ಮಾತು ತಪ್ಪದ ಜೀ, ಕೈ ಹಿಡಿದ ಪ್ರೇಕ್ಷಕರು. ರತ್ನಮ್ಮ, ಮಂಜಮ್ಮ ರವರಿಗೆ ಸಿಕ್ಕ ಹಣ ಎಷ್ಟು ಗೊತ್ತೇ?? ಬೆಳಗಿತು ಬದುಕು.

ಮಾತು ತಪ್ಪದ ಜೀ, ಕೈ ಹಿಡಿದ ಪ್ರೇಕ್ಷಕರು. ರತ್ನಮ್ಮ, ಮಂಜಮ್ಮ ರವರಿಗೆ ಸಿಕ್ಕ ಹಣ ಎಷ್ಟು ಗೊತ್ತೇ?? ಬೆಳಗಿತು ಬದುಕು.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ನಿನ್ನೆ ತಡರಾತ್ರಿ ಕನ್ನಡ ಕಿರುತೆರೆಯ ಖ್ಯಾತ ಶೋಗಳಲ್ಲಿ ಒಂದಾಗಿರುವ ಸರಿಗಮಪ ಸೀಸನ್ 17 ಬಹಳ ವಿಜೃಂಭಣೆಯಿಂದ ಮುಕ್ತಾಯಗೊಂಡಿದೆ. ಫಿನಾಲೆಗೆ ತಲುಪಿದ 5 ಜನರಲ್ಲಿ ಮೂರು ಜನರು ಕೊನೆಯ ಸುತ್ತಿನಲ್ಲಿ ಉಳಿದುಕೊಂಡಿದ್ದರು, ಕೊನೆಯದಾಗಿ ಶ್ರೀನಿಧಿ ಶಾಸ್ತ್ರಿರವರಿಗೆ ಪ್ರಶಸ್ತಿ ಇದಕ್ಕಿತ್ತು. ಈ ಮೂಲಕ ಈ ಬಾರಿಯ ಸರಿಗಮಪ ಸೀಸನ್ ಮುಕ್ತಾಯಗೊಂಡಿದೆ.

ಇನ್ನು ಪ್ರತಿ ಬಾರಿಯಂತೆ ಈ ಬಾರಿ ಕೂಡ ಹಲವಾರು ಸ್ಪರ್ಧಿಗಳು ತಮ್ಮ ಗಾಯನದ ಮೂಲಕ ಇಡೀ ಕರ್ನಾಟಕದ ಮೂಲೆಮೂಲೆಯಲ್ಲೂ ಸದ್ದು ಮಾಡಿದ್ದು ನಿಮಗೆಲ್ಲರಿಗೂ ತಿಳಿದಿದೆ. ಅದರಲ್ಲಿಯೂ ಇಡೀ ಸೀಸನ್ ಮತ್ತೊಂದು ಹಂತವಾಗಿ ಯಶಸ್ವಿಗೊಳ್ಳಲು ಕಾರಣರಾದ ರತ್ನಮ್ಮ ಹಾಗೂ ಮಂಜಮ್ಮ ರವರು ಕೂಡ ಇಡೀ ಕರ್ನಾಟಕದ ಎಲ್ಲೆಡೆ ಸದ್ದು ಮಾಡಿದ್ದಾರೆ. ಇವರು ಸ್ಪರ್ಧೆಯಲ್ಲಿ ಅಧಿಕೃತವಾಗಿ ಭಾಗವಹಿಸದೇ ಇದ್ದರೂ ಕೂಡ ಇವರನ್ನು ಹಾಗೂ ಅವರ ಗಾಯನವನ್ನು ಕಂಡ ಸರಿಗಮಪ ವೇದಿಕೆಯು ಇವರಿಗೆ ಫೈನಲ್ ವರೆಗೆ ಹಾಡಲು ಅವಕಾಶ ನೀಡಲಾಗಿತ್ತು. ಈ ಅವಕಾಶ ಇದೀಗ ರತ್ನಮ್ಮ ಹಾಗೂ ಮಂಜಮ್ಮ ರವರ ಬಾಳನ್ನು ಬೆಳಗಿಸಿದೆ ಎಂದರೇ ತಪ್ಪಾಗಲಾರದು.

