ಜೊತೆ ಜೊತೆಯಲಿಗೆ ಸೋಲಿನ ರುಚಿ ತೋರಿಸಿದ ಹೊಸ ಧಾರವಾಹಿ ! ಯಾವುದು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ತಿಂಗಳುಗಳಿಂದ ಕಿರುತೆರೆಯಲ್ಲಿ ಹಲವಾರು ದಾಖಲೆಗಳನ್ನು ಸೃಷ್ಟಿಸಿ ಹೆಚ್ಚಿನ ಟಿಆರ್ಪಿ ಪಡೆದುಕೊಂಡು ಕನ್ನಡದ ಟಾಪ್ 5 ಧಾರವಾಹಿಗಳ ಸಾಲಿನಲ್ಲಿ ಮೊದಲನೇ ಸ್ಥಾನ ಅಥವಾ ಎರಡನೇ ಸ್ಥಾನದಲ್ಲಿ ಸ್ಥಾನ ಪಲ್ಲಟವಾಗುತ್ತ ದಾಖಲೆ ನಿರ್ಮಿಸಿರುವ ಜೊತೆ ಜೊತೆಯಲಿ ಧಾರವಾಹಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಟಾಪ್ ಐದರ ಸ್ಥಾನದಲ್ಲಿ ಗಟ್ಟಿಮೇಳ ಹಾಗೂ ಜೊತೆ ಜೊತೆಯಲಿ ಧಾರವಾಹಿಗಳು ಮೊದಲ ಎರಡು ಸ್ಥಾನಗಳನ್ನು ಹಲವಾರು ದಿನಗಳಿಂದ ಕಾಯ್ದಿರಿಸಿಕೊಂಡು ಬಂದಿದೆ. ಇದೀಗ ಹಲವಾರು ತಿಂಗಳುಗಳಿಂದ ಒಂದು ಅಥವಾ ಎರಡನೇ ಸ್ಥಾನದಲ್ಲಿ ಭದ್ರವಾಗಿ ಉಳಿದುಕೊಂಡಿದ್ದ ಜೊತೆ ಜೊತೆಯಲಿ ಧಾರವಾಹಿ ಮೂರನೇ ಸ್ಥಾನಕ್ಕೆ ಜಾರಿದೆ. ಮೊದಲನೇ ಸ್ಥಾನವನ್ನು ಎಂದಿನಂತೆ ಗಟ್ಟಿ ಮೇಳ ಧಾರವಾಹಿ ಉಳಿಸಿಕೊಂಡಿದೆ.

ಹೌದು ಸ್ನೇಹಿತರೇ ಇದೀಗ ಬಂದಿರುವ ಲೇಟೆಸ್ಟ್ ಟಿಆರ್ಪಿ ಲೆಕ್ಕಾಚಾರದ ಪ್ರಕಾರ ಇತ್ತೀಚೆಗೆ ಕಳೆದ ಕೆಲವೇ ಕೆಲವು ದಿನಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಆರಂಭವಾದ ಸತ್ಯ ಎಂಬ ಧಾರವಾಹಿಯೂ ಅತ್ಯುತ್ತಮ ಟಿಆರ್ಪಿ ಪಡೆದುಕೊಂಡು ಆರಂಭಗೊಂಡ ಕೇವಲ ಎರಡು ವಾರಗಳಲ್ಲಿಯೇ ಟಿಆರ್ಪಿ ಸ್ಥಾನಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇತ್ತೀಚೆಗೆ ಜೊತೆ ಜೊತೆಯಲಿ ಧಾರವಾಹಿ ವೀಕ್ಷಕರನ್ನು ಕಳೆದುಕೊಳ್ಳುತ್ತಿದೆ ಎಂಬ ಸುದ್ದಿ ಕೇಳಿ ಬರುತ್ತಿತ್ತಾದರೂ ಯಾವುದೇ ಖಚಿತವಾದ ಅಂಕಿ ಅಂಶಗಳ ಮಾಹಿತಿ ದೊರೆತಿರಲಿಲ್ಲ. ಆದರೆ ಇದೀಗ ಏಕಾಏಕಿ ಕೇವಲ ಎರಡು ವಾರಗಳ ಹಿಂದೆ ಆರಂಭವಾದ ಧಾರಾವಾಹಿ ಜೊತೆ ಜೊತೆಯಲಿ ಧಾರವಾಹಿ ಗೆ ಸೋಲಿನ ರುಚಿ ತೋರಿಸಿರುವ ಕಾರಣ ಕೇಳಿಬಂದ ಮಾತುಗಳು ಸತ್ಯ ಎಂಬುದು ತಿಳಿದು ಬರುತ್ತದೆ.

Post Author: Ravi Yadav