ಧಾರಾವಾಹಿಯಲ್ಲಿ ಕೆಲವು ತಿಂಗಳುಗಳ ಕಾಲ ಪ್ರಾರ್ಥನಾ ಎಂಬ ಪಾತ್ರಕ್ಕೆ ಜೀ’ವ ತುಂಬಿದ ವಿನುತ ರವರು ಧಾರವಾಹಿಯ ಅರ್ಧದಲ್ಲಿಯೇ ಧಾರವಾಹಿಯನ್ನು ಬಿಟ್ಟು ಹೋಗಿದ್ದರು. ಈಕೆಯ ನಟನೆ ನೋಡಿದ ಜನರು ಸಾಕಷ್ಟು ಜನರು ಇವರಿಗೆ ಅಭಿಮಾನಿಗಳಾಗಿದ್ದಾರೆ. ಅದೇ ಕಾರಣಕ್ಕಾಗಿ ಅವರು ಧಾರವಾಹಿ ಬಿಟ್ಟು ಹೋದರು ಕೂಡ ಜನರು ಇನ್ನೂ ಅವರನ್ನು ಮರೆತಿಲ್ಲ.

ಮೊದಲಿನಿಂದಲೂ ನಟಿಯಾಗಬೇಕು ಎಂಬ ಆಸೆಯನ್ನು ಹೊಂದಿದ್ದ ವಿನುತ ರವರು ಪೋಷಕರ ಅನುಮತಿ ಪಡೆಯಲು ಮೊದಮೊದಲಿಗೆ ಸಾಧ್ಯವಾಗಿರಲಿಲ್ಲ. ಇವರ ಹಠದ ಮೇರೆಗೆ ತಾಯಿ ಒಪ್ಪಿದರೂ ಕೂಡ ತಂದೆ ಹಲವಾರು ತಿಂಗಳುಗಳ ಕಾಲ ಯಾವುದೇ ಕಾರಣಕ್ಕೂ ನಟನೆ ಮಾಡಬಾರದು ಎಂದು ಪಟ್ಟು ಹಿಡಿದರು. ಅದೇಗೋ ಹಲವಾರು ತಿಂಗಳುಗಳ ಕಾಲ ಹಟಮಾಡಿ ತಂದೆಯನ್ನು ಒಪ್ಪಿಸಿ ಮೂರು ತಿಂಗಳುಗಳ ಕಾಲ ನಟನೆ ಮಾಡುವ ಟ್ರೈನಿಂಗ್ ಪಡೆದುಕೊಳ್ಳುತ್ತಾರೆ.

ತದನಂತರ ಹಲವಾರು ಸಿನಿಮಾಗಳಿಗೆ ಹಾಗೂ ಧಾರವಾಹಿಗಳಿಗೆ ಆಡಿಶನ್ ನೀಡಲು ತೆರಳಿದಾಗ, ನಾಚಿಕೆ ಸ್ವಭಾವದಿಂದ ನಾನು ಯಾವುದೇ ಕಾರಣಕ್ಕೂ ಮಾಡ್ರನ್ ಬಟ್ಟೆಗಳನ್ನು ಹಾಕುವುದಿಲ್ಲ, ನೆಗೆಟಿವ್ ರೋಲ್ ಗಳನ್ನು ಕೂಡ ಮಾಡುವುದಿಲ್ಲ ಎಂದು ಹೇಳಿ ತಮಗೆ ಸೂಕ್ತ ವಾಗುವಂತಹ ಪಾತ್ರಕ್ಕಾಗಿ ಹಲವಾರು ತಿಂಗಳುಗಳ ಕಾಲ ಕಾದಿದ್ದರು.

