ಬಹಳ ಸುಲಭವಾಗಿ, 10 ನಿಮಿಷಗಳಲ್ಲಿ ತಯಾರು ಮಾಡಿ ಮದುವೆ ಮನೆ ಶೈಲಿಯ ಸಾಂಬರ್ ! ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ,ಇಂದು ನಾವು ಮದುವೆ ಮನೆ ಶೈಲಿಯ ತಿಳಿ ಸಾರು ಮಾಡುವ ವಿಧಾನವನ್ನು ತಿಳಿಸಲಾಗಿದೆ. ತಿಳಿ ಸಾರು ಮಾಡಲು ಬೇಕಾಗುವ ಪದಾರ್ಥಗಳು: ಅರ್ಧ ಕಪ್ ತೊಗರಿ ಬೇಳೆ, 1 ದೊಡ್ಡ ಟೊಮೇಟೊ, 1 ಚಮಚ ಧನಿಯಾ, 1 ಚಮಚ ಜೀರಿಗೆ, ಅರ್ಧ ಚಮಚ ಕಾಳುಮೆಣಸು, 1 / 4 ಚಮಚ ಮೆಂತ್ಯ, 4 – 5 ಗುಂಟೂರ್ ಮೆಣಸಿನಕಾಯಿ, 2 – 3 ಬ್ಯಾಡಿಗೆ ಮೆಣಸಿನಕಾಯಿ, ಕರಿಬೇವು, ಅರ್ಧ ಚಮಚ ಸಾಸುವೆ, ಇಂಗು ,ಹುಣಸೆ ರಸ, ಸ್ವಲ್ಪ ಬೆಲ್ಲ, ರುಚಿಗೆ ತಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು.

ತಿಳಿ ಸಾರು ಮಾಡುವ ವಿಧಾನ: ಮೊದಲಿಗೆ ಒಂದು ಕುಕ್ಕರ್ ತೆಗೆದುಕೊಂಡು ಅದಕ್ಕೆ ತೊಳೆದ ತೊಗರಿಬೇಳೆ, ತೊಗರಿಬೇಳೆ ಬೇಯಿಸಲು ಬೇಕಾಗುವಷ್ಟು ನೀರು ಮತ್ತು ಹಚ್ಚಿದ ಟೊಮೇಟೊವನ್ನು ಹಾಕಿ 3 ವಿಷಲ್ ಹಾಕಿಸಿಕೊಂಡು ತಣ್ಣಗಾಗಲು ಬಿಡಿ. ಮತ್ತೊಂದು ಕಡೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 1 ಚಮಚ ಧನಿಯಾ, 1 ಚಮಚ ಜೀರಿಗೆ, ಅರ್ಧ ಚಮಚದಷ್ಟು ಕಾಳು ಮೆಣಸು, 1 / 4 ಚಮಚ ಮೆಂತ್ಯ ವನ್ನು ಹಾಕಿ ಅರ್ಧ ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಇದಕ್ಕೆ 4 – 5 ಗುಂಟೂರ್ ಮೆಣಸಿನಕಾಯಿ, 2 – 3 ಬ್ಯಾಡಿಗೆ ಮೆಣಸಿನಕಾಯಿ, ಸ್ವಲ್ಪ ಕರಿಬೇವನ್ನು ಹಾಕಿ ಮೆಣಸಿನಕಾಯಿ ಗರಿ ಗರಿಯಾಗುವವರೆಗೂ ಫ್ರೈ ಮಾಡಿಕೊಳ್ಳಿ.

ಈ ಮಿಶ್ರಣವು ತಣ್ಣಗಾದ ನಂತರ, ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ತದನಂತರ ಮತ್ತೆ ತಣ್ಣಗಾದ ಕುಕ್ಕರ್ ನಲ್ಲಿರುವ ಬೇಳೆ ಮತ್ತು ಟೊಮೇಟೊವನ್ನು ಮ್ಯಾಶ್ ಮಾಡಿ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಮತ್ತೆ ಒಂದು ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅರ್ಧ ಚಮಚದಷ್ಟು ಸಾಸುವೆ, ಅರ್ಧ ಚಮಚದಷ್ಟು ಜೀರಿಗೆ, ಕರಿಬೇವು, 2 – 3 ಮೆಣಸಿನಕಾಯಿ , ಸ್ವಲ್ಪ ಇಂಗು ಹಾಕಿ ಮಿಕ್ಸ್ ಮಾಡಿ, ಇದಕ್ಕೆ ಬೇಳೆ ಕಟ್ಟು, ಸ್ವಲ್ಪ ಹುಣಸೆ ರಸ, ಸ್ವಲ್ಪ ಬೆಲ್ಲ, ರುಚಿಗೆ ತಕಷ್ಟು ಉಪ್ಪು , ತಿಳಿ ಸಾರಿನ ಪುಡಿ ಹಾಕಿ ಚೆನ್ನಾಗಿ ಕುದಿಯಲು ಬಿಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ತಿಳಿ ಸಾರು ಸವಿಯಲು ಸಿದ್ದ

Post Author: Ravi Yadav