ದೀಪಾವಳಿ: ನಿಮ್ಮ ರಾಶಿಗೆ ಅನುಗುಣವಾಗಿ ಮಂತ್ರ ಹೇಳಿ ಲಕ್ಷ್ಮಿ ಪೂಜೆ ಮಾಡಿ. ಹಣ, ಸಮೃದ್ಧಿ ಸಂತೋಷ ಹುಡುಕಿಕೊಂಡು ಬರಲಿವೆ
ದೀಪಾವಳಿ: ನಿಮ್ಮ ರಾಶಿಗೆ ಅನುಗುಣವಾಗಿ ಮಂತ್ರ ಹೇಳಿ ಲಕ್ಷ್ಮಿ ಪೂಜೆ ಮಾಡಿ. ಹಣ, ಸಮೃದ್ಧಿ ಸಂತೋಷ ಹುಡುಕಿಕೊಂಡು ಬರಲಿವೆ
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ದೀಪಾವಳಿ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಾಯಿ ಲಕ್ಷ್ಮೀದೇವಿಗೆ ಸಂಪತ್ತು, ಸಮೃದ್ಧಿ ಮತ್ತು ಲಾಭ ಪಡೆಯಲು ವಿಶೇಷವಾದ ಪೂಜೆಯನ್ನು ಸಲ್ಲಿಸುತ್ತಾರೆ. ದೀಪಾವಳಿ ಹಬ್ಬದ ಸಮಯದಲ್ಲಿ ಹಿಂದೂ ಧರ್ಮಗಳ ಪ್ರಕಾರ ಲಕ್ಷ್ಮಿ ಹಾಗೂ ಕುಬೇರನನ್ನು ಒಲಿಸಿಕೊಳ್ಳಲು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೀಪಾವಳಿ ರಾತ್ರಿಯನ್ನು ಸಿದ್ದರ ರಾತ್ರಿ ಎಂದು ಕೂಡ ಕರೆಯಲಾಗುತ್ತದೆ. ನಿಮಗೆ ಬಹುಶಹ ತಿಳಿದಿರಬಹುದು ಯಾವುದೇ ತಂತ್ರ ಅಥವಾ ಮಂತ್ರಗಳನ್ನು ಅಭ್ಯಾಸ ಮಾಡುವ ಜನರು ಸಿದ್ದರ ರಾತ್ರಿಗೆ ಇಡೀ ವರ್ಷ ಕಾದು ತಮ್ಮ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ತಾಯಿ ಲಕ್ಷ್ಮೀದೇವಿಯ ಪೂಜೆ ಸಲ್ಲಿಸುತ್ತಾರೆ. ಬನ್ನಿ ಈ ಕುರಿತು ನಿಮಗೆ ಸಂಪೂರ್ಣ ಮಾಹಿತಿ ನೀಡಲಿದ್ದು, ನೀವು ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಕೆಲವು ನಿಯಮಗಳ ಮೂಲಕ ತಾಯಿ ಲಕ್ಷ್ಮೀದೇವಿಗೆ ಪೂಜೆಯನ್ನು ಸಲ್ಲಿಸಿದರೇ ನಿಮಗೆ ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ಸಿಗುತ್ತದೆ ಹಾಗೂ ಇದರಿಂದ ನಿಮ್ಮ ಜೀವನದಲ್ಲಿ ಸಂಪತ್ತು ಸಮೃದ್ಧಿ ಮತ್ತು ಲಾಭ ನಿಮ್ಮದಾಗುತ್ತದೆ.
