ಮಹಾನಾಯಕ ಭೀಮರಾವ್ ರವರಿಗೆ ಕನ್ನಡದಲ್ಲಿ ಧ್ವನಿ ನೀಡಿದ ಡ್ರಾಮಾ ಜೂನಿಯರ್ಸ್ ಬಾಲಕ ಯಾರು ಗೊತ್ತಾ??

ಮಹಾನಾಯಕ ಭೀಮರಾವ್ ರವರಿಗೆ ಕನ್ನಡದಲ್ಲಿ ಧ್ವನಿ ನೀಡಿದ ಡ್ರಾಮಾ ಜೂನಿಯರ್ಸ್ ಬಾಲಕ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಜೀ ಕನ್ನಡ ಧಾರಾವಾಹಿ ಯಲ್ಲಿ ಪ್ರಸಾರವಾಗುವ ಮಹಾನಾಯಕ ಧಾರವಾಹಿಯ ಕುರಿತು ಈಗಾಗಲೇ ನಿಮಗೆ ಗೊತ್ತಿದೆ ಇದೆ. ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಜೀವನದ ಕಥೆಯನ್ನು ಆಧಾರವಾಗಿಟ್ಟುಕೊಂಡು ಧಾರವಾಹಿ ನಿರ್ದೇಶನ ಮಾಡಲಾಗಿ ದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೂಲತಹ ಹಿಂದಿ ಧಾರವಾಹಿ ಆಗಿದ್ದರೂ ಕೂಡ ಕನ್ನಡಕ್ಕೆ ಡಬ್ ಆಗಿ ಉತ್ತಮ ರೈಟಿಂಗ್ ಪಡೆದುಕೊಳ್ಳುತ್ತಿದೆ. ಡಬ್ಬಿಂಗ್ ಧಾರವಾಹಿಯನ್ನು ಕೂಡ ಜನರು ಒಪ್ಪಿಕೊಂಡು ಉತ್ತಮ ಪ್ರತಿಕ್ರಿಯೆಯನ್ನು ನೀಡುತ್ತಿರುವ ಕಾರಣ ಮಹಾನಾಯಕ ಧಾರವಾಹಿ ಇದೀಗ ಸದ್ದು ಮಾಡುತ್ತಿದೆ.

ಇನ್ನು ಹೀಗೆ ಹಿಂದಿಯಲ್ಲಿ ಮಿಂಚು ಹರಿಸಿದ ಧಾರವಾಹಿ ಕನ್ನಡಕ್ಕೆ ಡಬ್ ಆಗಲು ಹಲವಾರು ಪಾತ್ರಗಳಿಗೆ ವಿವಿಧ ರೀತಿಯ ನಟರು ಧ್ವನಿ ನೀಡಿದ್ದಾರೆ. ಅದರಂತೆಯೇ ಮಹಾನಾಯಕ ಧಾರವಾಹಿಯಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಚಿಕ್ಕ ವಯಸ್ಸಿನ ಪಾತ್ರಕ್ಕೆ ಜೀವ ತುಂಬಿರುವ ಬಾಲಕನಿಗೆ ಧ್ವನಿ ನೀಡಿದ್ದು ಯಾರು ಗೊತ್ತಾ?? ಆತ ಕೇವಲ ಧಾರವಾಹಿಯಲ್ಲಿ ಮಾತ್ರ ನಮ್ಮ ನಿಮ್ಮೆಲ್ಲರನ್ನೂ ರಂಜಿಸುತ್ತಿಲ್ಲ, ಬದಲಾಗಿ ಹಲವಾರು ವರ್ಷಗಳ ಹಿಂದೆಯೇ ನಮಗೆ ಸಾಕಷ್ಟು ಮನರಂಜನೆ ನೀಡಿದ್ದಾನೆ.

ಹೌದು ಸ್ನೇಹಿತರೇ ಆತ ಮತ್ಯಾರು ಅಲ್ಲ ಜೀ ಕನ್ನಡದ ಪ್ರಖ್ಯಾತ ಶೋಗಳಲ್ಲಿ ಒಂದಾಗಿರುವ ಡ್ರಾಮಾ ಜೂನಿಯರ್ಸ್ ಸೀಸನ್ ಮೂರರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಅನುರಾಗ್, ಮಹಾನಾಯಕ ಧಾರವಾಹಿಯಲ್ಲಿ ಭೀಮರಾವ್ ರವರ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಈ ಕುರಿತು ಪ್ರಶ್ನಿಸಿದಾಗ ನನಗೆ ಧಾರವಾಹಿ ಬಹಳ ಸ್ಪೂರ್ತಿ ನೀಡಿದೆ ಭೀಮರಾವ್ ರವರು ಕುಟುಂಬಕ್ಕೆ ತೋರಿಸುವ ಕಾಳಜಿ ಮತ್ತು ಊರಿನವರಿಗೆ ಸಹಾಯಮಾಡುವ ವ್ಯಕ್ತಿತ್ವ ನನಗೆ ಬಹಳ ಇಷ್ಟವಾಗಿದೆ ಅವರನ್ನು ನೋಡಿದ ಮೇಲೆ ನನಗೂ ಕೂಡ ಏನಾದರೂ ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಭಾವನೆ ಮೂಡುತ್ತಿದೆ ಎಂದು ಉತ್ತರಿಸಿದ್ದಾರೆ.