ಇದಾದ ಬಳಿಕ ನಟಿ ವಿನುತ ರವರಿಗೆ ಮನೆಯವರು ಮದುವೆ ನಿಶ್ಚಯಿಸಿದಾಗ ತಂದೆ ನೀನು ನಟನೆ ಮಾಡಬೇಕು ಎಂದರೆ ಮೊದಲು ನೀನು ನಿನ್ನ ಗಂಡನ ಅನುಮತಿ ಪಡೆದುಕೊಳ್ಳಬೇಕು ಎಂದು ಕಂಡೀಶನ್ ಹಾಕುತ್ತಾರೆ. ಮದುವೆ ಯಾದ ಮೇಲೆ ಗಂಡನು ನಟನೆ ಮಾಡಲು ಗ್ರೀನ್ ಸಿಗ್ನಲ್ ನೀಡುತ್ತಾರೆ. ಹೀಗೆ ಗಂಡನ ಅನುಮತಿ ಪಡೆದು ಮತ್ತೆ ಆಡಿಶನ್ ನೀಡಲು ಪ್ರಾರಂಭ ಮಾಡುತ್ತಾರೆ. ಆದರೆ ಹಲವಾರು ತಿಂಗಳುಗಳ ಕಾಲ ಬಹಳ ನಾಚಿಕೆ ಸ್ವಭಾವ ಇರುವ ಕಾರಣ ಹಾಗೂ ನೆಗೆಟಿವ್ ಮತ್ತು ಗ್ಲಾಮರಸ್ ರೋಲ್ ಗಳಲ್ಲಿ ಕಾಣಿಸಿಕೊಳ್ಳಲ್ಲ ಎಂಬ ಷರತ್ತು ಇರುವ ಕಾರಣ ಇವರಿಗೆ ಅವಕಾಶಗಳೇ ಸಿಗಲಿಲ್ಲ.

ಆದರೆ ಮಿಲನ ಧಾರಾವಾಹಿ ಪ್ರಾರ್ಥನಾ ಪಾತ್ರದ ಕುರಿತು ಕೇಳಿ, ಧಾರವಾಹಿಯಲ್ಲಿ ನಟಿಯು ಸದಾ ಆಚಾರ-ವಿಚಾರ ಹಾಗೂ ಧಾರ್ಮಿಕ ನಂಬಿಕೆಗಳನ್ನು ಪಾಲಿಸುತ್ತಾ ನಟಿಸುವ ಪಾತ್ರ ಎಂದು ತಿಳಿದ ತಕ್ಷಣ ಒಪ್ಪಿಕೊಂಡು ಧಾರವಾಹಿಯಲ್ಲಿ ನಟನೆ ಮಾಡಿದ್ದರು. ವಿಶೇಷವೇನೆಂದರೆ ಈ ಧಾರಾವಾಹಿಯಲ್ಲಿ ಇವರು ನಟಿಸಿದ ಪಾತ್ರ ಶೇಕಡ 70ರಷ್ಟು ಇವರ ನಿಜಜೀವನಕ್ಕೆ ಹೊಂದುತ್ತಿತ್ತು ಎಂದು ಸಂದರ್ಶನದಲ್ಲಿ ಅವರೇ ಹೇಳಿದ್ದಾರೆ.

ಈ ಧಾರಾವಾಹಿ ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತು. ಇದಾದ ಬಳಿಕ ಇವರಿಗೆ ಹಲವಾರು ಸಿನಿಮಾಗಳಲ್ಲಿ ನೆಗೆಟಿವ್ ರೋಲ್ ಗಳು ಹಾಗೂ ನಟಿಯಾಗಿ ನಟಿಸುವ ಅವಕಾಶಗಳು ಬಂದರೂ ಕೂಡ ನಾನು ಯಾವುದೇ ಕಾರಣಕ್ಕೂ ಸಿನಿಮಾ ಮಾಡುವುದಿಲ್ಲ ಸಿನಿಮಾದಲ್ಲಿ ಅವಶ್ಯಕತೆಗೆ ತಕ್ಕಂತೆ ಗ್ಲಾಮರಸ್ ರೋಲ್ ಗಳನ್ನು ಮಾಡಬೇಕಾಗುತ್ತದೆ.

ಆದರೆ ನಾನು ಯಾವುದಕ್ಕೂ ಹೋಗುವುದಿಲ್ಲ ನನಗೆ ಹೀರೋ ತಂಗಿ ಅಥವಾ ಇನ್ಯಾವುದೋ ಪೋಷಕ ನಟರ ಪಾತ್ರ ನೀಡಿದರು ಪರವಾಗಿಲ್ಲ ನಾನು ನಟಿಸುತ್ತೇನೆ ಎಂದು ಹೇಳಿದ್ದರು. ಇದಾದ ಬಳಿಕ ಧಾರವಾಹಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಆದರೆ ಇದ್ದಕ್ಕಿದ್ದಂತೆ ಧಾರವಾಹಿಯಿಂದ ದೂರ ಸರಿದ ವಿನುತ ರವರು ಇಲ್ಲಿಯವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಆಗಲಿ ಅಥವಾ ಇನ್ಯಾವುದೇ ಧಾರವಾಹಿಗಳಲ್ಲಿ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಎಲ್ಲಾ ವಿಷಯಗಳನ್ನು ಅವರಿಗೆ ಬಹಿರಂಗಪಡಿಸಿದ್ದಾರೆ.

Facebook Comments

Post Author: Ravi Yadav