ಮೇಷ ರಾಶಿ: ಸ್ನೇಹಿತರೇ ಮೇಷ ರಾಶಿಯ ಜನರಿಗೆ ಈ ದೀಪಾವಳಿ ಬಹಳ ವಿಶೇಷವೆನಿಸಿದೆ. ಈ ಸಮಯದಲ್ಲಿ ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದೆ. ನೀವು ಮತ್ತಷ್ಟು ಫಲ ಪಡೆದು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಕೊತ್ತಂಬರಿ ಬೀಜ, ಭತ್ತ, ಮಲ್ಲಿಗೆ ಕಂಪಿನ ಸುಗಂಧ ದ್ರವ್ಯ, ಸಾಂಬ್ರಾಣಿ ಹಾಗೂ ಕುಂಕುಮವನ್ನು ಬಳಸಿಕೊಂಡು ತಾಯಿ ಲಕ್ಷ್ಮಿ ದೇವಿಯ ಫೋಟೋವನ್ನು ಪಶ್ಚಿಮ ದಿಕ್ಕಿಗೆ ಮುಖ ಮಾಡುವಂತೆ ಇಟ್ಟು ಪೂಜೆ ಮಾಡಿರಿ, ಇದರಿಂದ ನಿಮಗೆ ಸಂಪತ್ತು, ಜೀವನದಲ್ಲಿ ಸಂತೋಷ ಸಿಗುತ್ತದೆ. ಇನ್ನು ಈ ಸಮಯದಲ್ಲಿ ನೀವು ಎಳ್ಳು ಬೆಲ್ಲ ಮತ್ತು ಡ್ರೈ ಫ್ರುಟ್ಸ್ ಅಥವಾ ಒಣ ಹಣ್ಣುಗಳನ್ನು ಸೇರಿಸಿ ಮಾಡಿದ ಸಿಹಿ ತಿನಿಸುಗಳನ್ನು ದಾನ ಮಾಡಿ, ಸಾಧ್ಯವಾದರೆ ಕನ್ನಡಿ ಮತ್ತು ತಾಮ್ರದ ಪಾತ್ರೆಗಳನ್ನು ಬಡವರಿಗೆ ದಾನ ಮಾಡುವ ಮೂಲಕ ಹೆಚ್ಚಿನ ಫಲ ಪಡೆದುಕೊಳ್ಳಿ. ನಿಮ್ಮ ರಾಶಿಯವರಿಗೆ ಲಕ್ಷ್ಮಿ ಮಂತ್ರ: ಓಂ ಶ್ರೀಂ ಶ್ರೀಂ ಶ್ರೀಂ ಕಮಲೇ ಕಮಲಾಲಯೇ, ಪ್ರಸೀದ್ ಪ್ರಸೀದ್ ಶ್ರೀಂ ಹ್ರೀಂ ಶ್ರೀಂ ಓಂ ಮಹಾಲಕ್ಷ್ಮಿಯೇ ನಮಃ
ವೃಷಭ ರಾಶಿ: ಸ್ನೇಹಿತರೇ, ಈ ರಾಶಿಯ ಜನರು ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮಿ ಪೂಜೆ ಮಾಡುವಾಗ ಸಾಂಬ್ರಾಣಿ, ಜೇನು ತುಪ್ಪ, ಬೆಲ್ಲದ ಪಾಕ, ಕೊತ್ತಂಬರಿ ಬೀಜಗಳು, ನಾಗ ಕೇಸರ, ಬೆಲ್ಲದ ಪಾಕ ಮತ್ತು ಕಮಲದ ಎಲೆಗಳನ್ನು ಬಳಸಿಕೊಂಡು ತಾಯಿ ಲಕ್ಷ್ಮಿ ದೇವಿಗೆ ಪೂಜೆ ಮಾಡಿ, ಇದರಿಂದ ಹೆಚ್ಚಿನ ಫಲ ಸಿಗುತ್ತದೆ. ಇನ್ನು ಈ ದೀಪಾವಳಿಯ ವಿಶೇಷ ಸಂದರ್ಭದಲ್ಲಿ ನೀವು ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಅಕ್ಕಿ, ಅಲಂಕರಿತಾ ವಸ್ತುಗಳು, ಬಟ್ಟೆ ಅದರಲ್ಲಿಯೂ ಬಿಳಿ ಬಟ್ಟೆ ಮತ್ತು ಅವರನ್ನು ಸಂತೋಷ ಪಡಿಸುವಂತಹ ಉಡುಗೊರೆಗಳನ್ನು ನೀಡಿದರೇ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ನಿಮ್ಮ ರಾಶಿಯವರಿಗೆ ಲಕ್ಷ್ಮಿ ಮಂತ್ರ: ಓಂ ಏಂ ಹ್ರೀಂ ಏಂ ನಮಃ
ಮಿಥುನ ರಾಶಿ: ಸ್ನೇಹಿತರೇ, ಈ ರಾಶಿಯ ಜನರು ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮಿ ಪೂಜೆ ಮಾಡುವಾಗ ಸಾಂಬ್ರಾಣಿ, ಕಮಲದ ಎಲೆಗಳು, ಸುಗಂಧ ದ್ರವ್ಯ, ಕಪ್ಪು ಎಳ್ಳು, ಮಲ್ಲಿಗೆ, ಗುಲಾಬಿ ವಸ್ತುಗಳನ್ನು ಲಕ್ಷ್ಮಿ ದೇವಿಯ ಪೂಜೆ ಮಾಡುವ ಸಂದರ್ಭದಲ್ಲಿ ಬಳಸುವ ಮೂಲಕ ತಾಯಿ ಲಕ್ಷ್ಮಿ ದೇವಿಗೆ ಪೂಜೆ ಮಾಡಿ, ಇದರಿಂದ ಹೆಚ್ಚಿನ ಫಲ ಸಿಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಬದುಕಿನಲ್ಲಿ ಸಂತೋಷ ನೆಲೆಮಾಡುತ್ತದೆ. ಇನ್ನು ಈ ದೀಪಾವಳಿಯ ಸಂದರ್ಭದಲ್ಲಿ ಲಾಡು, ಬೆಲ್ಲ, ಗೋಧಿ, ಕಪ್ಪು ಬಟ್ಟೆಯನ್ನು ಬಡವರಿಗೆ ದಾನ ಮಾಡುವುದರಿಂದ ನಿಮಗೆ ಆದಾಯ ಹೆಚ್ಚಾಗುತ್ತದೆ, ಹೆಚ್ಚಿನ ಲಾಭಸಿಗುತ್ತದೆ. ನಿಮ್ಮ ರಾಶಿಯವರಿಗೆ ಲಕ್ಷ್ಮಿ ಮಂತ್ರ: ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್ ಪ್ರಸೀದ್ ಶ್ರೀಂ ಹ್ರೀಂ ಶ್ರೀಂ ಓಂ ಮಹಾಲಕ್ಷ್ಮಯೈ ನಮಃ
