ಆಂಧ್ರ ಶೈಲಿಯ ದಾಲ್ ಪಪ್ಪು ಹೀಗೆ ಮಾಡಿ ನೋಡಿ, ಎಲ್ಲರೂ ಸ್ವಲ್ಪ ಜಾಸ್ತಿನೇ ಊಟ ಮಾಡ್ತಾರೆ. ಎಲ್ಲರಿಗೂ ಇಷ್ಟವಾಗುತ್ತದೆ.

ಆಂಧ್ರ ಶೈಲಿಯ ದಾಲ್ ಪಪ್ಪು ಹೀಗೆ ಮಾಡಿ ನೋಡಿ, ಎಲ್ಲರೂ ಸ್ವಲ್ಪ ಜಾಸ್ತಿನೇ ಊಟ ಮಾಡ್ತಾರೆ. ಎಲ್ಲರಿಗೂ ಇಷ್ಟವಾಗುತ್ತದೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಆಂಧ್ರಶೈಲಿಯ ದಾಲ್ ಪಪ್ಪು ಮಾಡುವ ವಿಧಾನವನ್ನು ತಿಳಿಸುತ್ತೇವೆ. ಆಂಧ್ರ ಶೈಲಿಯ ದಾಲ್ ಪಪ್ಪು ಮಾಡಲು ಬೇಕಾಗುವ ಸಾಮಗ್ರಿಗಳು: 1 ಕಟ್ಟು ಪಾಲಕ್ ಸೊಪ್ಪು, ಅರ್ಧ ಕಟ್ಟು ಚಿಲ್ಕರವೆ ಸೊಪ್ಪು, 2 ಈರುಳ್ಳಿ, 1 ಟೊಮ್ಯಾಟೊ, ಅರ್ಧ ಬಟ್ಟಲು ತೊಗರಿಬೇಳೆ, ಕಾಲು ಬಟ್ಟಲು ಹೆಸರುಬೇಳೆ, 10 -12 ಹಸಿಮೆಣಸಿನಕಾಯಿ, 2 ಒಣಮೆಣಸಿನಕಾಯಿ, 4 ಚಮಚ ಎಣ್ಣೆ, 1 ಗೆಡ್ಡೆ ಬೆಳ್ಳುಳ್ಳಿ, ಸ್ವಲ್ಪ ಕರಿಬೇವು, 1 ಚಮಚ ಜೀರಿಗೆ, ಅರ್ಧ ಚಮಚದಷ್ಟು ಅರಿಶಿನ ಪುಡಿ, 1 ಚಮಚ ಧನಿಯಾ ಪುಡಿ, ಅರ್ಧ ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು, 1 ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು.

ಆಂಧ್ರಶೈಲಿಯ ದಾಲ್ ಪಪ್ಪು ಮಾಡುವ ವಿಧಾನ: ಮೊದಲಿಗೆ ಒಂದು ಬಟ್ಟಲನ್ನು ತೆಗೆದುಕೊಂಡು, ಅದಕ್ಕೆ ತೊಗರಿಬೇಳೆ ಮತ್ತು ಹೆಸರು ಬೇಳೆಯನ್ನು ಹಾಕಿ ನೀರಿನಿಂದ 2 – 3 ಬಾರಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಕುಕ್ಕರ್ ಇಟ್ಟುಕೊಂಡು ಅದಕ್ಕೆ ತೊಳೆದ ಬೇಳೆ, ಸ್ವಲ್ಪ ನೀರು, ಅರಿಶಿನ ಪುಡಿ, 1 ಚಮಚ ಎಣ್ಣೆಯನ್ನು ಹಾಕಿ 3 ವಿಷಲ್ ಆದ ನಂತರ ಕುಕ್ಕರ್ ತಣ್ಣಗಾಗಲು ಬಿಡಿ.ಕುಕ್ಕರ್ ತಣ್ಣಗಾದ ನಂತರ ಅದರಲ್ಲಿರುವ ಬೇಳೆಯನ್ನು ಸ್ಮಾಶ್ ಮಾಡಿಕೊಳ್ಳಿ. ನಂತರ ಇದಕ್ಕೆ ಕಾಲು ಲೋಟದಷ್ಟು ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ.

ಎಣ್ಣೆ ಕಾ’ದ ನಂತರ ಅದಕ್ಕೆ ಜೀರಿಗೆ, ಕರಿಬೇವು, ಹಚ್ಚಿದ ಹಸಿಮೆಣಸಿನಕಾಯಿ, ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಅರ್ಧ ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿ ಹಾಕಿ 2 – 3 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮೊಟೊ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಪಾಲಾಕ್ ಸೊಪ್ಪು, ಚಿಲ್ಕರವೆ ಸೊಪ್ಪು, ಅರ್ಧ ಲೋಟದಷ್ಟು ನೀರನ್ನು ಹಾಕಿ ಮಿಕ್ಸ್ ಮಾಡಿಕೊಂಡು ಐದು ನಿಮಿಷಗಳ ಕಾಲ ಬೇಯಲು ಬಿಡಿ. ನಂತರ ನೆನೆಸಿದ ಹುಣಸೆ ಹಣ್ಣಿನ ರಸ, ಧನಿಯಾ ಪುಡಿ, ಸ್ಮಾಶ್ ಮಾಡಿದ ಬೇಳೆಯನ್ನು ಹಾಕಿ ಮಿಕ್ಸ್ ಮಾಡಿಕೊಂಡು ಮತ್ತೆ 5 ನಿಮಿಷಗಳ ಕಾಲ ಬೇಯಲು ಬಿಡಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಸಣ್ಣ ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ಕಾಯಲು ಬಿಡಿ. ತುಪ್ಪ ಕಾದ ನಂತರ ಅದಕ್ಕೆ ಸಾಸಿವೆ, ಒಣಮೆಣಸಿನಕಾಯಿ, ಸ್ವಲ್ಪ ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ.ಈ ಒಗ್ಗರಣೆಯನ್ನು ಬೇಯುತ್ತಿರುವ ಮತ್ತೊಂದು ಬಾಣಲಿಗೆ ಹಾಕಿಕೊಂಡು ಮಿಕ್ಸ್ ಮಾಡಿದರೆ ಆಂಧ್ರ ಶೈಲಿಯ ದಾಲ್ ಪಪ್ಪು ಸವಿಯಲು ಸಿದ್ಧ.