ಈ ದಿವಂಗತ ಕನ್ನಡದ ಮೇರು ನಟ ರಾವಣನಾಗಿದ್ದರೇ ವಿಶ್ವವೇ ತಲೆಬಾಗುವಂತೆ ಮಾಡುತ್ತಿದ್ದರು ! ಯಾರು ಗೊತ್ತಾ??

ಈ ದಿವಂಗತ ಕನ್ನಡದ ಮೇರು ನಟ ರಾವಣನಾಗಿದ್ದರೇ ವಿಶ್ವವೇ ತಲೆಬಾಗುವಂತೆ ಮಾಡುತ್ತಿದ್ದರು ! ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇದು ಕೇವಲ ಒಂದು ನಡೆಯಲಾಗದ ಸುದ್ದಿಯಾದರೂ ಕೂಡ ಆಲೋಚನೆಯನ್ನು ಊಹೆ ಮಾಡಿಕೊಂಡರೇ ಖಂಡಿತ ಮನದಲ್ಲೇನೋ ಹೆಮ್ಮೆ ಎಂಬ ಭಾವನೆ ಮೂಡುತ್ತದೆ ಹಾಗೂ ನಾವು ಚಿಕ್ಕ ವಯಸ್ಸಿನಲ್ಲಿ ನೋಡಿದ ಮೇರುನಟನ ನಟನೆಯ ನಮ್ಮ ಕಣ್ಣು ಮುಂದೆ ಒಂದು ಕ್ಷಣ ಪಾಸ್ ಆಗುತ್ತದೆ. ಅಷ್ಟಕ್ಕೂ ನಾವು ಯಾವ ಮೇರುನಟನ ಬಗ್ಗೆ ಮಾತನಾಡುತ್ತಿದ್ದೇವೆ ಹಾಗೂ ಯಾಕೆ ಈ ಮೇರುನಟನ ನಟನೆ ಇದ್ದಕ್ಕಿದ್ದಂತೆಯೇ ನಮ್ಮ ಆಲೋಚನೆಗೆ ಬಂದಿದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ ಕೇಳಿ. ಅಷ್ಟೇ ಅಲ್ಲಾ, ಈ ನಟನ ಈ ಪಾತ್ರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಸ್ನೇಹಿತರೇ ನಿಮಗೆಲ್ಲರಿಗು ಬಹುಶಹ ಈಗಾಗಲೇ ತಿಳಿದಿರಬಹುದು ಭಾರತ ಚಿತ್ರರಂಗದಲ್ಲಿ ಅತಿ ಹೆಚ್ಚು ಬಜೆಟ್ ಎಂಬ ಖ್ಯಾತಿ ಪಡೆದುಕೊಳ್ಳಲು ಆದಿಪುರುಷ್ ಚಿತ್ರತಂಡ ತಯಾರಾಗಿದೆ. ರಾಮಾಯಣದ ಆಧಾರದ ಮೇರೆಗೆ ಆದಿಪುರುಷ್ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಸಾವಿರಾರು ಕೋಟಿ ಬಜೆಟ್ ಅಲ್ಲಿ ಚಿತ್ರ ನಿರ್ಮಾಣವಾಗುತ್ತದೆ. ಇನ್ನು ಈ ಆದಿಪುರುಷ್ ಚಿತ್ರ ಘೋಷಣೆಯಾದಾಗ ಸದ್ದು ಮಾಡಿದ್ದಕ್ಕಿಂತಲೂ ಹೆಚ್ಚಾಗಿ ಆದಿಪುರುಷ್ ಚಿತ್ರದಲ್ಲಿ ರಾವಣನ ಪಾತ್ರದ ಕುರಿತು ಹೆಚ್ಚಾಗಿ ಸದ್ದು ಮಾಡುತ್ತಿದೆ.

ಆದಿಪುರುಷ್ ಚಿತ್ರದಲ್ಲಿ ಸೈಫ್ ಆಲಿ ಖಾನ್ ಅವರನ್ನು ರಾವಣನಾಗಿ ಆಯ್ಕೆ ಮಾಡಿದ ಕ್ಷಣದಿಂದಲೂ ಒಂದಲ್ಲ ಒಂದು ವಿವಾದಗಳು ಕೇಳಿಬರುತ್ತಲೇ ಇವೆ, ಇಷ್ಟು ಸಾಲದು ಎಂಬಂತೆ ಇತ್ತೀಚೆಗೆ ಸೈಫ್ ಆಲಿ ಖಾನ್ ರವರು ರಾವಣನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಚಿತ್ರದಲ್ಲಿ ಸೀತೆಯ ಅಪಹರಣ ವನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಲಾಗುತ್ತದೆ, ರಾವಣ ನಿಜಕ್ಕೂ ಒಳ್ಳೆಯ ವ್ಯಕ್ತಿ ಎಂದೆಲ್ಲಾ ಹಾಡಿ ಹೊಗಳುವ ಮೂಲಕ ವಿವಾದವನ್ನು ಸೃಷ್ಟಿ ಮಾಡಿದ್ದರು. ನೆಟ್ಟಿಗರು ಸೈಫಾಲಿಖನ್ ರವರ ಮಾತುಗಳಿಗೆ ಗರಂ ಆಗಿ ಪ್ರತಿಕ್ರಯಿಸಿದ ಕಾರಣ, ಸೈಫ್ ಆಲಿ ಖಾನ್ ರವರು ಕ್ಷಮೆ ಕೂಡ ಕೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೊಮ್ಮೆ ಸೈಫಾಲಿಖನ್ ರವರನ್ನು ರಾವಣ ಪಾತ್ರದಿಂದ ಕೈಬಿಡಬೇಕು ಹಾಗೂ ಇನ್ನಿತರ ಹಲವಾರು ನಟರ ಹೆಸರುಗಳನ್ನು ನೀಡಿ ಅವರನ್ನು ಆಯ್ಕೆ ಮಾಡಿ ಇವರನ್ನು ಆಯ್ಕೆ ಮಾಡಿದೆ ಎಂಬ ಚರ್ಚೆಗಳು ನಡೆಯುತ್ತಲೇ ಇದೆ.