ಕಟಕ ರಾಶಿ: : ಸ್ನೇಹಿತರೇ, ಈ ರಾಶಿಯ ಜನರು ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮಿ ಪೂಜೆ ಮಾಡುವಾಗ ಸಾಂಬ್ರಾಣಿ, ಕಮಲದ ಎಲೆಗಳು, ಜೇನು ತುಪ್ಪ, ಕಪ್ಪು ಕೇಸರಿ, ಬೆಲ್ಲ ಹಾಗೂ ಕೊತ್ತಂಬರಿ ಬೀಜಗಳನ್ನು ತಾಯಿಗೆ ಅರ್ಪಿಸುವುದರಿಂದ ನಿಮಗೆ ಲಕ್ಷ್ಮಿ ದೇವಿಯ ಕೃಪೆ ಸಿಗುತ್ತದೆ. ಇನ್ನು ಈ ದೀಪಾವಳಿಯ ಸಂದರ್ಭದಲ್ಲಿ ನೀವು ಬಡವರಿಗೆ ಅಕ್ಕಿ, ಸಕ್ಕರೆ ಅಥವಾ ಮೊಸಲು ಮತ್ತು ಹಾಲು ದಾನ ಮಾಡುವುದರಿಂದ ದೇವಿಯ ಕೃಪೆಗೆ ಪಾತ್ರರಾಗಬಹುದು. ಇನ್ನು ವಿಶೇಷವಾಗಿ ನೀವು ದೀಪಾವಳಿಯ ರಾತ್ರಿ, ಜೇನುತುಪ್ಪ, ಕೇಸರಿ ಮತ್ತು ಬನ್ನಿ ಮರದ ಬೇರನ್ನು ಬೆಳ್ಳಿ ಪೆಟ್ಟಿಗೆಯಲ್ಲಿ ಇರಿ, ಅದನ್ನು ಪೂಜೆಯಲ್ಲಿ ಬಳಸಿ, ಹಾಗೂ ಈ ಪೆಟ್ಟಿಗೆಗೆ ವರ್ಷ ಪೂರ್ತಿ ಮಾಡಿರಿ, ಇದನ್ನು ಯಾವುದೇ ಕಾರಣಕ್ಕೂ ತೆರೆಯಬೇಡಿ. ಈ ಪೆಟ್ಟಿಗೆಯನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದರಿಂದ ನಿಮಗೆ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಲಭ್ಯವಾಗಿ ಉತ್ತಮ ಲಾಭ ಸಿಗುತ್ತದೆ. ನಿಮ್ಮ ರಾಶಿಯವರಿಗೆ ಲಕ್ಷ್ಮಿ ಮಂತ್ರ: ಓಂ ಶ್ರೀಂ ಹ್ರೀಂ ಶ್ರೀಂ ಶ್ರೀಯೇ ನಮಃ
ಸಿಂಹ ರಾಶಿ: ಸ್ನೇಹಿತರೇ, ಈ ರಾಶಿಯ ಜನರು ದೀಪಾವಳಿ ಸಂದರ್ಭದಲ್ಲಿ ನೀವು ಅಪರಾಜಿತಾ ಗಿಡದ ಬೇರುಗಳನ್ನು ತಾಯಿ ಲಕ್ಷ್ಮಿ ದೇವಿಯ ಪೂಜೆಯಲ್ಲಿ ಬಳಸಿ ಪೂಜೆ ಮಾಡಿ. ಅಷ್ಟೇ ಅಲ್ಲದೇ ನೀವು ಬಿಳಿ ಬಟ್ಟೆ, ಕಮಲ, ಮಲ್ಲಿಗೆ, ಸಾಂಬ್ರಾಣಿ, ಕಪ್ಪು ಎಳ್ಳನ್ನು ಪೂಜೆಯಲ್ಲಿ ಅರ್ಪಿಸುವುದರಿಂದ ನಿಮಗೆ ಸಂತೋಷ ಪ್ರಾಪ್ತಿಯಾಗುತ್ತದೆ. ಇನ್ನು ಈ ವಿಶೇಷ ಸಂದರ್ಭದಲ್ಲಿ ನೀವು ಬಡವರಿಗೆ ಬಟ್ಟೆ ದಾನ ಮಾಡಿ, ತಾಮ್ರದ ಪಾತ್ರೆ, ಬಾರ್ಲಿ, ಗೋಧಿಯನ್ನು ದಾನ ಮಾಡುವುದು ನಿಮಗೆ ಬಹಳ ಒಳ್ಳೆಯದಾಗುವಂತೆ ಮಾಡುತ್ತದೆ. ಇನ್ನು ಸಾಧ್ಯವಾದರೇ ಗಂಧದ ಎಣ್ಣೆಯನ್ನು ನೀರಿನ ಜೊತೆ ಮಿಕ್ಸ್ ಮಾಡಿ, ಮನೆಯಲ್ಲಿ ಸಿಂಪಡಿಸಿ ಹಾಗೂ ಇರುವೆಗಳಿಗೆ ಬೆಲ್ಲವನ್ನು ನೀಡುವುದರಿಂದ ನಿಮಗೆ ಧನಾತ್ಮಕ ಶಕ್ತಿ ಸಿಗುತ್ತದೆ. ನಿಮ್ಮ ರಾಶಿಯವರಿಗೆ ಲಕ್ಷ್ಮಿ ಮಂತ್ರ: ಓಂ ಏಂ ಹ್ರೀಂ ಏಂ ನಮಃ
ಕನ್ಯಾ ರಾಶಿ: ಸ್ನೇಹಿತರೇ, ಈ ರಾಶಿಯ ಜನರು ದೀಪಾವಳಿ ಲಕ್ಷ್ಮಿ ದೇವಿಯ ಪೂಜೆಯ ಸಂದರ್ಭದಲ್ಲಿ ನೀವು ಲಕ್ಷ್ಮಿ ಸ್ತುತಿ, ಹಾಗೂ ಬೀಜ ಮಂತ್ರಗಳನ್ನು ಬರೆಯುವ ಮೂಲಕ ಪೂಜೆ ಸಲ್ಲಿಸಿದರೇ ಬಹಳ ಒಳ್ಳೆಯದು. ಸಾಂಬ್ರಾಣಿ, ಗುಲಾಬಿ ವಾಸನೆಯ ಸುಗಂಧ ದ್ರವ್ಯ, ಕಪ್ಪು ಎಳ್ಳು, ಕಮಲ ಗಿಡದ ಎಲೆಗಳನ್ನು ಅರ್ಪಿಸಿ ತಾಯಿ ಲಕ್ಷ್ಮಿ ದೇವಿಗೆ ಪೂಜೆಯನ್ನು ಸಲ್ಲಿಸಿ. ಇನ್ನು ಈ ದೀಪಾವಳಿಯ ಸಂದರ್ಭದಲ್ಲಿ ಬೇಸನ್ ಲಾಡು , ಗೋಧಿ, ಕಪ್ಪು ಬಟ್ಟೆ, ಬೆಲ್ಲವನ್ನು ದಾನ ಮಾಡುದರಿಂದ ನಿಮಗೆ ಆದಾಯ ಹೆಚ್ಚಾಗಿ ಲಾಭ ಪಡೆಯಬಹುದು. ನಿಮ್ಮ ರಾಶಿಯವರಿಗೆ ಲಕ್ಷ್ಮಿ ಮಂತ್ರ: ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್ ಪ್ರಸೀದ್ ಶ್ರೀಂ ಹ್ರೀಂ ಶ್ರೀಂ ಓಂ ಮಹಾಲಕ್ಷ್ಮಯೈ ನಮಃ
ತುಲಾ ರಾಶಿ: ಸ್ನೇಹಿತರೇ, ಈ ರಾಶಿಯ ಜನರು ದೀಪಾವಳಿ ಲಕ್ಷ್ಮಿ ದೇವಿಯ ಪೂಜೆಯ ಸಂದರ್ಭದಲ್ಲಿ ಅರ್ಗಲಾ ಮತ್ತು ಸಿದ್ಧ ಕುಂಜಿಕಾ ಸ್ತೋತ್ರವನ್ನು 51 ಬಾರಿ ಪಠಿಸಿ ಪೂಜೆ ಸಲ್ಲಿಸುವುದರಿಂದ ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು. ಇನ್ನು ಪೂಜೆಯ ಸಮಯದಲ್ಲಿ ಗುಲಾಬಿ ಬಣ್ಣದ ಸೀರೆ, ಪಂಚರತ್ನಗಳು, ಗುಲಾಬಿ, ಗುಲಾಬಿ ವಾಸನೆಯ ಸುಗಂಧ ದ್ರವ್ಯ, ಕಮಲದ ಎಲೆ, ದಾಳಿಂಬೆ ಹಣ್ಣು ಮತ್ತು ಭತ್ತದ ಗೊನೆಗಳನ್ನು