ಹೌದು ಸ್ನೇಹಿತರೇ ಈ ಶೋ ಇದೀಗ ಇವರ ಜೀವನವನ್ನೇ ಬದಲಾಯಿಸಿದೆ, ಮೊದಲನೆಯದಾಗಿ ಇವರ ಮನೆ ಸೋರುತ್ತಿದೆ ಎಂದ ತಕ್ಷಣ ಖ್ಯಾತ ನಟ ಜಗ್ಗೇಶ್ ರವರು ಅವರ ಅಭಿಮಾನಿಗಳ ಬೆಂಬಲದೊಂದಿಗೆ ಇವರಿಗೆ ಮನೆ ಕೂಡ ಕಟ್ಟಿಸಿಕೊಟ್ಟಿದ್ದರು, ಅಷ್ಟೇ ಅಲ್ಲದೆ ಸರಿಗಮಪ ಶೋನಲ್ಲಿ ಜಡ್ಜ್ ಆಗಿ ಭಾಗವಹಿಸುವ ಅರ್ಜುನ್ ಜನ್ಯ ರವರು ಕೂಡ ದೇವರು ನನಗೆ ಶಕ್ತಿ ನೀಡುವವರೆಗೂ ನಾನು ರತ್ನಮ್ಮ ಹಾಗೂ ಮಂಜಮ್ಮ ರವರ ಮನೆಗೆ ರೇಷನ್ ಕಳುಹಿಸಿ ಕೊಡುವುದಾಗಿ ಹೇಳಿದ್ದರು. ಕೊಟ್ಟಮಾತಿನಂತೆ ಇಂದಿಗೂ ಕೂಡ ಪ್ರತಿ ತಿಂಗಳು ರತ್ನಮ್ಮ ಹಾಗೂ ಮಂಜಮ್ಮ ರವರ ಮನೆಗೆ ಅಗತ್ಯವಿರುವ ಎಲ್ಲಾ ರೇಷನ್ ತಲುಪುತ್ತಿದೆ. ಹೀಗೆ ಈ ಎಲ್ಲಾ ಸೌಲಭ್ಯಗಳ ಬಳಿಕ ಜೀ ವಾಹಿನಿಯು ಕೂಡ ನಾವು ಜನರಿಂದ ಹಣವನ್ನು ಕಲೆಕ್ಟ್ ಮಾಡಿ ನಮ್ಮ ವಾಹಿನಿ ಕಡೆಯಿಂದಲೂ ಕೂಡ ಸಾಧ್ಯವಾದಷ್ಟು ಸಂಭಾವನೆ ನೀಡುತ್ತೇವೆ ಎಂದು ಮಾತು ನೀಡಿತ್ತು.

ಅದರಂತೆ ಇದೀಗ ಸೀಸನ್ ಮುಕ್ತಾಯಗೊಂಡಿದ್ದು ಮಾನವೀಯತೆ ಮೆರೆದಿರುವ ಪ್ರೇಕ್ಷಕರು ಎರಡೂವರೆ ಲಕ್ಷದಷ್ಟು ಹಣವನ್ನು ರತ್ನಮ್ಮ ಹಾಗೂ ಮಂಜಮ್ಮ ರವರಿಗೆ ನೀಡುವ ನಿಧಿಗೆ ಕಳುಹಿಸಿದ್ದಾರೆ, ಹೀಗೆ ಜನರು ಕಳುಹಿಸಿದ ಎರಡುವರೆ ಲಕ್ಷಕ್ಕೆ ಜೀ ವಾಹಿನಿಯು ಕೂಡ ಎರಡುವರೆ ಲಕ್ಷ ಸೇರಿಸಿ ಒಟ್ಟಾಗಿ ಐದು ಲಕ್ಷ ಹಣವನ್ನು ರತ್ನಮ್ಮ ಹಾಗೂ ಮಂಜಮ್ಮ ರವರ ಹೆಸರಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಲಾಗಿದೆ. ಈ ಮೂಲಕ ಪ್ರತಿ ತಿಂಗಳು ಹೀಗೆ ಫಿಕ್ಸೆಡ್ ಡೆಪಾಸಿಟ್ ಮಾಡಿರುವ ಹಣದಿಂದ ಬರುವ ಬಡ್ಡಿಯೂ ರತ್ನಮ್ಮ ಹಾಗೂ ಮಂಜಮ್ಮ ರವರ ಕೈಗೆ ಸೇರಲಿದೆ.

ಇಷ್ಟೇ ಅಲ್ಲದೆ ಹಂಸಲೇಖ ಅವರು ಕೂಡ ರತ್ನಮ್ಮ ಹಾಗೂ ಮಂಜಮ್ಮ ರವರಿಗೆ ಸಹಾಯಹಸ್ತ ಚಾಚಿದ್ದು ಇವರು ಇತರ ಪ್ರದೇಶಗಳಿಗೆ ಹೋಗಿ ಹಾಡು ಹಾಡಲು ಆರ್ಕೆಸ್ಟ್ರಾ ಸೆಟ್ ಕೂಡ ನೀಡಲಾಗಿದೆ. ಈ ಮೂಲಕ ಇರಲು ಮನೆ ಪ್ರತಿತಿಂಗಳು ರೇಷನ್ ಜೀವನ ನಿರ್ವಹಣೆಗಾಗಿ ಫಿಕ್ಸೆಡ್ ಡೆಪಾಸಿಟ್ ನಿಂದ ಬರುವ ಬಡ್ಡಿ ಹಾಗೂ ಜೀವನೋಪಾಯಕ್ಕಾಗಿ ಮತ್ತಷ್ಟು ಹಣ ಗಳಿಸಲು ಆರ್ಕೆಸ್ಟ್ರಾ ಸೆಟ್ ಸೇರಿಕೊಂಡಿರುವ ಕಾರಣ ಖಂಡಿತ ರತ್ನಮ್ಮ ಹಾಗೂ ಮಂಜಮ್ಮ ರವರ ಜೀವನದಲ್ಲಿ ಅತಿ ದೊಡ್ಡ ಬೆಳಕು ಬಂದಂತಾಗಿದೆ. ಈ ಕಾರ್ಯಕ್ಕೆ ಕೈಜೋಡಿಸಿದ ಸಾಮಾನ್ಯ ಜನರಿಂದ ಹಿಡಿದು ಜಗ್ಗೇಶ್ ರವರಿಗೂ, ಜೀ ವಾಹಿನಿ, ಸರಿಗಮಪ ವೇದಿಕೆ, ಅರ್ಜುನ್ ಜನ್ಯ, ಹಂಸಲೇಖ ಎಲ್ಲರಿಗೂ ಕೂಡ ನಮ್ಮ ತಂಡದ ಪರವಾಗಿ ಅನಂತ ಅನಂತ ವಂದನೆಗಳು.