ಆದರೆ ಈ ರೀತಿಯ ಸುದ್ದಿಗಳನ್ನು ನೋಡುತ್ತಿದ್ದಾಗ ಈಗಾಗಲೇ ನಮ್ಮನ್ನು ಅಗಲಿರುವ ಒಬ್ಬ ದಿಗ್ಗಜ ನಾಯಕ ಒಂದು ವೇಳೆ ಇಂದು ನಮ್ಮ ಜೊತೆಯಲ್ಲಿ ಇದ್ದು ಅವರು ರಾವಣನ ಪಾತ್ರಕ್ಕೆ ಆಯ್ಕೆಯಾಗಿದ್ದರೇ ಹೇಗಿರುತ್ತಿತ್ತು ಎಂಬ ಆಲೋಚನೆ ನಮ್ಮ ತಲೆಯಲ್ಲಿ ಮೂಡಿದೆ. ಈ ರೀತಿ ಆಲೋಚನೆ ಮಾಡಿದ ತಕ್ಷಣ ನಿಜಕ್ಕೂ ನಮಗೆ ಒಂದು ಕ್ಷಣ ಆಲೋಚನೆಗೆ ಅದ್ಭುತವಾಗಿದೆ ಎನಿಸಿತು, ಯಾಕೆಂದರೆ ಒಂದು ವೇಳೆ ಈ ದಿಗ್ಗಜ ನಟ ಇಂದು ನಮ್ಮ ಜೊತೆಗಿದ್ದು ರಾವಣನ ಪಾತ್ರಕ್ಕೆ ಜೀವ ತುಂಬಿದ್ದರೇ ಖಂಡಿತ ಹೇಳುತ್ತೇವೆ ಚಿತ್ರಕ್ಕೆ ಆಸ್ಕರ್ ಹುಡುಕಿಕೊಂಡು ಬರುತ್ತಿತ್ತು.

ಅಷ್ಟೇ ಅಲ್ಲಾ ಇಡೀ ವಿಶ್ವದ ಚಿತ್ರರಂಗ ಸಾವಿರಾರು ಕೋಟಿ ಬಜೆಟ್ ನಿರ್ಮಾಣ ಮಾಡಿ ಸೂಪರ್ಹೀರೋ ಮೂವಿಗಳಲ್ಲಿ ನಟನೆ ಇಲ್ಲದೆ ಬರೀ ಆಕ್ಷನ್ ತೋರಿಸುವ ಚಿತ್ರಗಳಿಗಿಂತ ಅತ್ಯದ್ಭುತವಾಗಿ ನಟನೆ ಮಾಡಿದ ಈ ಚಿತ್ರಕ್ಕೆ ಸೆಲ್ಯೂಟ್ ಮಾಡುವ ಪ್ರಸಂಗ ಎದುರಾಗುತ್ತಿತ್ತು. ಅಂದಹಾಗೆ ದಿಗ್ಗಜ ನಟ ಬೇರ್ಯಾರು ಅಲ್ಲ ಅವರೇ ನಮ್ಮ ನಿಮ್ಮೆಲ್ಲರ ನೆಚ್ಚಿನ ವಜ್ರಮುನಿ ಸರ್. ಹೌದು ಸ್ನೇಹಿತರೇ ನಿಮಗೂ ಕೂಡ ಈಗ ಒಂದು ಕ್ಷಣ ಕಣ್ಣಮುಂದೆ ರಾವಣನ ಪಾತ್ರ ಕಣ್ಣಮುಂದೆ ಪಾಸ್ ಆಗಿರುತ್ತದೆ, ನಟಭಯಂಕರ ನಟನೆಗೆ ರಾವಣನ ಪಾತ್ರ ಖಂಡಿತ ಹೇಳುತ್ತೇವೆ ನೂರಕ್ಕೆ ನೂರರಷ್ಟು ತಾಳೆಯಾಗುತ್ತದೆ. ಖಳನಟನಾಗಿ ಇವರು ನಟನೆ ಮಾಡುತ್ತಿದ್ದ ರೀತಿಯನ್ನು ನೋಡಿದ ಜನ ಇವನು ನಿಜವಾಗಲೂ ನಿಜಜೀವನದಲ್ಲೂ ವಿಲನ್ ಆಗಿರುತ್ತಾನೆ ಎಂಬ ಭಾವನೆ ಮೂಡಿಸಿದ ಅತ್ಯದ್ಭುತ ಮೇರುನಟ ರಾವಣನ ಪಾತ್ರದಲ್ಲಿ ನಟನೆ ಮಾಡಿದ್ದರೇ ಹೇಗಿರುತ್ತಿತ್ತು ಅಲ್ಲವೇ?? ನಿಜಕ್ಕೂ ನೋಡಲು ಎರಡು ಕಣ್ಣುಗಳು ಸಾಕಾಗುತ್ತಿರಲಿಲ್ಲ ಎಂಬುದು ನಮ್ಮ ಭಾವನೆ. ನಿಮಗೂ ಒಂದು ವೇಳೆ ಅದೇ ರೀತಿ ಅನಿಸಿದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.