ಬಳಸಿಕೊಂಡು ಪೂಜೆ ಸಲ್ಲಿಸುವುದು ಬಹಳ ಶ್ರೇಷ್ಠ ಎನಿಸಿದೆ. ಇನ್ನು ಈ ದೀಪಾವಳಿಯ ಸಂದರ್ಭದಲ್ಲಿ ನೀವು ಒಂದು ಬಿಳಿ ಹಸುವಿಗೆ ಆಹಾರವನ್ನು ನೀಡಿ, ಅಕ್ಕಿ ಮತ್ತು ಸಾಕರೆಯನ್ನು ಬಡವರಿಗೆ ದಾನ ಮಾಡಿ, ಅಷ್ಟೇ ಅಲ್ಲದೇ ಆಳದ ಮರದ ಬೇರಿಗೆ ನೀರನ್ನು ಅರ್ಪಿಸುವುದರಿಂದ ಒಳ್ಳೆಯ ಫಲ ಸಿಗುತ್ತದೆ. ನಿಮ್ಮ ರಾಶಿಯವರಿಗೆ ಲಕ್ಷ್ಮಿ ಮಂತ್ರ: ಓಂ ಮಹಾಲಕ್ಷ್ಮಯೈ ಚ ವಿದ್ಮಹೇ ವಿಷ್ಣು ಪತ್ನೈ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್
ವೃಶ್ಚಿಕ ರಾಶಿ: ಸ್ನೇಹಿತರೇ, ಈ ರಾಶಿಯ ಜನರು ದೀಪಾವಳಿ ಲಕ್ಷ್ಮಿ ದೇವಿಯ ಪೂಜೆಯ ಸಂದರ್ಭದಲ್ಲಿ ನೀವು ಭಗವಾನ್ ಮಹಾ ವಿಷ್ಣುವಿನ ಸ್ತುತಿ ಮತ್ತು ಶ್ರೀ ಸ್ತುತಿಯನ್ನು 51 ಬಾರಿ ಪಠನೆ ಮಾಡಿ. ಇನ್ನು ತಾಯಿ ಲಕ್ಷ್ಮಿ ದೇವಿಗೆ ಪೂಜೆ ಮಾಡುವ ಸಮಯದಲ್ಲಿ ಕೆಂಪು ಬಟ್ಟೆ, ದಾಳಿಂಬೆ, ಮಲ್ಲಿಗೆ ವಾಸನೆಯ ಸುಗಂಧ ದ್ರವ್ಯ ಮತ್ತು ಕಮಲದ ಹೂವುಗಳನ್ನು ಪೂಜೆಯಲ್ಲಿ ಬಳಸಿ. ಇನ್ನು ನಿಮ್ಮ ರಾಶಿಯವರು ಹೆಚ್ಚಿನ ಲಾಭ ಪಡೆಯಲು ಬೆಲ್ಲ ಮತ್ತು ಎಳ್ಳನ್ನು ಬಳಸಿ ತಯಾರಿಸಿರುವ ಸಿಹಿ ತಿನಿಸುಗಳನ್ನು ದಾನ ಮಾಡಿ, ತಾಮ್ರ ಪಾತ್ರೆಗಳು, ಕನ್ನಡಿ ಮತ್ತು ಕೆಂಪು ಬಟ್ಟೆಗಳನ್ನು ದಾನ ಮಾಡಿ. ಇನ್ನು ಅಷ್ಟೇ ಅಲ್ಲದೇ, ಈ ಸಮಯದಲ್ಲಿ ಎಲ್ಲವೂ ಒಳ್ಳೆಯದಾಗಲಿ ಎಂದು ಬೇಡಿಕೊಂಡು, ಮೀನುಗಳಿಗೆ ಬೆಲ್ಲ ಮಿಶ್ರಿತ ಆಹಾರವನ್ನು ದಾನ ಮಾಡಿ, ಸಾಧ್ಯವಾದರೇ ಕೆಂಪು ಮೆಣಸಿನ ಕಾಯಿಯನ್ನು ತಿನ್ನಬೇಡಿ. ಮಡಿಕೆ ಮತ್ತು ಕನ್ನಡಿಯನ್ನು ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ. ನಿಮ್ಮ ರಾಶಿಯವರಿಗೆ ಲಕ್ಷ್ಮಿ ಮಂತ್ರ: ಓಂ ಏಂ ಹ್ರೀಂ ಶ್ರೀಂ ಕ್ಲೀಂ ಅಷ್ಟಲಕ್ಷ್ಮಯೈ ಹ್ರೀಂ ಸಿದ್ಧಯೇ ಮಮ ಗೃಹೇ ಆಗಚ್ಚಾಗಚ್ಚ ನಮಃ ಸ್ವಾಹಾ
ಧನು ರಾಶಿ: ಸ್ನೇಹಿತರೇ, ಈ ರಾಶಿಯ ಜನರು ದೀಪಾವಳಿ ಲಕ್ಷ್ಮಿ ದೇವಿಯ ಪೂಜೆಯ ಸಂದರ್ಭದಲ್ಲಿ ಅಪರಾಜಿತಾ ಗಿಡದ ಬೇರುಗಳು, ಗುಲಾಬಿ ವಾಸನೆಯ ಸುಗಂಧ ದ್ರವ್ಯ, ದಾಳಿಂಬೆ ಹಣ್ಣು, ಜೇನು ತುಪ್ಪ, ಕಪ್ಪು ಎಳ್ಳನ್ನು ಹಾಗೂ ಕಮಲವನ್ನು ಅರ್ಪಿಸಿ ತಾಯಿ ಲಕ್ಷ್ಮಿ ದೇವಿಯ ಪೂಜೆ ಮಾಡಿ. ಈ ವಿಶೇಷ ಸಂದರ್ಭದಲ್ಲಿ ಬಾಳೆಹಣ್ಣು, ಬೆಲ್ಲ, ಗೋಧಿ, ಬೇಸನ್ ಲಾಡುಗಳು ಹಾಗೂ ಕಡಲೆಹಿಟ್ಟನ್ನು ದಾನ ಮಾಡಿ. ನಿಮ್ಮ ರಾಶಿಯವರಿಗೆ ಲಕ್ಷ್ಮಿ ಮಂತ್ರ: ಓಂ ಮಹಾಲಕ್ಷ್ಮಯೈ ಚ ವಿದ್ಮಹೇ ವಿಷ್ಣು ಪತ್ನೈ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್.
ಮಕರ ರಾಶಿ: ಸ್ನೇಹಿತರೇ, ಈ ರಾಶಿಯ ಜನರು ದೀಪಾವಳಿ ಲಕ್ಷ್ಮಿ ದೇವಿಯ ಪೂಜೆಯ ಸಂದರ್ಭದಲ್ಲಿ ನೀವು ಶ್ರೀ ಸೂಕ್ತವನ್ನು 101 ಬಾರಿ ಪಠನೆ ಮಾಡಿ, ಅಪರಾಜಿತಾ ಗಿಡದ ಬೇರು, ಕಪ್ಪು ಎಳ್ಳು ಹಾಗೂ ಕುಂಕುಮ ಅರ್ಪಿಸಿ ತಾಯಿ ಲಕ್ಷ್ಮಿ ದೇವಿಯ ಪೂಜೆ ಮಾಡಿ. ಈ ವಿಶೇಷ ಸಂದರ್ಭದಲ್ಲಿ ಕಬ್ಬಿಣದ ವಸ್ತು, ಎಣ್ಣೆಯುಕ್ತ ಆಹಾರ, ಹಾಗೂ ಕಪ್ಪು ಬಟ್ಟೆಯನ್ನು ದಾನ ಮಾಡಿ. ಈ ಸಮಯದಲ್ಲಿ ನೀವು 12 ಬಾದಾಮಿಗಳನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ, ಒಂದು ಕಬ್ಬಿಣನ ಪೆಟ್ಟಿಗೆಯಲ್ಲಿ ನಿಮ್ಮ ಮನೆಯಲ್ಲಿರುವ ಕತ್ತಿಲಿನ ಸ್ಥಳದಲ್ಲಿ ಇಡಿ, ಎಲ್ಲವೂ ಒಳ್ಳೆಯದಾಗುತ್ತದೆ. ನಿಮ್ಮ ರಾಶಿಯವರಿಗೆ ಲಕ್ಷ್ಮಿ ಮಂತ್ರ: ಓಂ ಹ್ರೀಂ ಶ್ರೀಂ ಕ್ಲೀಂ ಮಹಾಲಕ್ಷ್ಮೀ ನಮಃ.
ಕುಂಭ ರಾಶಿ: ಸ್ನೇಹಿತರೇ, ಈ ರಾಶಿಯ ಜನರು ದೀಪಾವಳಿ ಲಕ್ಷ್ಮಿ ದೇವಿಯ ಪೂಜೆಯ ಸಂದರ್ಭದಲ್ಲಿ ನೀವು ಶಮಿ ಎಲೆ, ಅಪರಾಜಿತಾ ಗಿಡದ ಬೇರು, ಭತ್ತದ ಗೊನೆ, ಕಮಲ, ಮಲ್ಲಿಗೆ ವಾಸನೆಯ ಸುಗಂಧ ದ್ರವ್ಯವನ್ನು ಅರ್ಪಿಸಿ ತಾಯಿ ಲಕ್ಷ್ಮಿ ದೇವಿಯ ಪೂಜೆ ಮಾಡಿ. ಈ ವಿಶೇಷ ಸಂದರ್ಭದಲ್ಲಿ ಪುಟ್ಟ ಹೆಣ್ಣು ಮಕ್ಕಳಿಗೆ ಸಾದ್ಯವಾದ ಉಡುಗೊರೆ ನೀಡಿ, ಕಪಿಲ ಹಸುವಿಗೆ ಹಸಿ ಹುಲ್ಲನ್ನು ನೀಡಿ. ಈ ಸಮಯದಲ್ಲಿ ನೀವು ಸಕ್ಕರೆಯನ್ನು ತೆಗೆಊದ್ಕೊಂಡು ಒಂದು ಡಬ್ಬಿಯಲ್ಲಿ ಹಾಕಿ, ನೆಲದನ್ನು ಹೂ’ತುಬಿಡಿ, ಎಲ್ಲವೂ ಒಳ್ಳೆಯದಾಗುತ್ತದೆ. ನಿಮ್ಮ ರಾಶಿಯವರಿಗೆ ಲಕ್ಷ್ಮಿ ಮಂತ್ರ: ಓಂ ಹ್ರೀಂ ಏಂ ಕ್ಲೀಂ ಶ್ರೀಂ’ ಮಂತ್ರವನ್ನು ಕಮಲದ ಬೀಜದ ಹಾರವನ್ನು ಹಿಡಿದು ಪಠನೆ ಮಾಡಿ.
ಮೀನಾ ರಾಶಿ: ಸ್ನೇಹಿತರೇ, ಈ ರಾಶಿಯ ಜನರು ದೀಪಾವಳಿ ಲಕ್ಷ್ಮಿ ದೇವಿಯ ಪೂಜೆಯ ಸಂದರ್ಭದಲ್ಲಿ ನೀವು ವೀಳ್ಯದೆಲೆ, ಕರ್ಪೂರ, ಒಂದೇ ಕಣ್ಣನ್ನು ಹೊಂದಿರುವ ತೆಂಗಿನಕಾಯಿ, ಬಿಳಿ ಬಣ್ಣದ ಹೂವುಗಳು, ಕೊತ್ತಂಬರಿ, ಅಕ್ಷತೆ, ಏಲಕ್ಕಿ ಮತ್ತು ಪಂಚ ರತ್ನಗಳನ್ನು ಅರ್ಪಿಸಿ ತಾಯಿ ಲಕ್ಷ್ಮಿ ದೇವಿಯ ಪೂಜೆ ಮಾಡಿ. ಈ ವಿಶೇಷ ಸಂದರ್ಭದಲ್ಲಿ ಬೇಳೆ, ಕಡಲೆ ಹಿಟ್ಟು, ಬಾಳೆಹಣ್ಣು, ಬೆಲ್ಲ, ಗೋಧಿ ನೀಡಿ. ಈ ಸಮಯದಲ್ಲಿ ಬೆಳ್ಳಿ ಪಾತ್ರೆಯಲ್ಲಿ ನೀರು ಕುಡಿಯಿರಿ, ಎಲ್ಲವೂ ಒಳ್ಳೆಯದಾಗುತ್ತದೆ. ನಿಮ್ಮ ರಾಶಿಯವರಿಗೆ ಲಕ್ಷ್ಮಿ ಮಂತ್ರ: ಓಂ ಹ್ರೀಂ ಕ್ಲೀಂ ಶ್ರೀಂ ಶ್ರೀಯೇ ನಮಃ